ಡಾಕ್ಟರ್ಸ್‌ ಡೇಗೆ ಶುಭಕೋರಿದ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

By Suvarna NewsFirst Published Jul 1, 2020, 2:27 PM IST
Highlights

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯರ ಪರ ಸಹಾನುಭೂತಿಯನ್ನು ತೋರಿಸಬೇಕು. ಅವರೆಲ್ಲಾ ತಮ್ಮ ಜೀವವನ್ನು ಒತ್ತೆಯಿಟ್ಟು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರ್ಕಾರ ಆರೋಗ್ಯ ಸಿಬ್ಬಂದಿಯ ಪರ ಯೋಜನೆ ರೂಪಿಸಿದರೆ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜು.01): ಅದೆಷ್ಟೋ ನಂಬಿ ಬಂದ ರೋಗಿಗಳನ್ನು ಆರೈಕೆ ಮಾಡುವ ಸಹೃದಯಿ ವೈದ್ಯರು ವಿಶ್ವಭಾವಕ್ಯತೆಯ ಪ್ರತೀಕವಾಗಿದ್ದಾರೆ. ಜುಲೈ 01ರಂದು ನಮ್ಮ ನಿಮ್ಮೆಲ್ಲರ ಆರೋಗ್ಯ ಕಾಪಾಡುವ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ವೈದ್ಯರ ದಿನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಭ ಹಾರೈಸಿದ್ದಾರೆ.
  
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯರ ಪರ ಸಹಾನುಭೂತಿಯನ್ನು ತೋರಿಸಬೇಕು. ಅವರೆಲ್ಲಾ ತಮ್ಮ ಜೀವವನ್ನು ಒತ್ತೆಯಿಟ್ಟು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರ್ಕಾರ ಆರೋಗ್ಯ ಸಿಬ್ಬಂದಿಯ ಪರ ಯೋಜನೆ ರೂಪಿಸಿದರೆ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶವಸಂಸ್ಕಾರದಲ್ಲಿ ಎಡವಟ್ಟು: BBMP ಬೇಜವಾಬ್ದಾರಿ ಬಟಾಬಯಲು..!

ಭಾರತ ರತ್ನ ಬಿ.ಸಿ. ರಾಯ್ ಅವರ ಸ್ಮರಣಾರ್ತ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಹೆಮ್ಮಾರಿಯ ವಿರುದ್ಧ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್‌ ಆಗಿ ದೇಶ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುವರ್ಣ ನ್ಯೂಸ್ ವತಿಯಿಂದ ಶುಭಾಶಯಗಳು.

click me!