
ಬೆಂಗಳೂರು[ನ.17]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಜ್ಯದ 16 ಸಣ್ಣ ಮತ್ತು ಮಧ್ಯಮ ನಗರ-ಪಟ್ಟಣಗಳಲ್ಲಿ ಯಶಸ್ವಿಯಾಗಿ ನಗರ ಸಾರಿಗೆಯನ್ನು ಅನುಷ್ಠಾನಗೊಳಿಸಿರುವ ಉಪಕ್ರಮಕ್ಕೆ ‘ಎಕನಾಮಿಕ್ಸ್ ಟೈಮ್ಸ್ ಗವರ್ನ್‌ಮೆಂಟ್ ಡಾಟ್ ಕಾಂ ಗ್ಲೋಬಲ್ ಮೊಬಿಲಿಟಿ’ ಪ್ರಶಸ್ತಿ ಲಭಿಸಿದೆ.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏಕರೂಪವಾಗಿರಲಿ
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನಾಗಾಲ್ಯಾಂಡ್‌ನ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಮತ್ತು ಬುಡಕಟ್ಟು ಸಚಿವ ತೆಂಜಮ್ ಇಮ್ನಾ ಅಲಾಂಗ್ ಮತ್ತು ಎಕನಾಮಿಕ್ಸ್ ಟೈಮ್ಸ್ ಗವರ್ನ್‌ಮೆಂಟ್ ಡಾಟ್ ಕಾಂ ಸಂಪಾದಕ ಬಿ.ರಾಧಾಕೃಷ್ಣ ಅವರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ