ಕೋಲಾರದ ಸೊಪ್ಪು, ತರಕಾರಿಗಳಲ್ಲಿ ರಾಸಾಯನಿಕ ಅಂಶಗಳಿಲ್ಲ: ದಿನೇಶ್ ಗುಂಡೂರಾವ್

By Sathish Kumar KHFirst Published Aug 28, 2024, 6:08 PM IST
Highlights

ಕೋಲಾರ ಭಾಗದಲ್ಲಿ ಸಂಸ್ಕರಿಸಿದ ನೀರಿನಿಂದ ಬೆಳೆದ ಸೊಪ್ಪು, ತರಕಾರಿಗಳಲ್ಲಿ ರಾಸಾಯನಿಕ ಅಂಶಗಳಿಲ್ಲ ಎಂದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಬೆಂಗಳೂರು (ಆ.28): ಕೋಲಾರ ಭಾಗದ ಗ್ರಾಮೀಣ ಭಾಗಗಳಲ್ಲಿ ಸಂಸ್ಕರಿತ ನೀರಿನ್ನು ಬಳಸಿ ಬೆಳೆಯುತ್ತಿರುವ ಸೊಪ್ಪು, ತರಕಾರಿಗಳಲ್ಲಿ ರಾಸಾಯನಿಕ ಅಂಶಗಳಿವೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಇದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೊಪ್ಪಿನಲ್ಲಿ ಯಾವುದೇ ಅಂಶಗಳಿಲ್ಲ ಎಂಬುದು ತಿಳಿದುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಳಸಿದ ನೀರನ್ನು ಸಂಸ್ಕರಣೆ ಮಾಡಿ ಕೋಲಾರ ಭಾಗದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದ್ದು, ಈ ನೀರಿನಲ್ಲಿ ಬೆಳೆದ ತರಕಾರಿ, ಸೊಪ್ಪುಗಳಲ್ಲಿ ರಾಸಾಯನಿಕ ಅಂಶಗಳು ಸೇರ್ಪಡೆಯಾಗುತ್ತಿವೆ ಎಂಬ ಆರೋಪಳಿದ್ದವು. ಜೊತೆಗೆ, ಬೆಂಗಳೂರು ಹೊರವಲಯದಲ್ಲಿ  ಕಲುಷಿತ ನೀರಿನಲ್ಲಿ ಸೊಪ್ಪು ಹಾಗೂ ತರಕಾರಿ ಬೆಳೆಯುವ ಪ್ರಕರಣವೂ ವರದಿಯಾಗಿತ್ತು. ಕಲುಷಿತ ನೀರಿನಲ್ಲಿ ಸೊಪ್ಪು, ತರಕಾರಿ ಬೆಳೆಯುವ ಪ್ರಕರಣ ಗಮನಕ್ಕೆ ಬಂದರೆ ಸಂಬಂಧಿಸಿದ ಇಲಾಖೆ ಜೊತೆಗೆ ಸೇರಿ ಕಡಿವಾಣ ಹಾಕುತ್ತೇವೆ. ಆದರೆ, ಕೋಲಾರ ಭಾಗದಲ್ಲಿ ಸಂಸ್ಕರಿಸಿದ ನೀರಿನಲ್ಲಿ ಬೆಳೆದ ತರಕಾರಿ ಸೊಪ್ಪುಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿಲ್ಲ. ತರಕಾರಿ ಹಾಗೂ ಸೊಪ್ಪುಗಳಲ್ಲಿ ಯಾವುದೇ ಅಸುರಕ್ಷಿತ ರಾಸಾಯನಿಕ ಅಂಶಗಳು ಇಲ್ಲವೆಂದು ಮಾಹಿತಿ ನೀಡಿದರು.

Latest Videos

ಜಿಲ್ಲಾಸ್ಪತ್ರೆಗಳಲ್ಲೇ ಸಿಗಲಿದೆ ಕ್ಯಾನ್ಸರ್‌ಗೆ ನೀಡುವ ಕಿಮೋಥೆರಪಿ: ಸಚಿವ ದಿನೇಶ್‌ ಗುಂಡೂರಾವ್‌

ಇನ್ನು ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿಗಳಲ್ಲಿ) ಆಹಾರ ಗುಣಮಟ್ಟ ಸರಿಯಿಲ್ಲ ಎಂದು  ದೂರುಗಳು  ಬರ್ತಾಯಿದ್ದು ಈ ಸಂಬಂದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಕಿಟ್ ಆಳವಡಿಸಲು ಮುಂದಾಗಿದ್ದು ಸಾರ್ವಜನಿಕರೇ ಹೋಗಿ ಟೆಸ್ಟ್ ಮಾಡಬಹುದು. ಫುಡ್ ಕೋರ್ಟ್ , ಸಾರ್ವಜನಿಕರ ಸ್ಥಳಗಳಲ್ಲಿ ಈ ರೀತಿ ಟೆಸ್ಟಿಂಗ್ ಕಿಟ್ ಅಳವಡಿಸಲಾಗುತ್ತದೆ. ಅನುಮಾನ ಬಂದ ತಿಂಡಿಗಳನ್ನು ಅಲ್ಲೇ ನೇರವಾಗಿ ಟೆಸ್ಟ್ ಮಾಡಬಹುದು. ರಾಸಾಯನಿಕ ಬಳಕೆಯಂತಹ‌ ಅನುಮಾನಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ದಿಟ್ಟ ಹೆಜ್ಜೆಯನ್ನಿಡಲಾಗಿದೆ. ಆದ್ದರಿಂದ ಇದುವರೆಗೆ ರಾಜ್ಯಾದ್ಯಂತ 106 ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. 34 ಪ್ರಕರಣಗಳಲ್ಲಿ 1 ದಿನ ಜೈಲು ಶಿಕ್ಷೆ,  18 ‌ಪ್ರಕರಣಗಳಲ್ಲಿ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ಪನ್ನೀರ್ 211, ಕೇಕ್ 246 ಹಾಗೂ ಕೋವಾ 67 ‌ಮಾದರಿಯನ್ನ ಸಂಗ್ರಹಿಸಿ ವಿಶ್ಲೇಷಣೆಗೊಳಿಸಲಾಗಿದೆ. ಇದರಲ್ಲಿ ತಿನ್ನಲು ಯೋಗ್ಯವಲ್ಲದಂತಹ ವಸ್ತುಗಳನ್ನು ಬಳಸಿ ಆಹಾರ ಪದಾರ್ಥ ತಯಾರಿಸಿದ ನಾಲ್ಕು ಉದ್ದಿಮೆಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದರು.

ನೀವೊಬ್ಬ ಸಿಎಂ ಆಗಿ ವೈಟ್ನರ್ ಪೇಪರ್‌ಗೆ ಟಾರ್ಚ್‌ ಹಾಕಿ ನೋಡೋದು ಶೋಭೆ ತರೊಲ್ಲ: ಕುಮಾರಸ್ವಾಮಿ

ಕೆಎಫ್ ಸಿ - ದೇವನಹಳ್ಳಿ, ನುಪ ಟೆಕ್ನಾಲಜೀಸ್ (nupa technologies) - ಬಿಬಿಎಂಪಿ ದಕ್ಷಿಣ, ಮಮತಾ ಏಜೆನ್ಸಿ (Mamta Agency) - ಬಿಬಿಎಂಪಿ ದಕ್ಷಿಣ ಹಾಗೂ ವಿಶಾಲ್ ಬಾರ್ ಅಂಡ್ ರೆಸ್ಟೋರೆಂಟ್‌ (vishal Bar and Restaurant) - ಮೈಸೂರು ಇಲ್ಲಿನ ಆಹಾರ ಪದಾರ್ಥಗಳಲ್ಲಿ ಅತಿಯಾದ ರಸಾಯನಿಕ ಬಳಕೆ ಮಾಡಿರುವುದು ಕಂಡುಬಂದಿದ್ದು, ಇವುಗಳ ಲೈಸೆನ್ಸ್ ರದ್ದುಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

click me!