ಕೊಡಗು (ಡಿ.24): ಕಾವೇರಿ ನದಿ (Cauvery River) ಪವಿತ್ರವಾದ ಪುಣ್ಯ ನದಿ. ಪಾಪಗಳನ್ನು ನಿರ್ಮೂಲನೆ ಮಾಡುವ ಶಕ್ತಿ ಕಾವೇರಿ ನದಿ ನೀರಿಗೆ ಇದೆ. ರಾಜ್ಯದ ಮೂರು ಕೋಟಿಗೂ ಹೆಚ್ಚು ಜನರಿಗೆ ನದಿಯಿಂದ ಅನುಕೂಲವಾಗುತ್ತಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಇಂದು ಪುಣ್ಯ ಕ್ಷೇತ್ರ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಡಿಕೆ ಶಿವಕುಮಾರ್ ಈ ನದಿಯಿಂದ ಕೋಟಿ ಕೋಟಿ ಜನರ ಜೀವನ ಸಾಗುತ್ತಿದೆ ಎಂದರು.
ನೀರಿನ ಬಳಕೆ ವಿಚಾರದಲ್ಲಿ ಹಲವು ಹೋರಾಟ ಆಗುತ್ತಿದೆ. ರಾಜ್ಯದ ಮೂರು ಕೋಟಿಗೂ ಹೆಚ್ಚು ಜನರಿಗೆ ನದಿಯಿಂದ ಅನುಕೂಲವಾಗುತ್ತಿದೆ. ಅನೇಕ ಮಹನೀಯರು ಕಾವೇರಿಗಾಗಿ ಹೋರಾಟ ಮಾಡಿದ್ದಾರೆ. ಈ ವರ್ಷದಲ್ಲಿ 104 ಟಿಎಂಸಿ (TMC) ನೀರು (Water) ಸಮುದ್ರ ಸೇರಿದೆ. ವ್ಯರ್ಥವಾಗುವ ನೀರನ್ನು ತಡೆಯಲು ಮೇಕೆದಾಟು ಅಣೆಕಟ್ಟು (Mekedatu) ನಿರ್ಮಾಣ ಆಗಬೇಕು. ಆಗ ಅದರಲ್ಲಿ ವಿದ್ಯುತ್ ಉತ್ಪಾದನೆ (Power) ಆಗುತ್ತದೆ. ಇದರಿಂದ ಇನ್ನಷ್ಟು ಜನತೆ ಅನುಕೂಲ ಪಡೆದುಕೊಳ್ಳಲಿದ್ದಾರೆ ಎಂದರು.
ಮೇಕೆದಾಟಿಗೆ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಬೆಂಗಳೂರಿಗೆ (Bengaluru) ನಿರಂತರ ನೀರು ಸರಬರಾಜಾಗುತ್ತದೆ. ಮಳೆ (Rain) ಇಲ್ಲದಾಗ ರೈತರಿಗೆ (farmers) ನೀರು ಒದಗಿಸಬಹುದು. ಯೋಜನೆಗೆ ಕೇಂದ್ರ ಅನುಮೋದನೆಯನ್ನೂ ನೀಡಿದೆ. ಪರಿಸರ ಕ್ಲಿಯರೆನ್ಸ್ ಕೊಡಬೇಕು ಕೇಂದ್ರ ಸರಕಾರ (Govt Of India). ಪರಿಹಾರ ಕೊಡೋದಕ್ಕೂ ವ್ಯವಸ್ಥೆ ಆಗಬೇಕಿದೆ. ಕೂಡಲೇ ಈ ಯೋಜನೆ ಪ್ರಾರಂಭ ಆಗಬೇಕು. ಈ ನಿಟ್ಟಿನಲ್ಲಿ ಯೋಜನೆ ಆರಂಭ ಮಾಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ (Govt Of Karnataka) ಒತ್ತಡ ಹಾಕಬೇಕು ಎಂದು ಡಿಕೆಶಿ ಹೇಳಿದರು.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ (Congress) ಹಮ್ಮಿಕೊಂಡಿರುವ ಪಾದಯಾತ್ರೆಗೆ ಎಲ್ಲರೂ ಸಹಕಾರ ಕೊಡಬೇಕು. ರಾಜ್ಯದ ಹಿತಕ್ಕಾಗಿ ನಮ್ಮ ಹೋರಾಟ ನಡೆಯುತ್ತಿದೆ. ಜನವರಿ 9 ರಿಂದ 19ರವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಯಶಸ್ಸಿಗೆ ಕಾವೇರಿಗೆ (Cauvery) ಪೂಜೆ ಸಲ್ಲಿಸಿದ್ದೇನೆ ಎಂದು ತಲಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಕಾವೇರಿ ನಮ್ಮದು, ನೀರು ನಮ್ಮದು. ಯೋಜನೆಯಿಂದ ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ. ಎಲ್ಲಾ ಪಕ್ಷದವರೂ ಬೆಂಬಲ ಕೊಡುತಿದ್ದಾರೆ ಜೆಡಿಎಸ್ (JDS), ಬಿಜೆಪಿಯವರು (BJP) ಬೆಂಬಲಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ (Congress) ಪಾದಯಾತ್ರೆ ನಾಯಕತ್ವ ತೆಗೆದುಕೊಂಡಿದೆ ಅಷ್ಟೇ. ತಮಿಳುನಾಡಿನವರು (Tamilnadu) ಮೇಕೆದಾಟು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ಅದರ ಬೀಗ ಕೇಂದ್ರದ ಕೈನಲ್ಲಿದೆ. ಅವರು ಕೂಡಾ ನಮಗೆ ಸಹಕಾರ ಕೊಡಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಪಾದಯಾತ್ರೆ ಪ್ರಕಟ : ಮೇಕೆದಾಟು ಯೋಜನೆ(Mekedatu Project) ಜಾರಿಗೆ ಒತ್ತಾಯಿಸಿ ಜನವರಿ 9ರಿಂದ ಜ.19ರವರೆಗೆ ಹತ್ತು ದಿನಗಳ ಕಾಲ ಬರೋಬ್ಬರಿ 169 ಕಿ.ಮೀ. ಉದ್ದದ ಬೃಹತ್ ಪಾದಯಾತ್ರೆ(Padayatra) ನಡೆಸಲು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ(Congress) ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ‘ನಮ್ಮ ನೀರು- ನಮ್ಮ ಹಕ್ಕು’ ಘೋಷ ವಾಕ್ಯದಡಿ ಬೆಂಗಳೂರಿಗೆ(Bengaluru) ಕುಡಿಯುವ ನೀರು(Drinking Water) ಪೂರೈಸುವ ಯೋಜನೆ ಜಾರಿಗೆ ಒತ್ತಾಯಿಸಿ ಜ.9ರಂದು ಬೆಳಗ್ಗೆ 9.30 ಗಂಟೆಗೆ ಮೇಕೆದಾಟು ಬಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ನೇತೃತ್ವದಲ್ಲಿ ಚಾಲನೆ ದೊರೆಯಲಿದೆ.
ಮೇಕೆದಾಟುವಿನಿಂದ ಕನಕಪುರ, ರಾಮನಗರ, ಬಿಡದಿ ಮೂಲಕ 75 ಕಿ.ಮೀ. ದೂರದಲ್ಲಿರುವ ಕೆಂಗೇರಿಗೆ ಪಾದಯಾತ್ರೆ ಆಗಮಿಸಲಿದೆ. ಬಳಿಕ ನಾಯಂಡಹಳ್ಳಿ ಜಂಕ್ಷನ್ ಮೂಲಕ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೇಕೆದಾಟುವಿನಿಂದ ಬೆಂಗಳೂರಿಗೆ 5 ದಿನ ಹಾಗೂ ಬೆಂಗಳೂರು ನಗರದಲ್ಲಿ 5 ದಿನ ಪಾದಯಾತ್ರೆ ನಡೆಯಲಿದ್ದು, ಒಟ್ಟು ಹದಿನೈದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 169 ಕಿ.ಮೀ. ಉದ್ದದ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.