ಎಕ್ಸ್‌ಪ್ರೆಸ್‌ ವೇ ಟೋಲ್‌ ತಪ್ಪಿಸಲು ಒನ್‌ವೇನಲ್ಲಿ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌: ಬೈಕ್‌ಗೆ ಗುದ್ದಿ ಸವಾರ ಸಾವು

By Sathish Kumar KHFirst Published Mar 19, 2023, 11:29 AM IST
Highlights

ಬೆಂಗಳೂರು ಮೈಸೂರು ಟೋಲ್‌ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಒನ್‌ವೇನಲ್ಲಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ರಾಜರಾಜೇಶ್ವರಿ ಆಸ್ಪತ್ರೆ ಬಳಿ ಬೈಕ್‌ಗೆ ಗುದ್ದಿದ್ದು, ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ಬೆಂಗಳೂರು (ಮಾ.19): ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಣಿಮಿಣಿಕೆ ಟೋಲ್‌ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಒನ್‌ವೇನಲ್ಲಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಬೈಕ್‌ಗೆ ಗುದ್ದಿದ್ದು, ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಅವಾಂತರದಲ್ಲಿ ಈಗಾಗಲೇ 85ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಆದರೆ, ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್‌ ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ. ಆದ್ದರಿಂದ ವಾಹನ ಸವಾರರು ಪರದಾಡುತತಿದ್ದು, ಎಲ್ಲಿ ಸರ್ವಿಸ್‌ ರಸ್ತೆಯಿದೆ, ಎಲ್ಲಿ ಟೋಲ್‌ ರಸ್ತೆಯಿದೆ ಎಂಬುದು ಗೊತ್ತಾಗದೆ ಪರದಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಭಾರಿ ಅನಾನುಕೂಲ ಉಂಟಾಗುತ್ತಿದೆ. ಈಗ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೂ ಕೂಡ ಹೆದ್ದಾರಿ ಪ್ರಾಧಿಕಾರದ ಎಡವಟ್ಟು ಕಾರಣವಾಗಿದೆ ಎಂಬುದು ಕಮಡುಬರುತ್ತಿದೆ.

ಒಂದೇ ಮಳೆಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಬಣ್ಣ ಬಯಲು: ರಸ್ತೆಯಲ್ಲೇ ಕೆಟ್ಟು ನಿಂತ ವಾಹನಗಳು

ಸರ್ವಿಸ್‌ ರಸ್ತೆಯ ಮಾಹಿತಿ ಫಲಕವೇ ಇಲ್ಲ: ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸರ್ವಿಸ್‌ ರಸ್ತೆಯ ಫಲಕ ಅಥವಾ ಮಾಹಿತಿ ಇಲ್ಲದ್ದರಿಂದ ಕಣಿಮಿಣಿಕೆ ಟೋಲ್‌ಗೇಟ್‌ ಇರುತ್ತ ಸಾಗಿದ್ದಾರೆ. ಆದರೆ, ಅಲ್ಲಿ ಟೋಲ್‌ ಕಟ್ಟದ ವಾಹನಗಳಿಗೆ ಪ್ರವೇಶ ಇಲ್ಲದ್ದರಿಂದ ಪುನಃ ಅದೇ ರಸ್ತೆಯಲ್ಲಿ ಒನ್‌ವೇ ಮೂಲಕ ಬಸ್‌ ಅನ್ನು ವಾಪಸ್‌ ತೆಗೆದುಕೊಂಡು ಹೋಬೇಕಿತ್ತು. ಬಸ್‌ನ ಚಾಲಕ ಒನ್‌ವೇನಲ್ಲಿ ಬರುತ್ತಿದ್ದ ವಾಹನಗಳನ್ನು ಲೆಕ್ಕಿಸದೇ ಸರ್ವಿಸ್‌ ರಸ್ತೆಗೆ ಹೋಗಲು ವಾಪಸ್‌ ಬರುವಾಗ ಬೈಕ್‌ಗೆ ಗುದ್ದಿದೆ. ಇನ್ನು ಬೈಕ್‌ನಲ್ಲಿ ಇಬ್ಬರು ಸವಾರರಿದ್ದು ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಮತ್ತೊಮ್ಮ ವ್ಯಕ್ತಿಗೆ ಗಂಭೀರ ಗಾಯ: ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಸಾವಿ ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇನ್ನು ಕೂಡಲೇ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಆಂಬುಲೆನ್ಸ್‌ ಮೂಲಕ ಹತ್ತಿರದಲ್ಲಿಯೇ ಇದ್ದ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಗಾಯಾಳುಗೆ ಚಿಕಿತ್ಸೆ ಮುಂದುವರೆದಿದ್ದು, ವೈದ್ಯರು ನಿಗಾವಹಿಸಿದ್ದಾರೆ. ಇನ್ನು ಅಪಘಾತದ ಕಾರಣದಿಂದ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಕೆಲಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ಟೋಲ್‌ ಗೇಟ್‌ ಮುರಿದು ಸಾಗಿದ ವಾಹನಗಳು:  ಹೆದ್ದಾರಿ ಪ್ರಾಧಿಕಾರದಿಂದ ಸರ್ವಿಸ್‌ ರಸ್ತೆ ನಿರ್ಮಾಣ ಮಾಡದಿದ್ದರೂ ಕಾನೂನು ನಿಯಮಗಳನ್ನು ಮೀರಿ ನೀವು ಟೋಲ್‌ ಸಂಗ್ರಹ ಮಾಡುತ್ತಿದ್ದೀರಿ. ನೀವು ಸರ್ವಿಸ್‌ ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡುವವರೆಗೂ ಟೋಲ್‌ ಕಟ್ಟುವುದಿಲ್ಲ ಎಂದು ವಾನ ಸವಾರರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಟೋಲ್‌ ಸಂಗ್ರಹ ಸಿಬ್ಬಂದಿಯ ವಿರುದ್ಧ ಹಲವು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕೆಲವು ವಾಹನಗಳು ಟೋಲ್‌ ಗೇಟ್‌ ಅನ್ನು ಮುರಿದು ಹಣವನ್ನು ಕಟ್ಟದೇ ಹೋದ ಘಟನೆಗಳು ನಡೆದಿವೆ.

ಒಂದೇ ಮಳೆಗೆ ಎಕ್ಸ್‌ಪ್ರೆಸ್‌ ವೇ ಬಣ್ಣ ಬಯಲು:  ರಾಮನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಉದ್ಘಾಟಿಸಿದ 8,500 ಕೋಟಿ ರೂ. ವೆಚ್ಚದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ದುಸ್ಥಿತಿ ಕಂಡು ರಾಜ್ಯದ ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ರಸ್ತೆಯಲ್ಲಿ 3-4 ಅಡಿ ನೀರು ನಿಂತಿದ್ದು, ಕೆಲ ವಾಹನಗಳು ಕೆಟ್ಟು ಹೋದರೆ ಮತ್ತೆ ಕೆಲವು ಸರಣಿ ಅಪಘಾತಕ್ಕೀಡಾಗಿದ್ದವು. 

click me!