ಒಂದೇ ತಿಂಗಳಲ್ಲಿ ನಿಜವಾಯ್ತು ಕೋಡಿಮಠದ ಶ್ರೀಗಳ 'ಸ್ಫೋಟಕ' ಭವಿಷ್ಯ! ಮುಂದೆ ಕಾದಿದೆ ಮತ್ತೊಂದು ಗಂಡಾಂತರ!

By Ravi Janekal  |  First Published Mar 2, 2024, 9:46 AM IST

ಮುಂದಿನ ಗಂಡಾಂತರಗಳು ಎದುರಾಗುವ ಬಗ್ಗೆ ಜಗತ್ತಿನ ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಳೆದ ಜನೆವರಿ ತಿಂಗಳಲ್ಲಿ ಹೇಳಿದ್ದ ಸ್ಫೋಟಕ ಭವಿಷ್ಯ ಇದೀಗ ನಿಜವಾಗಿದೆ.


ಕೋಲಾರ: (ಮಾ.1:) ಮುಂದಿನ ಗಂಡಾಂತರಗಳು ಎದುರಾಗುವ ಬಗ್ಗೆ ಜಗತ್ತಿನ ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಳೆದ ಜನೆವರಿ ತಿಂಗಳಲ್ಲಿ ಹೇಳಿದ್ದ ಸ್ಫೋಟಕ ಭವಿಷ್ಯ ಇದೀಗ ನಿಜವಾಗಿದೆ. ಶ್ರೀಗಳು ಭವಿಷ್ಯ ನುಡಿದ ತಿಂಗಳೊಳಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಹತ್ತಾರು ಮಂದಿ ಗಂಭೀರ ಗಾಯಗೊಂಡಿರುವುದು ಸ್ವಾಮೀಜಿಗಳ ಭವಿಷ್ಯ ನಿಜವಾಗಿದೆ. 

2024ರ ವರ್ಷ ಒಳ್ಳೇದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗುತ್ತವೆ. ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗಲಿದೆ. ಬಾಂಬ್ ಸ್ಫೋಟ, ಭೂಕಂಪ, ಧಾರ್ಮಿಕ ಮುಖಂಡರ ಸಾವುಗಳು ಸಹ ಆಗಲಿವೆ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಹೊಸವರ್ಷ ಭಯಾನಕ ಅನುಭವ ನೀಡಲಿದೆ ಎಂದರು ಹೇಳಿದ್ದ ಕೋಡಿಮಠದ ಶ್ರೀಗಳು.

Tap to resize

Latest Videos

ಅಮಾವಾಸ್ಯೆ ಬಳಿಕ ರಾಜ್ಯದಲ್ಲಿ ಉತ್ತಮ ಮಳೆ, ಆದರೆ ಕೆಲವು ಅವಘಡ ನಡೆಯುವ ಸಂಭವ: ಕೋಡಿಮಠಶ್ರೀ ಭವಿಷ್ಯ

ಇನ್ನು ರಾಜ್ಯ ರಾಜಕೀಯದಲ್ಲಿ ಈ ವರ್ಷ ಏನು ನಡೆಯಲಿದೆ ಎಂಬ ಬಗ್ಗೆ ಈಗಲೇ ಸ್ಪಷ್ಟಪಡಿಸಿಲ್ಲ. ಆದರೆ ಯುಗಾದಿ ಕಳೆದ ನಂತರ ಹೇಳುವೆ ಎಂದಿರುವ ಸ್ವಾಮೀಜಿ. ಈ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ನನಗಿಂತ ನಿಮಗೆ ಚೆನ್ನಾಗಿಕ ಗೊತ್ತಿದೆ ಎಂದು ಪ್ರತಿಕ್ರಿಯಿಸಿರುವ ಸ್ವಾಮೀಜಿ.

News Hour: 10 ವರ್ಷಗಳ ನಂತರ ಬೆಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್‌!

ಯುಗಾದಿ ಆದ ಮೇಲೆಯೇ ಮಳೆ, ಬೆಳೆ, ರಾಜಕೀಯ, ದುಡಿಮೆ ವ್ಯಾಪಾರದ ಭವಿಷ್ಯ ಗೊತ್ತಾಗಲಿದೆ ಜಾಗತಿಕ ಮಟ್ಟದಲ್ಲಂತೂ ಈ ವರ್ಷ ಭಾರೀ ತೊಂದರೆಯಾಗಲಿದೆ. ಬೆಂಕಿ, ಪ್ರವಾಹ, ಯುದ್ಧ ಸಾವು ನೋವುಗಳು ಹೆಚ್ಚಾಗುತ್ತವೆ. ಯುಗಾದಿ ಬಳಿಕ ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿರುವ ಸ್ವಾಮೀಜಿ

click me!