ಹೆಸರಿಗಷ್ಟೇ ರಾಜಹಂಸ ಒಳಗಡೆ ಕುಳಿತರೆ ಡಗಡಗ ಅಂತಾ ಪರಮಹಿಂಸೆ ಕೊಡುತ್ತೆ ಬಸ್!

Published : Dec 19, 2023, 08:57 AM ISTUpdated : Dec 19, 2023, 09:04 AM IST
ಹೆಸರಿಗಷ್ಟೇ ರಾಜಹಂಸ ಒಳಗಡೆ ಕುಳಿತರೆ ಡಗಡಗ ಅಂತಾ ಪರಮಹಿಂಸೆ ಕೊಡುತ್ತೆ ಬಸ್!

ಸಾರಾಂಶ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಬಳಿಕ ಯಾವುದೇ ಅಭಿವೃದ್ಧಿ ಕೆಲಸಕ್ಕೂ ಖಜಾನೆ ಖಾಲಿಯಾಗಿದೆ. ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕರಿಂದ ಬಸ್ ಗಳು ನೂಕುನುಗ್ಗಲು ತಳ್ಳಾಟ ನೂಕಾಟದಿಂದ ಅದೆಷ್ಟೋ ಬಸ್‌ಗಳು ಬಾಗಿಲು ಮುರಿದಿವೆ. ಕಿಟಕಿ ಗಾಜು ಒಡೆದುಹೋಗಿವೆ. ಆದರೆ ಅವೆಲ್ಲ ಸರಿಪಡಿಸೋಕೆ ದುಡ್ಡು ಇಲ್ಲದಂತಾಗಿದೆ.

ಬೆಂಗಳೂರು (ಡಿ.19): ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಬಳಿಕ ಯಾವುದೇ ಅಭಿವೃದ್ಧಿ ಕೆಲಸಕ್ಕೂ ಖಜಾನೆ ಖಾಲಿಯಾಗಿದೆ. ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕರಿಂದ ಬಸ್ ಗಳು ನೂಕುನುಗ್ಗಲು ತಳ್ಳಾಟ ನೂಕಾಟದಿಂದ ಅದೆಷ್ಟೋ ಬಸ್‌ಗಳು ಬಾಗಿಲು ಮುರಿದಿವೆ. ಕಿಟಕಿ ಗಾಜು ಒಡೆದುಹೋಗಿವೆ. ಆದರೆ ಅವೆಲ್ಲ ಸರಿಪಡಿಸೋಕೆ ದುಡ್ಡು ಇಲ್ಲದಂತಾಗಿದೆ.

ಪ್ರಯಾಣಿಕರ ಪರಿಸ್ಥಿತಿ ಹೇಗಾಗಿದೆಯೆಂದರೆ ದುಡ್ಡು ಕೊಟ್ಟು ರಾಜಹಂಸ ಬಸ್‌ನಲ್ಲಿ ಸುಖವಾಗಿ ಪ್ರಯಾಣ ಮಾಡೋಣ ಅಂತ ಹತ್ತಿದ್ರೂ ಒಳಗಡೆ ಪರಮಹಿಂಸೆ ಅನುಭವಿಸಬೇಕಾಗಿದೆ. ಕೆಎಸ್ಆರ್‌ಟಿಸಿ ಬಸ್‌ಗಳು ಬಹುತೇಕ ಫಿಟ್ ಇಲ್ಲ. ಯಾವಾಗ ಬಾಗಿಲು ಮುರಿದುಬಿಳುವುದೋ, ಚಕ್ರ ಕಳಚಿಕೊಳ್ಳುವುದೋ ಎಂಬ ಆತಂಕದಲ್ಲೇ ಪ್ರಯಾಣಿಕರು ಪ್ರಯಾಣ ಮಾಡುವಂತಾಗಿದೆ. 

ರೂಪಾ ಮೌದ್ಗಿಲ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

ಹೆಸರಿಗೆ ರಾಜಹಂಸ: ಒಳಗಡೆ ಡಗಡಗ ಸದ್ದು!

ರಾಜಹಂಸ ಬಸ್‌ನಲ್ಲಿ ರಾಜರಂತೆ ಪ್ರಯಾಣ ಮಾಡಬಹುದು ಅಂತಾ ಬರೋ ಪ್ರಯಾಣಿಕರಿಗೆ ಶಾಕ್. ಬಸ್‌ನಲ್ಲಿ ಸ್ವಲ್ಪ ಯಾಮಾರಿದ್ರೂ ಪಾತಾಳ ಸೇರುವುದು ಗ್ಯಾರಂಟಿ. ಹೆಸರಿಗಷ್ಟೇ ಇದು ರಾಜಹಂಸ ಬಸ್ ಒಳಹೋಗಿ ಯಮಾರಿ ಕಾಲು ಇಟ್ರೆ ಹೊಗೆನೇ.  ಯಮಾರಿದ್ರೆ ಸೀಟಲ್ಲ ಕಾಲಿಡೋಕೆ ಮುಂಚೆ ನೀವು ಹೋಗೋದು ರೋಡಿಗೆನೆ. 

ಮೈಸೂರು ಬೆಂಗಳೂರು ನಡುವೆ ಸಂಚರಿಸುವ ಡಕೋಟ ರಾಜಹಂಸ ಬಗ್ಗೆ ಪ್ರಯಾಣಿಕರ ಆಕ್ರೋಶ. ಬಸ್ ನಂ KA-09-F4905. ಹೆಸರಿಗೆ ರಾಜಹಂಸ ಬಸ್, ಒಳಗೆ ಕುಳಿತರಿಗೆ ಪರಮಹಿಂಸೆ ಕೊಡೋ ಬಸ್. ಬಸ್ ಒಳಭಾಗದ ಸೀಟ್ ಪಕ್ಕದಲ್ಲಿ ಓಪನ್ ಆದ ಫ್ಲೋರ್ ಬೋರ್ಡ. ಬಸ್ ಚಲಿಸದಂತೆ ಅಲುಗಾಡುವ ಫ್ಲೋರ್ ಬೋರ್ಡ್ . ಗೊತಿಲ್ಲದೆ, ರಾತ್ರಿ ಸಮಯ ಪ್ರಯಾಣಿಸುವ ವೇಳೆ ಫ್ಲೋರ್ ಬೋರ್ಡ್ ಮೇಲೆ ಕಾಲಿಟ್ಟರೆ ಯಮನಪಾದ ಸೇರೋದು ಪಕ್ಕ.

ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್‌ ಮಾಡಲು ರೂಪಾಗೆ 24 ಗಂಟೆ ಟೈಂ ನೀಡಿದ ಸುಪ್ರೀಂ

ಬಸ್ ಸಂಚರಿಸುವ ವೇಗಕ್ಕೆ ಕಿತ್ತು ಬಂದಿರೋ ಫ್ಲೋರ್ ಬೋರ್ಡ್. ಕಿತ್ತುಹೋಗಿದ್ರೂ ಸರಿಪಡಿಸದೇ ಅದೇ ಬಸ್‌ನಲ್ಲಿ ಪ್ರಯಾಣಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರೋ ಸಾರಿಗೆ ನಿಗಮ. ಶಕ್ತಿ ಯೋಜನೆ ಅಡಿ ಒಳಪಡದ ಬಸ್ ಪರಿಸ್ಥಿತಿಯೇ ಹೀಗಾದ್ರೆ ಇನ್ನು ಉಳಿದವು ಕತೆ ಹೆಂಗೆ ಅಂತಿರೋ ಪ್ರಯಾಣಿಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!