
ಕೊಪ್ಪಳ (ಆ.11): ಪಘಾತವೊಂದರಲ್ಲಿ ಪತ್ನಿ ಮಾಧವಿಯನ್ನು ಕಳೆದುಕೊಂಡಿದ್ದ ಇಲ್ಲಿಯ ಭಾಗ್ಯನಗರದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರು ಸಿಲಿಕಾನ್ ಎನ್ನುವ ವಿಶೇಷ ವಸ್ತುವಿನಲ್ಲಿ ಪ್ರತಿಮೆಯಾಗಿ ಪತ್ನಿಯನ್ನು ಮರುಸೃಷ್ಟಿಮಾಡಿಸಿದ್ದಾರೆ.
ಬೆಂಗಳೂರಿನ ಗೊಂಬೆ ಮನೆಯ ಕಲಾವಿದರಾದ ಶ್ರೀಧರ ಮೂತಿರ್ ಹಾಗೂ ಆನಂದ ಅವರ ಕೈಚಳಕದಲ್ಲಿ ಪ್ರತಿಮೆ ಸಿದ್ಧವಾಗಿದೆ. ಭಾನುವಾರ ಉದ್ಯಮಿ ಮನೆಗೆ ಪ್ರತಿಮೆ ತರಲಾಗಿದೆ. ತಮ್ಮ ನೂತನ ಮನೆಯಲ್ಲಿ ಪತ್ನಿ ಮಾಧವಿಯ ಪ್ರತಿಮೆಯನ್ನು ತೂಗುಮಂಚದ ಮೇಲೆ ಕೂಳಿಸಿದ ರೀತಿಯಲ್ಲಿ ಸಿದ್ಧ ಮಾಡಿಸಲಾಗಿದ್ದು, ವಿಶೇಷ ಗಮನ ಸೆಳೆಯುತ್ತಿದೆ.
ಸಿಲಿಕಾನ್ ವಸ್ತುವಿನಲ್ಲಿ ಮಾಡಲಾಗಿರುವ ಈ ಪ್ರತಿಮೆ ಥೇಟ್ ಜೀವಂತ ಇರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ, ಸೀರೆಯನ್ನು ಉಡಿಸಬಹುದು. ಬಳೆ ತೊಡಿಸಬಹುದು, ಉಂಗುರ ಹಾಕಬಹುದು ಮತ್ತು ತೆಗೆಯಬಹುದು. ಜೀವಂತ ಇರುವವರು ಪಕ್ಕದಲ್ಲಿ ಕುಳಿತುಕೊಂಡು ಫೋಟೋ ತೆಗೆದರೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ದೇಹ ರಚನೆ, ಮುಖಭಾವ ಸೇರಿದಂತೆ ಎಲ್ಲವೂ ಜೀವಂತ ಇರುವವರಂತೆ ಇದ್ದು, ಮರು ಸೃಷ್ಟಿಯೇ ಎಂದು ಹೇಳಲಾಗುತ್ತದೆ.
ಇನ್ನು ಇನ್ನು ಇತ್ತೀಚೆಗಷ್ಟೇ ಕರ್ನಾಟಕದ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಖಡಕ್ ಪೊಲೀಸ್ ಅಧಿಕಾರಿ ಈಪಿಎಸ್ ಡಿ. ರೂಪಾ ಕೂಡಾ ಈ ಸಂಬಂಧ ಟ್ವೀಟ್ ಮಾಡಿದ್ದು, ದಿವಂಗತ ಪತ್ನಿಯ ವ್ಯಾಕ್ಸ್ ಪ್ರತಿಮೆ ಮಾಡಿದ್ದರ ಹಿಂದಿನ ಭಾವನೆಗಳು ಅಮೋಘವಾದದ್ದು. ಅದರ ಜೊತೆಗೆ ಕರ್ನಾಟಕದ ಕಲಾವಿದ ರಂಗಣ್ಣನವರು ಮಾಡಿರುವ,ನೈಜವ್ಯಕ್ತಿಗೆ ಸೆಡ್ಡು ಹೊಡೆಯುವಂತೆ ಇರುವ ಪ್ರತಿಮೆ ಅಪ್ರತಿಮ. ಫ್ರಾನ್ಸ್ನಿಂದ ಬಂದು ಇಂತಹ ಮೂರ್ತಿ ಮಾಡುವದು ಕೇಳಿದ್ದೆ. ರಂಗಣ್ಣ ಅವರನ್ನು ಪ್ರೋತ್ಸಾಹಿಸಿ ಸರ್ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ