ದರ್ಶನ್‌ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು, ಕಾನೂನು ಪ್ರಕಾರ ಶಿಕ್ಷೆಯಾಗಲಿ: ಆರ್‌. ಅಶೋಕ್

Published : Jun 13, 2024, 12:32 PM IST
ದರ್ಶನ್‌ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು, ಕಾನೂನು ಪ್ರಕಾರ ಶಿಕ್ಷೆಯಾಗಲಿ: ಆರ್‌. ಅಶೋಕ್

ಸಾರಾಂಶ

ಮೃತ ರೇಣುಕಾಸ್ವಾಮಿ ಮೇಲೆ ಯಾವುದೇ ದೂರು ಇಲ್ಲ. ಏನೋ‌ ಮೆಸೇಜ್ ಮಾಡಿದ ಅಂತ ಸಾಯಿಸೋದಾ? ಸಣ್ಣ, ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿದ್ದು ಸರಿಯಲ್ಲ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ 

ಬೆಂಗಳೂರು(ಜೂ.13):  ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕೊಲೆಯಾದ ರೇಣುಕಾಸ್ವಾಮಿ ಹೆಂಡತಿ ನೋಡಿದರೆ ದುಃಖ ಆಗ್ತದೆ. ಅವಳು ಗರ್ಭೀಣಿ, ನೋಡಿ ನೋವಾಯಿತು. ರೇಣುಕಾಸ್ವಾಮಿ ಅಮಾಯಕ, ಆತನ ದೇಹ ನೋಡಿ ಅಯ್ಯೋ ಅನಿಸಿತು. ಮೆಸೇಜ್ ವಿಚಾರಕ್ಕೆ ಪೊಲೀಸರಿಗೆ ದೂರು ನೀಡಬಹುದಿತ್ತು. ಪೊಲೀಸರು ನೋಡ್ಕೊತಾ ಇದ್ರು. ಮತ್ತೆ ತಪ್ಪು ಆಗದಂತೆ ಪೊಲೀಸರು ನೋಡ್ತಾ ಇದ್ರು. ಆದರೆ ದರ್ಶನ್‌ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು. ಯಾರೇ ಆಗಿರಲಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ತಿಳಿಸಿದ್ದಾರೆ. 

ನಟ ದರ್ಶನ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್‌. ಅಶೋಕ್ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ 13 ಜನ ಬಂಧನವಾಗಿದೆ ಎಂದು ತಿಳಿಸಿದ್ದಾರೆ. 

ದರ್ಶನ್ ಹೀರೋ ಅಲ್ಲ ವಿಲನ್: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ಡಿ ಬಾಸ್ ಗ್ಯಾಂಗ್ ವಿಕೃತಿ! ಏನಿದು ಕರಾಳ ಕಥೆ?

ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅಶೋಕ್‌, ಈ ಸ್ಟೇಷನ್ ಕಾಶ್ಮಿರದಲ್ಲಿ ಇದೆಯಾ?. ಉಗ್ರಗಾಮಿಗಳು ಬಂದು ಅಟ್ಯಾಕ್ ಮಾಡ್ತಾರಾ?. ರಕ್ಷಣೆ ಹೆಚ್ಚಿಸಬೇಕಿದ್ದರೆ ಪೊಲೀಸ್ ಫೋರ್ಸ್ ಜಾಸ್ತಿ ಮಾಡ್ಕೋಬೇಕಿತ್ತು. ಹತ್ತು ಪೊಲೀಸ್ ವ್ಯಾನ್ ಹೆಚ್ಚು ಹಾಕಬೇಕಿತ್ತು. ಮಾಧ್ಯಮ ಚಿತ್ರಿಕರಣಕ್ಕೆ ಅವಕಾಶ ನೀಡದೆ ಇರೋದು ಸರಿಯಲ್ಲ. ಕಾನೂನು ಸುವ್ಯವಸ್ಥೆ ಸರ್ಕಾರದ ಕೈಲಿ ಇಲ್ಲ. ದರ್ಶನ್ ವಿಚಾರದಲ್ಲಿ ಫಿಲಂ ಚೇಂಬರ್ ಪ್ರಮುಖರು ಕ್ರಮ ತಗೋಬೇಕು. ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. 

ದರ್ಶನ್ ಪ್ರಕರಣ: ಸೆಲೆಬ್ರಿಟಿ ಆಗಲಿ, ಯಾರೇ ಆಗಲಿ, ಕಾನೂನು ಕೈಗೆ ತೆಗೆದುಕೊಳ್ಳುವುದೇ ಅಪರಾಧ, ಬೊಮ್ಮಾಯಿ

ಮೃತ ರೇಣುಕಾಸ್ವಾಮಿ ಮೇಲೆ ಯಾವುದೇ ದೂರು ಇಲ್ಲ. ಏನೋ‌ ಮೆಸೇಜ್ ಮಾಡಿದ ಅಂತ ಸಾಯಿಸೋದಾ? ಸಣ್ಣ, ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿದ್ದು ಸರಿಯಲ್ಲ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. 

ರೇಣುಕಾಸ್ವಾಮಿ ಅಮಾಯಕ, ಆತನ ದೇಹ ನೋಡಿ ಅಯ್ಯೋ ಅನಿಸಿತು. ಆತನ ಪತ್ನಿ ಐದು ತಿಂಗಳ ಗರ್ಭಿಣಿ ಪಾಪ. ದರ್ಶನ್ ಸೈಬರ್ ಕ್ರೈಂಗೆ ದೂರು ಕೊಡಬಹುದಿತ್ತು. ಹಾಗೆ ಮಾಡದೇ ದರ್ಶನ್ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. 13 - 15 ಜನ ಹೊಡೆದು ಸಾಯಿಸಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಸರಿಯಾದ ಕ್ರಮ ತಗೋಬೇಕು ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ