ಲಾಕ್‌ಡೌನ್ ಸಡಿಲಿಕೆ ಆಗಿದೆ. ಬಸ್ ಸಂಚಾರ ಇಂದಿನಿಂದ ಶುರುವಾಗಿದೆ. ಬಳ್ಳಾರಿಯಲ್ಲಿ ಬಸ್ ಹತ್ತಲು ಜನ ಮುಗಿ ಬಿದ್ದಿದ್ದಾರೆ. ಅಲ್ಲಿಯ ಚಿತ್ರಣ ಹೀಗಿದೆ ನೋಡಿ..!
ಬೆಂಗಳೂರು (ಮೇ. 19): ಲಾಕ್‌ಡೌನ್ ಸಡಿಲಿಕೆ ಆಗಿದೆ. ಬಸ್ ಸಂಚಾರ ಇಂದಿನಿಂದ ಶುರುವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ಪ್ರಯಾಣಿಕರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದರ ಚಿತ್ರಣ ಇಲ್ಲಿದೆ ನೋಡಿ!
ಲಾಕ್‌ಡೌನ್ ಸಡಿಲಿಕೆ ಆಗಿದೆ. ಬಸ್ ಸಂಚಾರ ಇಂದಿನಿಂದ ಶುರುವಾಗಿದೆ. ಬಳ್ಳಾರಿಯಲ್ಲಿ ಬಸ್ ಹತ್ತಲು ಜನ ಮುಗಿ ಬಿದ್ದಿದ್ದಾರೆ. ಅಲ್ಲಿಯ ಚಿತ್ರಣ ಹೀಗಿದೆ ನೋಡಿ..!
ಚಿತ್ರದುರ್ಗದಿಂದ 6-8 ಬಸ್‌ಗಳು ಬೆಂಗಳೂರಿಗೆ ಸಂಚರಿಸಿದೆ. ಬೆಳಿಗ್ಗೆಯಿಂದಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದರೆ ಬಸ್ ಸಂಚಾರ ಸುಗಮವಾಗಿ ಶುರುವಾಗಿಲ್ಲ.
ದಾವಣಗೆರೆಯಿಂದ ಬೆಂಗಳೂರಿಗೆ 7 ಬಸ್‌ಗಳು ಬುಕ್ ಆಗಿವೆ. ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಕೊಡಲಾಗಿದೆ.
ಬೆಳಗಾವಿ ಬಸ್ ಸ್ಟಾಂಡ್‌ನಲ್ಲಿ ನೂಕು ನುಗ್ಗಲು ಉಂಟಾಗಿದೆ. ಪ್ರಯಾಣಿಕರು ಬಸ್‌ಸ್ಟಾಂಡ್‌ನತ್ತ ದೌಡಾಯಿಸುತ್ತಿದ್ದಾರೆ.
ಬೆಳಿಗ್ಗೆ 7 ರಿಂದ ವಿಜಯಪುರದಲ್ಲಿ ಬಸ್ ಸಂಚಾರ ಶುರುವಾಗಿದೆ. ತುರ್ತು ಕೆಲಸಗಳಿಗೆ ಹೋಗುವವರು ಮಾತ್ರ ಆಗಮಿಸುತ್ತಿದ್ದಾರೆ. ಸಾರ್ವಜನಿಕರು ಅಷ್ಟಾಗಿ ಬರುತ್ತಿಲ್ಲ.
ಹಾಸನ ಬಸ್‌ಸ್ಟಾಂಡ್‌ನತ್ತ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬಸ್‌ಗಳು ಸಂಚಾರಕ್ಕೆ ಸಿದ್ಧವಾಗಿದೆ. ಬಸ್‌ಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪ್ರಯಾಣಿಕರನ್ನು ಚೆಕ್ ಮಾಡಿ ಬಿಡಲಾಗುತ್ತಿದೆ.