ಲ್ಯಾಬ್‌ಗೆ ಬೆಂಕಿ ಪ್ರಕರಣ: ಬಿಬಿಎಂಪಿ ಸಿಬ್ಬಂದಿಇಗೆ ಕ್ಲೀನ್‌ ಚಿಟ್?

Published : Aug 19, 2023, 04:32 AM IST
ಲ್ಯಾಬ್‌ಗೆ ಬೆಂಕಿ ಪ್ರಕರಣ: ಬಿಬಿಎಂಪಿ ಸಿಬ್ಬಂದಿಇಗೆ ಕ್ಲೀನ್‌ ಚಿಟ್?

ಸಾರಾಂಶ

ಬಿಬಿಎಂಪಿ ಗುಣನಿಯಂತ್ರಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯಕ್ಕಿಂತ ಪ್ರಯೋಗಾಲಯದಲ್ಲಿದ್ದ ರಾಸಾಯನಿಕ ವಸ್ತುಗಳಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬ ಅಂಶ ಪತ್ತೆಯಾಗಿದೆ.

ಬೆಂಗಳೂರು (ಆ.19) :  ಬಿಬಿಎಂಪಿ ಗುಣನಿಯಂತ್ರಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯಕ್ಕಿಂತ ಪ್ರಯೋಗಾಲಯದಲ್ಲಿದ್ದ ರಾಸಾಯನಿಕ ವಸ್ತುಗಳಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬ ಅಂಶ ಪತ್ತೆಯಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿ 9 ಮಂದಿಗೆ ಗಾಯಗಳಾಗಿದ್ದವು. ಅದರಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ದುರ್ಘಟನೆ ಕುರಿತಂತೆ ಪೊಲೀಸ್‌ ಇಲಾಖೆಯಿಂದ ತನಿಖೆ ನಡೆಯುತ್ತಿದ್ದರೂ, ಬಿಬಿಎಂಪಿಯಿಂದ ಆಂತರಿಕ ತನಿಖೆ ನಡೆಸಲಾಗುತ್ತಿದೆ. ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಬಿಬಿಎಂಪಿ ಸಿಬ್ಬಂದಿ ಆನಂದ್‌ ಹಾಗೂ ವಿಕ್ಟೋರಿಯಾ ವೈದ್ಯರ ಹೇಳಿಕೆ ಸೇರಿದಂತೆ ಇನ್ನಿತರ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿದೆ. ಸದ್ಯದ ಮಾಹಿತಿಯಂತೆ ಅಗ್ನಿ ಅವಘಡಕ್ಕೆ ಪ್ರಯೋಗಾಲಯದಲ್ಲಿದ್ದ ರಾಸಾಯನಿಕಕ್ಕೆ ಬೆಂಕಿ ತಗುಲಿದ್ದೇ ಕಾರಣ ಎಂದು ತಿಳಿದುಬಂದಿದೆ.

 

BBMP: ಪಾಲಿಕೆ ಲ್ಯಾಬ್‌ಗೆ ಬೆಂಕಿ: ದೂರು ಕೊಟ್ಟಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

ಅಗ್ನಿ ದುರಂತ ಸಂಭವಿಸಿದ್ದು ಕೇವಲ ಆಕಸ್ಮಿಕವಷ್ಟೇ. ಇದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಪ್ರಯೋಗಾಲಯದಲ್ಲಿದ್ದ ಬೆಂಜಿನ್‌ ಕೆಮಿಕಲ್‌ ಮಿಕ್ಸ್‌ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ. ಅದರ ಜತೆಗೆ ಇಡೀ ಕೊಠಡಿಯು ರಾಸಾಯನಿಕ ವಸ್ತುಗಳಿಂದ ತುಂಬಿದ್ದು, ವೇಗವಾಗಿ ಬೆಂಕಿ ಹರಡಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ, ಬೆಂಕಿ ಹೊತ್ತಿಕೊಂಡಿದ್ದು ಶೇ.20ರಷ್ಟುಮಾತ್ರವಾಗಿದ್ದರೂ, ಬೆಂಜಿನ್‌ ಕೆಮಿಕಲ್‌ನಿಂದ ಕೊಠಡಿಯೊಳಗಿನ ಉಷ್ಣಾಂಶ ಹೆಚ್ಚಾಗಿ ಬೆಂಕಿ ಎಲ್ಲೆಡೆ ಆವರಿಸುತು. ಪ್ರಯೋಗಾಲಯದೊಳಗೆ 300 ಡಿಗ್ರಿ ಸೆಲ್ಷಿಯಸ್‌ನಷ್ಟುಉಷ್ಣಾಂಶ ಹೆಚ್ಚಾಗಿದೆ. ಹೀಗಾಗಿ ಬೆಂಕಿಗಿಂತ ಒಳಭಾಗದಲ್ಲಿ ಹೆಚ್ಚಾದ ಉಷ್ಣಾಂಶದಿಂದಾಗಿ ಪ್ರಯೋಗಾಲಯದಲ್ಲಿ ಇದ್ದವರ ದೇಹ ಸುಟ್ಟಿದೆ ಎಂದು ತಿಳಿದುಬಂದಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

News Hour: ‘ಇವರನ್ನು ಲೂಟಿ ಹೊಡೆಯೋಕೆ ಬಿಟ್ಟು, ನಾನು ವಿದೇಶದಲ್ಲಿ ಇರಬೇಕಾ?’, ಕುಮಾರಸ್ವಾಮಿ ಕೆಂಡ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್