SIR ಸಭೆಗೆ ಗೈರಾದ ಭಾವನಾ ರಾಮಣ್ಣ, ನಿಕೇತ್‌ ರಾಜ್‌ ಮೌರ್ಯ ಹುದ್ದೆಯಿಂದ ವಜಾ!

Kannadaprabha News   | Kannada Prabha
Published : May 28, 2026, 08:07 AM IST
KPCC DK Shivakumar dismisses Bhavana Ramanna Niketh Raj Maurya who was absent SIR meet

ಸಾರಾಂಶ

ಮೇ 25 ರಂದು ನಡೆದ ಎಸ್‌ಐಆರ್‌ ಸಭೆಗೆ ಗೈರುಹಾಜರಾದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾವನಾ ರಾಮಣ್ಣ ಸೇರಿದಂತೆ ಮೂವರು ಉಪಾಧ್ಯಕ್ಷರು ಮತ್ತು 29 ಪ್ರಧಾನ ಕಾರ್ಯದರ್ಶಿಗಳನ್ನು ಅವರ ಹುದ್ದೆಗಳಿಂದ ಬಿಡುಗಡೆಗೊಳಿಸಲಾಗಿದೆ.

ಬೆಂಗಳೂರು (ಮೇ.28) ಬೆಂಗಳೂರಿನ ಹೊರವಲಯದಲ್ಲಿ ಮೇ 25 ರಂದು ನಡೆದ ಎಸ್‌ಐಆರ್‌(SIR) ಕುರಿತು ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಭಾವನಾ ರಾಮಣ್ಣ, ನಿಕೇತ್‌ ರಾಜ್‌ ಮೌರ್ಯ ಸೇರಿದಂತೆ ಪಕ್ಷದ ಮೂರು ಮಂದಿ ಉಪಾಧ್ಯಕ್ಷರು, 29 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. 

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶ ಹೊರಡಿಸಿದ್ದು, ಎಐಸಿಸಿ ಸೂಚನೆ ಮೇರೆಗೆ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಪ್ರಸ್ತುತ ಹುದ್ದೆಗಳಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ, ಬಾಬುರಾವ್‌ ಜಾಗಿರ್ದಾರ್‌, ಎಂ.ಸಿ .ವೇಣುಗೋಪಾಲ್ ಅವರನ್ನು ತೆಗೆದು ಹಾಕಲಾಗಿದೆ.

ಪ್ರಧಾನ ಕಾರ್ಯದರ್ಶಿಗಳು:

ಪ್ರಧಾನ ಕಾರ್ಯದರ್ಶಿಗಳ ಪೈಕಿ ಎನ್.ಐ ಕೋಡಹಳ್ಳಿ, ಭಾವನಾ ರಾಮಣ್ಣ, ಕೆ.ಸಿ. ಪ್ರಭಾಕರ್‌ ರೆಡ್ಡಿ, ತಿಬ್ಬೇಗೌಡ, ಜುಲ್ಫಿಕರ್‌ ಅಹ್ಮದ್, ಶಂಕರ್‌ ದೊಡ್ಡಿ, ರೇಖಾ ಹುಲಿಯಪ್ಪ, ಎಚ್.ಎ. ಷಣ್ಮುಖಪ್ಪ, ಎಂ. ರಾಮಪ್ಪ, ವಡ್ನಾಳ್‌ ಜಗದೀಶ್, ಷಣ್ಮುಖಪ್ಪ ಶಿವಳ್ಳಿ, ಮಲ್ಲಿಕಾರ್ಜುನ ಅಕ್ಕಿ, ಸ್ವಾತಿ ಮಾಳಗಿ, ಅಲ್ತಾಫ್‌ ನವಾಜ್‌ ಕಿತ್ತೂರು, ನಾಗೇಶ್ವರರಾವ್‌, ರಮೇಶ್ ಮರಗೋಳು, ಚಂದ್ರಕಲಾ ಪ್ರಸನ್ನ, ಸಿ.ಆರ್‌. ಮನೋಹರ್‌, ಎಚ್‌.ಆರ್‌. ಶ್ರೀನಾಥ್‌, ಎಚ್. ತ್ಯಾಗರಾಜ್‌, ಎಲ್‌.ಪದ್ಮನಾಭ, ನಿಕೇತ್‌ ರಾಜ್‌ ಮೌರ್ಯ, ಸಿ.ಬಿ. ಶಶಿಧರ್, ವೆಂಕಟೇಶ್ ಹೆಗ್ಡೆ ಹೊಸಬಾಳೆ, ವಿ.ವೈ. ಘೋರ್ಪಡೆ, ಮಕ್ಬುಲ್‌ ಭಗವಾನ್‌, ಇಸ್ಮಾಯಿಲ್‌ ತಮಟಗರ್, ಬನ್ನಿಕೊಡ್, ಸಂಜಯ್‌ ಜಾಗಿರ್ದಾರ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Political Update Live: ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅನುಮಾನ
Bengaluru rains: ಬೆಂಗಳೂರಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ: ಒಂದೇ ದಿನದಲ್ಲಿ 67 ಮರ, 104 ರೆಂಬೆ-ಕೊಂಬೆ ತೆರವು!