ತೇಜಸ್ವಿ ಸೂರ್ಯ ಈ ರಾಜ್ಯಕ್ಕೆ ಒಂದು ವಿಷಬೀಜ : ಡಿಕೆಶಿ ಫುಲ್ ಗರಂ

By Suvarna NewsFirst Published May 11, 2021, 12:44 PM IST
Highlights
  • 3ನೇ ಅಲೆ ತಯಾರಿಗೂ ಮುನ್ನ 2ನೇ ಕೋವಿಡ್ ಅಲೆ ನಿಯಂತ್ರಿಸಲಿ
  • ತೇಜಸ್ವಿ ಸೂರ್ಯ ವಿಷಬೀಜ ಎಂದು ಗರಂ ಆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
  • ಕೊರೊನಾ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ ಎಂದ ಶಿವಕುಮಾರ್

 ಬೆಂಗಳೂರು (ಮೇ.11): ಕೊರೋನಾ ಹೆಚ್ಚಾಗುತ್ತಲೇ ಇದ್ದು 3ನೇ ಅಲೆಗೆ ತಯಾರಿ ಮಾಡಿಕೊಳ್ಳಿ ಎಂದು ಸಿಎಂ ಹೇಳಿದ್ದಾರೆ. ಮೊದಲು ಎರಡನೇ ಅಲೆಯನ್ನು ನಿಯಂತ್ರಿಸಿ, ಜನರಿಗೆ ನೆರವಾಗಲಿ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೇ ವೇಳೆ ತೇಜಸ್ವಿ ಸೂರ್ಯ ವಿರುದ್ಧವೂ ಗರಂ ಆಗಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಡಿಕೆ ಶಿವಕುಮಾರ್ ಮೂರನೇ ಅಲೆಗೆ ತಯಾರಿ ಮಾಡೊಣ. ಆದರೆ ಈಗ  ಸಾಯುವವರನ್ನ ಬದುಕಿಸಿ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  

'ಕೇಂದ್ರ ಆಕ್ಸಿಜನ್ ಕೊಡದೆ ಇದ್ದರೂ ಕೇಳುವ ಶಕ್ತಿಯಿಲ್ಲದ ಮೂಕಪ್ರೇಕ್ಷಕರು' .

ರೈತರ ತರಕಾರಿ ಕೊಳ್ಳುವವರಿಲ್ಲ.  ತೋಟಗಾರಿಕಾ ಸಚಿವರು, ಕೃಷಿ ಸಚಿವರು ರೈತರ ಹೊಲಗಳಿಗೆ ಭೇಟಿ ನೀಡಿದ್ದಾರಾ..? ಎಪಿಎಂಸಿ ಗಳಿಗೆ ಭೇಟಿ ನೀಡಿ ರೈತರ ಕಷ್ಟ ಅರಿತುಕೊಳ್ಳಲಿ. ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬಡವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬಡವರ ಅಕೌಂಟ್ ಗೆ 10 ಸಾವಿರ ಹಣ ಹಾಕಲಿ.  ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ  ಎಂದು ಡಿ.ಕೆ.ಶಿವಕುಮಾರ್ ಹೇಳಿದರು. 

ಬೆಡ್, ಆಕ್ಸಿಜನ್ ಎಲ್ಲಿ ಸಿಗುತ್ತದೆ ಎಂದು ಒಂದು ಬೋರ್ಡ್ ಹಾಕಿ. ಜನರಿಗೆ ಗೊತ್ತಾಗುತ್ತಿಲ್ಲ. ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಾರ್ವಜನಿಕರಿಗೆ ಲಸಿಕೆ ಎಲ್ಲಿ ಸಿಗುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಜನರಿಗೆ ಮಾಹಿತಿ ನೀಡಲಿ ಎಂದರು. 

ಬೆಡ್ ಬುಕಿಂಗ್ ದಂಧೆಗೆ ಕೋಮು ಬಣ್ಣ : ಸರ್ಕಾರದ ವಿರುದ್ಧ ಡಿಕೆಶಿ ಅಸಮಾಧಾನ .

ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವಾಗ್ದಾಳಿ :  ತೇಜಸ್ವಿ ಸೂರ್ಯ ಈ ರಾಜ್ಯಕ್ಕೆ ಒಂದು ವಿಷಬೀಜ.  ಅವನ ಬಗ್ಗೆ ಏನು ಹೇಳೋದು ಅಧಿಕಾರಿ‌ ಕೊಟ್ಟಿದ್ದ ಹೆಸರು ಓದಿದ್ದೇನೆ ಅಂತಾ ಹೇಳಿದ್ದಾರೆ.  ಅಧಿಕಾರಿ ಒಂದೇ ಸಮುದಾಯದ ಹೆಸರು ಕೊಡುತ್ತಾರಾ.? ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿ ಮೇಲೆ ಎತ್ತಿಹಾಕುತ್ತಿದ್ದಾರೆ?  ಕೋಮು ಸೌಹಾರ್ಧತೆಗೆ ಕೆರಳಿಸುವವರಿದ್ದರೆ ಅದು ತೇಜಸ್ವಿ ಸೂರ್ಯ ಎಂದು ವಾಕ್‌ಪ್ರಹಾರ ನಡೆಸಿದರು.

 ಸರ್ಕಾರದ ಕೈಯಲ್ಲಿ ದುಡ್ಡಿಲ್ಲ ಪ್ರಿಟಿಂಗ್ ಮೆಷಿನ್ ಇಟ್ಟುಕೊಂಡಿಲ್ಲ ಎಂದು ಶಿವಮೊಗ್ಗದಲ್ಲಿ ಒಬ್ಬರು ಹೇಳಿದ್ದಾರೆ. ನಿಮ್ಮ‌ಮನೆಯಲ್ಲಿ ಪ್ರಿಂಟಿಂಗ್ ಮೆಷಿನ್ ಇತ್ತಲ್ಲವೇ ಎಂದು ಈಶ್ವರಪ್ಪ ಗೆ ಡಿಕೆಶಿ ಟಾಂಗ್ ನೀಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!