ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ತಳ್ಳಿದ ಕಂಡಕ್ಟರ್!| ಬೆಂಗಳೂರು ಯುವತಿಗೆ ಗಾಯ, ಕಂಡಕ್ಟರ್ ಸಸ್ಪೆಂಡ್
ಬೆಂಗಳೂರು[ನ.20]: ಬೆಂಗಳೂರಿನಲ್ಲಿ ಚಲಿಸುವ ಕೆಎಸ್‌ಆರ್‌ಟಿಸಿ ಬಸ್‌ನಿಂದ ವಿದ್ಯಾರ್ಥಿನಿಯನ್ನು ಹೊರಗೆ ತಳ್ಳಿದ ಘಟನೆ ಸಂಬಂಧ ಬಸ್ ನಿರ್ವಾಹಕ ಶಿವಶಂಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಘಟನೆ ಕುರಿತು ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ, ಗಾಯಾಳು ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚವನ್ನು ನಿಗಮದಿಂದಲೇ ಭರಿಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
undefined
ಕನ್ನಡ ಕಟ್ಟಿದವರು: ಕನ್ನಡಕ್ಕಾಗಿ ಕೈ ಎತ್ತಿದ ಮೈಸೂರಿನ ತ್ಯಾಗರಾಜ!
ನಗರದ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕನಕಪುರ ಪಟ್ಟಣದ ಭೂಮಿಕಾ ಅವರು ನ.11ರಂದು ಕಾಲೇಜು ಮುಗಿಸಿ ಮನೆಗೆ ಹೋಗಲು ಕೆಎಸ್‌ಆರ್‌ಟಿಸಿಯ ರಾಮನಗರ ವಿಭಾಗದ ಹಾರೋಹಳ್ಳಿ ಘಟಕಕ್ಕೆ ಸೇರಿದ ಕೆಎ 42 ಎಫ್-2217 ನೋಂದಣಿ ಸಂಖ್ಯೆಯ ಬಸ್ ಹತ್ತಿದ್ದರು. ಈ ವೇಳೆ ನಿರ್ವಾಹಕ ಶಿವಶಂಕರ್ ಅವರು ಟಿಕೆಟ್ ಪಡೆಯುವಂತೆ ಹೇಳಿದಾಗ ವಿದ್ಯಾರ್ಥಿ ಪಾಸ್ ಇರುವುದಾಗಿ ಹೇಳಿದ್ದರು.
ಈ ವೇಳೆ ಪಾಸ್ ನಡೆಯುವುದಿಲ್ಲ. ಬಸ್‌ನಿಂದ ಕೆಳಗೆ ಇಳಿ ಎಂದು ಶಿವಶಂಕರ್ ಒತ್ತಾಯಿಸಿದ್ದರು. ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಭೂಮಿಕಾ ಹೇಳಿದರೂ ಶಿವಶಂಕರ್ ಬಲವಂತಾಗಿ ಚಲಿಸುವ ಬಸ್‌ನಿಂದ ಆಚೆಗೆ ತಳ್ಳಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಭೂಮಿಕಾ ಕೈ, ಕಾಲು, ಮುಖಕ್ಕೆ ಗಾಯಗಳಾದ್ದರಿಂದ ಸಾರ್ವಜನಿಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮೇಲ್ನೋಟಕ್ಕೆ ನಿರ್ವಾಹಕ ತಪ್ಪು ಮಾಡಿರುವುದು ಕಂಡುಬಂದಿರುವುದರಿಂದ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
KSRTCಗೆ ‘ಗ್ಲೋಬಲ್ ಮೊಬಿಲಿಟಿ’ ಪ್ರಶಸ್ತಿ ಗರಿ!