ಕೆಎಸ್‌ಆರ್‌ಟಿಸಿ ಬಸ್ ಚಲಿಸುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ.
ವಿಜಯಪುರ (ಮೇ 30): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಚಲಿಸುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ಬಸ್ ಓಡಿಸುವಾಗಲೇ ಡ್ರೈವರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದರಿಂದ ಬಸ್ ಚಾಲಕನಿಲ್ಲದೇ ನಿಯಂತ್ರಣ ತಪ್ಪಿದ ಬಸ್ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ. ಆದರೆ, ಬಸ್ ಕಂಡೆಕ್ಟರ್ (ನಿರ್ವಾಹಕ) ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ಇನ್ನು ಘಟನೆಯು ವಿಜಯಪುರ ಜಿಲ್ಲೆ ಸಿಂದಗಿ ನಗರದಲ್ಲಿ ನಡೆದಿದೆ. ಮುರಿಗೆಪ್ಪ ಅಥಣಿ ಹೃದಯಾಘಾತದಿಂದ ಸಾವನ್ನಪ್ಪಿದ ಡ್ರೈವರ್ ಆಗಿದ್ದಾನೆ. ಇನ್ನು ಬಸ್ ಪೆಟ್ರೋಲ್ ಬಂಕ್‌ಗೆ ನುಗ್ಗಿತ್ತಿದ್ದರೂ ಎಚ್ಚರಿಕೆ ನೀಡದರೂ ಕೇಳದ ಹಿನ್ನೆಲೆಯಲ್ಲಿ ಕಂಡಕ್ಟರ್ ಮುಂದೆ ಹೋಗಿ ನೋಡಿದ್ದಾನೆ. ಆಗ ಕುಸಿದು ಬಿದ್ದಿದ್ದ ಡ್ರೈವರ್‌ನನ್ನು ಪಕ್ಕಕ್ಕೆ ಸರಿಸಿ ಕಂಡಕ್ಟರ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಮುಂದೆ ಆಗುತ್ತಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ.
ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ
ಸಮಯಪ್ರಜ್ಞೆ ಮೆರೆದ ಕಂಡಕ್ಟರ್: ಕಲಬುರಗಿ ಜಿಲ್ಲೆಯ ಅಪ್ಜಲಪುರದಿಂದ ವಿಜಯಪುರಕ್ಕೆ ಹೊರಟಿದ್ದ ಬಸ್‌ನಲ್ಲಿ ಹೆಡ್‌ಲೈಟ್ ಸಮಸ್ಯೆ ಕಾಣಿಸಿಕೊಂಡಿದೆ. ಬಸ್ ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನ ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ಬಸ್ ಅನ್ನು ಕೊಂಡೊಯ್ಯಲಾಗುತ್ತಿತ್ತು. ಆದರೆ, ಈ ವೇಳೆ ದಾರಿ ಮಧ್ಯದಲ್ಲಿ ಚಾಲಕ ಮುರಿಗೆಪ್ಪ ಅಥಣಿಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾನೆ. ಆಗ ಬಸ್ ನಿರ್ವಾಹಕ ಶರಣು ಟಾಕಳಿ ಬಸ್‌ನ ಬ್ರೇಕ್ ಹಿಡಿದು ನಿಲ್ಲಿಸಿದ್ದಾರೆ. ಮತ್ತೊಂದೆಡೆ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೆ ಇರೊದ್ರಿಂದ ಗಾಬರಿಯಿಂದ ಆಗುತ್ತಿದ್ದ ಅಪಾಯವೂ ಕೂಡ ತಪ್ಪಿದಂತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಪ್ಜಲಪುರ ಡಿಪೋ ಅಧಿಕಾರಿ, ಸಿಬ್ಬಂದಿ ಬಸ್‌ನಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೋಸ ಮಾಡಲೆಂದು ಬಂದ ಪತ್ನಿ ಗಂಡನನ್ನೇ ಕೊಂದಳು:
ಕೋಲಾರ (ಮೇ 30): ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷನಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪಡೆದಿದ್ದಾನೆ. ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ದರೂ, ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ದರೂ ತನ್ನ ಮಕ್ಕಳಿಗಾಗಿ ಎಲ್ಲವನ್ನ ಸಹಿಸಿಕೊಂಡಿದ್ದ ಜಾನಪದ ಕಲಾವಿದ ಇಂದು ಪತ್ನಿಯ ಪ್ರಿಯಕರನಿಂದಲೆ ಕೊಲೆಯಾಗಿದ್ದಾನೆ.
ಕಳ್ಳರು ಕದ್ದೊಯ್ದ ಹಣದ ಪೆಟ್ಟಿಗೆ ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಪೊಲೀಸ್ ಶ್ವಾನ ರೂಬಿ
ಜಾನಪದ ಕಲಾವಿದನ ದುರಂತ ಅಂತ್ಯ: ಮೃತ ಕಲಾವಿದ ಕೃಷ್ಣಮೂರ್ತಿ ಸಂಬಂಧಿಕರು ಸೇರಿದಂತೆ ಇಡೀ ಗ್ರಾಮಕ್ಕೆ ಗೊತ್ತಿರುವಂತೆ ಕೃಷ್ಣಮೂರ್ತಿ ಪತ್ನಿಗೆ ಅಕ್ರಮ ಸಂಬಂಧ ಇದ್ದು ಆಕೆಯೆ ಕೊಲೆ ಮಾಡಿಸಿರುವ ಅನುಮಾನ ಎಲ್ಲೆಡೆ ಇತ್ತು.ಅಲ್ಲದೆ ಪ್ರತಿನಿತ್ಯ ಗಲಾಟೆ,ನ್ಯಾಯಾ ಪಂಚಾಯತಿ ನೋಡಿದ್ದವರು ಇಲ್ಲ ಇದು ಬೈಕ್ ಅಪಘಾತವಲ್ಲ ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಒಂದು ವರ್ಷದ ಹಿಂದೆ ಗಂಡ ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದಳು. ಆಗ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿದ್ದರು. ಆದ್ರೂ ಸಹ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾ ಇದ್ದ ಪತ್ನಿ ಸೌಮ್ಯ ಗಂಡನೊಂದಿಗೆ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆಯುತ್ತಲೆ ಇದ್ದಳು. ಆದ್ರೆ ಎಲ್ಲವನ್ನೂ ತನ್ನ ಮೂರು ಜನ ಮಕ್ಕಳಿಗಾಗಿ ಸಹಿಸಿಕೊಂಡ ಕಲಾವಿದ ತನ್ನ ಸಂಸಾರದಲ್ಲಿದ್ದ ಕಲಹಕ್ಕೆ ಬಲಿಯಾಗಿದ್ದಾನೆ ಅನ್ನೋದು ತಾಯಿ ಚೌಡಮ್ಮ ಅಳಲು ತೋಡಿಕೊಂಡಿದ್ದಾರೆ.