ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌

Kannadaprabha News   | Kannada Prabha
Published : Feb 04, 2026, 12:07 PM IST
KSDL

ಸಾರಾಂಶ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮಟ್ರಿಕ್‌ ಟನ್‌ ಸೋಪು ಉತ್ಪನ್ನ ಉತ್ಪಾದಿಸಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮಟ್ರಿಕ್‌ ಟನ್‌ ಸೋಪು ಉತ್ಪನ್ನ ಉತ್ಪಾದಿಸಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

2025ರ ಡಿಸೆಂಬರ್‌ನಲ್ಲಿ 4,735 ಟನ್‌ ಉತ್ಪಾದನೆ

ಈ ಹಿಂದೆ 2025ರ ಡಿಸೆಂಬರ್‌ನಲ್ಲಿ 4,735 ಟನ್‌ ಉತ್ಪಾದನೆ ಅತಿಹೆಚ್ಚಿನ ಉತ್ಪಾದನೆಯಾಗಿತ್ತು. ಇದೀಗ ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3,798 ಟನ್‌, ಮಾರ್ಜಕಗಳ ವಿಭಾಗದಲ್ಲಿ 941 ಟನ್‌ ಹಾಗೂ ಕಾಸ್ಮೆಟಿಕ್ಸ್‌ ವಿಭಾಗದಲ್ಲಿ 155 ಟನ್‌ ಉತ್ಪಾದನೆ ಸೇರಿ ಒಟ್ಟು 4,894 ಟನ್‌ ಉತ್ಪಾದನೆ ಮಾಡಲಾಗಿದ್ದು, ಈವರೆಗಿನ ಅತಿಹೆಚ್ಚಿನ ಉತ್ಪಾದನೆಯಾಗಿದೆ ಎಂದು ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ.

2030ರ ವೇಳೆಗೆ ಸಂಸ್ಥೆಯ ವಹಿವಾಟನ್ನು ₹5 ಸಾವಿರ ಕೋಟಿಗೆ

ಕೆಎಸ್‌ಡಿಎಲ್‌ ಅಧ್ಯಕ್ಷ, ಶಾಸಕ ಅಪ್ಪಾಜಿ ಸಿ.ಎಸ್‌. ನಾಡಗೌಡ ಅವರು 2030ರ ವೇಳೆಗೆ ಸಂಸ್ಥೆಯ ವಹಿವಾಟನ್ನು ₹5 ಸಾವಿರ ಕೋಟಿಗೆ ಕೊಂಡೊಯ್ಯಲಾಗುವುದು ಎಂದು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧರ್ಮಸ್ಥಳ 74 ಅಸಹಜ ಸಾವು ಪ್ರಕರಣ: 2 ವಾರದಲ್ಲಿ ವಿವರ ನೀಡುವಂತೆ ಹೈಕೋರ್ಟ್ ಸೂಚನೆ
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌