KSRTC 1,308 ಸಿಬ್ಬಂದಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯ

By Sathish Kumar KH  |  First Published Nov 29, 2024, 2:50 PM IST

ಕೆಎಸ್‌ಆರ್‌ಟಿಸಿ ಸಂಸ್ಥೆಯು 1,308 ನೌಕರರಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯವನ್ನು ಒದಗಿಸಿದೆ. ಈ ವರ್ಗಾವಣೆಯು ವಿವಿಧ ಜಿಲ್ಲೆಗಳಿಂದ ಬಂದ ನೌಕರರಿಗೆ ತಮ್ಮ ಊರಿಗೆ ಹೋಗಲು ಅನುಕೂಲ ಮಾಡಿಕೊಟ್ಟಿದೆ.


ಬೆಂಗಳೂರು (ನ.29): ರಾಜ್ಯದಲ್ಲಿ ವಿವಿಧ ಜಿಲ್ಲೆ ಹಾಗೂ ಪ್ರದೇಶಗಳಿಂದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಹಲವು ವಿಭಾಗಗಳಲ್ಲಿ ನೌಕರಿಗೆ ಸೇರಿದ ಸಾರಿಗೆ ನಿಗಮದ ಸಿಬ್ಬಂದಿ ವಾಪಸ್ ತಮ್ಮ ಊರಿನತ್ತ ಹೋಗಲಾಗದೇ ಪರದಾಡುತ್ತಿದ್ದರು. ಇಂಥವರಿಗೆ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟ ಕೆಎಸ್‌ಆರ್‌ಟಿಸಿ ಸಂಸ್ಥೆಯು ಈವರೆಗೆ 1,308 ನೌಕರರಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯವನ್ನು ಒದಗಿಸಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 2023ರ ಜು.5ರಿಂದ ಡಿ.31ರ 2023ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸದರಿ ಅಂತರ ನಿಗಮ ವರ್ಗಾವಣೆಯಲ್ಲಿ ಈ ಕೆಳಗಿನಂತೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಕೆಲವೊಂದು ವಿಶೇಷ ಪ್ರಕರಣಗಳನ್ನು ಪರಿಗಣಿಸಲು ಇಲ್ಲಿ ಅಂತರ ನಿಗಮ ವರ್ಗಾವಣೆಯನ್ನು ಮಾಡಿಕೊಡಲಾಗಿದೆ.

Tap to resize

Latest Videos

ಸಾರಿಗೆ ನಿಗಮದಲ್ಲಿ ಇದೇ ಪ್ರಥಮ ಬಾರಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪಯಿನಾಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಭಂದಿಸಿದ ಖಾಯಿಲೆಗಳು) ನೌಕರರ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5.ರಷ್ಟು ಮೀಸಲಿರಿಸಲಾಗಿದೆ. ಜೊತೆಗೆ, ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ.5 ರಷ್ಟು ಹುದ್ದೆಗಳನ್ನು ಮೀಸಲಿರಿಸಿದ್ದು, ಒಟ್ಟು ಶೇ.10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದಂತೆ ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ ವರ್ಗಾವಣೆ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 10 ದಿನದಲ್ಲಿ 5 ಬಾಣಂತಿಯರ ಸಾವಿನ ವರದಿ ಮುಚ್ಚಿಟ್ಟ ಸರ್ಕಾರ; ಆರ್. ಅಶೋಕ್!

ಅಂತರ ನಿಗಮ ವರ್ಗಾವಣೆಯ ವಿವರಗಳು: ಸಾರಿಗೆ ಸಂಸ್ಥೆಯಲ್ಲಿ 1,175 ನೌಕರರು ಅಂತರ ನಿಗಮ ಸಾಮಾನ್ಯ ವರ್ಗದಡಿ ವರ್ಗಾವಣೆಗೊಂಡಿದ್ದಾರೆ. ಇನ್ನು 72 ನೌಕರರು ತಮ್ಮ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ವರ್ಗಾವಣೆಗೊಂಡಿದ್ದಾರೆ. ಉಳಿದಂತೆ 61 ನೌಕರರು ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದಳು ಸಂಬಂಧಿಸಿದ ಖಾಯಿಲೆಗಳು) ಪ್ರಕರಣದಲ್ಲಿ ನೌಕರರ ಕೋರಿಕೆ ಪರಿಗಣಿಸಿ ವರ್ಗಾವಣೆಗೊಂಡಿದ್ದಾರೆ.

click me!