*ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೆಂಪಲ್ ರನ್
*ಮನೆ ದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ಭೇಟಿ
*ಬುಕ್ ಮಾಡಿದ ಹೋಟೆಲ್ ಕ್ಲೋಸ್ ಮಾಡಿಸಿದ್ದಾರೆ: ಡಿಕೆಶಿ
ರಾಮನಗರ /ಕನಕಪುರ (ಜ. 9): ಮೇಕೆದಾಟು ಪಾದಯಾತ್ರೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಕುಟುಂಬ ಸಮೇತರಾಗಿ ಶನಿವಾರ ಟಂಪಲ್ ರನ್ ನಡೆಸಿದರು. ಕನಕಪುರದಲ್ಲಿರುವ (Kanakapura) ಮನೆ ದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಪತ್ನಿ ಉಷಾ ಅವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಸಾತನೂರಿನ ಕಬ್ಬಾಳಮ್ಮ ದೇವಾಲಯಕ್ಕೂ ತೆರಳಿ ದೇವಿಯ ದರ್ಶನ ಪಡೆದು ದೇವಿಗೆ 9 ಈಡಗಾಯಿ ಒಡೆದರು. ನಂತರ ಕನಕಪುರದ ಜಾಮೀಯ ಮಸೀದಿಗೂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಬೇಡಿಕೊಂಡರು.
ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಮನೆ ದೇವರಿಗೆ ಪೂಜೆ ನೆರವೇರಿಸುವುದನ್ನು ಡಿ.ಕೆ. ಶಿವಕುಮಾರ್ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗುವಂತೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಳೆ ಮೇಕೆದಾಟಿನಿಂದ ಪಾದಯಾತ್ರೆ ಮಾಡಲಿದ್ದೇವೆ. ಯಾರೇ ಯಾವುದೇ ಅಡೆತಡೆ ನಡೆಸಿದರೂ ಕೂಡ ಪಾದಯಾತ್ರೆ ನಡೆದೇ ನಡೆಯುತ್ತದೆ. ನಾನು ಹಾಗೂ ಸಿದ್ದರಾಮಯ್ಯ ಈಗಾಗಲೇ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ
ಪಾದಯಾತ್ರೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಲೇ ಇದೆ. ನಾವು ಈಗಾಗಲೇ ಪಾದಯಾತ್ರೆ ಮಾಡೇ ಮಾಡುತ್ತೇವೆಂದು ತೀರ್ಮಾನ ಮಾಡಿದ್ದೇವೆ. ನಾನು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ. ಜನರು ಪಾದಯಾತ್ರೆಗೆ ಬಂದರೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ. ಇದು ಜನರ ಆಂದೋಲನ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಬುಕ್ ಮಾಡಿದ ಹೋಟೆಲ್‌ಗಳನ್ನು ಕ್ಲೋಸ್ ಮಾಡಿಸಿದ್ದಾರೆ:
ಜಿಲ್ಲೆಯಲ್ಲಿ ಸಂಗಮ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೂ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಪ್ರವಾಸಿಗÜರು ಹೋಟೆಲ್‌ಗಳಲ್ಲಿ ಬುಕ್ ಮಾಡಿದ್ದರು. ಅದೆಲ್ಲವನ್ನು ಡಿಸ್ಕೊ$್ಲೕಸ್ ಮಾಡಿಸಿದ್ದಾರೆ. ಕೇಸು ಹಾಕುವುದಾದರೆ ಎಲ್ಲರ ಮೇಲೂ ಹಾಕಲಿ ಎಂದು ಕಿಡಿಕಾರಿದರು.ಕೊರೋನಾ ಹೆಸರಿನಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ರಾಮನಗರ ಆಸ್ಪತ್ರೆಯ ಐಸಿಯುನಲ್ಲಿ ಎಷ್ಟುಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರಿಗೆ ಕಷ್ಟನೀಡಲು ಕಫä್ಯರ್ ಹೇರಿದ್ದಾರೆ. ಸುಮ್ಮನೆ ರಾಜಕೀಯಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Mekedatu Project: ರೂಲ್ಸ್ ಮೀರಿ ಸಭೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಆರಗ
ಉದಯವಾಗುವ ಸೂರ್ಯ, ಹರಿಯುವ ನೀರನ್ನು ತಡೆಯೋಕೆ ಆಗುತ್ತದೆಯೇ. ಬಿಜೆಪಿಯವರು ಹರಿಯುವ ನೀರನ್ನುತಡೆಯಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಸಾಮಾನ್ಯ ಜ್ಞಾನ ಇದ್ದವರು ಯಾರೂ ಕೂಡ ಪಾದಯಾತ್ರೆಗೆ ಅಡ್ಡಿ ಪಡಿಸುತ್ತಿರಲಿಲ್ಲ. ಆದರೆ, ಬಿಜೆಪಿಯವರಿಗೆ ಅವರದೇಆದ ರಾಜಕೀಯ ಒತ್ತಡ ಇದೆ. ಹಾಗಾಗಿ ಪಾದಯಾತ್ರೆ ತಡೆಯಲು ಏನೇನು ಮಾಡಬೇಕೋ ಅದೆಲವನ್ನು ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಶಿವರಾಜ್ ಕುಮಾರ್ ಬಲ?
ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ(Congress Mekedatu Padayatra) ಸ್ಯಾಂಡಲ್ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಬಲ ಸಿಕ್ಕಿದೆ. ಹೌದು...ಮೇಕೆದಾಟು(Mekedatu) ಪಾದಯಾತ್ರೆಯಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಲಿದ್ದು, ಭಾನುವಾರದಿಂದ (ಜನವರಿ 9) ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆಯನ್ನು ಶಿವಣ್ಣ ಉದ್ಘಾಟಿಸುವ ಸಾಧ್ಯತೆ ಇದೆ..
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಪಾದಯಾತ್ರೆಯಲ್ಲಿ ಭಾಗಿ ಆಗಲಿದ್ದಾರೆ. ಕಾಂಗ್ರೆಸ್ ನಾಯಕರ ಜತೆ ಶಿವಣ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ. ಶಿವಣ್ಣನ ಮೂಲಕ ಪಕ್ಷಾತೀತ ಹೋರಾಟವೆಂದು ಕಾಂಗ್ರೆಸ್ ಸಂದೇಶ ರವಾನಿಸಿದಂತಿದೆ.
ಕಾಂಗ್ರೆಸ್ ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಮತ್ತೊಂದೆಡೆ ಬಿಜೆಪಿ ಸರ್ಕಾರ ಏನಾದರೂ ಮಾಡಿ ಇದನ್ನ ತಡೆಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮಧ್ಯೆ ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡುತ್ತಿರುವುದು ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ.