ಮೊಸರು, ಮಜ್ಜಿಗೆ ದರ ಕೊಂಚ ಇಳಿಸಿದ KMF, ಆದ್ರೂ ಜನರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

By Suvarna News  |  First Published Jul 18, 2022, 10:27 PM IST

ದಿನ ನಿತ್ಯ ಬಳಕೆ ಮಾಡುವ ಹಾಗೂ ಅತ್ಯಂತ ಅನಿವಾರ್ಯವಾಗಿರೋ ವಸ್ತುಗಳ ದರವನ್ನು ಏರಿಕೆ ಮಾಡಲಾಗಿದೆ. ಇನ್ನು ಕೆಎಂಎಫ್ ಹಾಲಿನ ಉತ್ಪನ್ನಗಳ ಮೇಲೆ ದರವನ್ನು ಕೊಂಚ ಇಳಿಸಿದೆ. ಕೆಎಂಎಫ್​ನ ನೂತನ ದರ ಪಟ್ಟಿ ಇಲ್ಲಿದೆ


ಬೆಂಗಳೂರು, (ಜುಲೈ.18) ಇಂದಿನಿಂದ (ಜುಲೈ 18) ಆಹಾರ ಉತ್ಪನ್ನ ಸೇರಿ ಪ್ರಮುಖ ವಸ್ತುಗಳ ಮೇಲೆ ವಸ್ತುಗಳ ಮೇಲೆ ಜಿಎಸ್ಟಿ(GST) ಜಾರಿಯಾಗಿದ್ದು, ಇದ್ರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ.  ಅಲ್ಲದೇ ಎಲ್ಲೆಡೆ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರ ಮಧ್ಯೆ ಕೆಎಂಎಫ್ ಹಾಲಿನ ಉತ್ಪನ್ನಗಳ ದರ ಕೊಂಚ ಇಳಿಕೆ ಮಾಡಿದೆ.  5% ಜಿಎಸ್ಟಿ ಸೇರಿಸಿ ಕೆಎಂಎಫ್ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ.

Tap to resize

Latest Videos

ಕೆಎಂಎಫ್‌ನಿಂದ ಹೊಸ ದರಪಟ್ಟಿ ಬಿಡುಗಡೆ; ಹಾಲಿನ ಉತ್ಪನ್ನ ಇನ್ಮುಂದೆ ದುಬಾರಿ

ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್.ಟಿ, (ಸರಕು ಮತ್ತು ಸೇವಾ ತೆರಿಗೆ) ವಿಧಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಜಾರಿಗೆ ಬರುವಂತೆ ‘ನಂದಿನಿ’ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೊಟ್ಟಣಗಳ ಮಾರಾಟ ದರವನ್ನು ಪರಿಷ್ಕರಿಸಿದ್ದು,  ನಾಳೆಯಿಂದ(ಜುಲೈ19) ದರದಲ್ಲಿ ಕೊಂಚ ದರ ಕಡಿಮೆ ಮಾಡಲಾಗಿದೆ. 

ಉದಾಹರಣೆಗೆ  200ML ಮೊಸರು ಈ ಹಿಂದೆ 10ರೂಪಾಯಿ ಇತ್ತು. ಕೇಂದ್ರ ಸರ್ಕಾರ GST ಹಾಕಿದ ಬಳಿಕ ಅದು 12ರೂಪಾಯಿಗೆ ಏರಿತ್ತು. ಅಂದರೆ ಎರಡು ರೂಪಾಯಿ ಏರಿಕೆ ಆದಂತಾಯ್ತು. ಇದೀಗ ಕೆಎಂಎಫ್‌ ದರ ಪರಿಷ್ಕರಣೆ ಪ್ರಕಾರ 200ML ಮೊಸರು ಇದೀಗ  10ರೂ 50 ಪೈಸೆಗೆ ಗ್ರಾಹಕನ ಕೈ ಸೇರಲಿದೆ ಅಂದ್ರೆ, ಜೆಎಸ್‌ಟಿ ಸೇರಿಸಿ ಮುಂಚೆಗಿಂತ 1 ರೂಪಾಯಿ 50 ಪೈಸೆ ಹೆಚ್ಚಾದಂತಿದೆ.

ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ(GST Council Meeting) ಆಹಾರ ಉತ್ಪನ್ನ ಸೇರಿ ಪ್ರಮುಖ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿತ್ತು. ಜುಲೈ 18ರ ಸೋಮವಾರದಿಂದ ವಸ್ತುಗಳ ಮೇಲೆ ಜಿಎಸ್ಟಿ(GST) ಜಾರಿಯಾಗಿದ್ದು, ಇದ್ರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ.

ಕೆಎಂಎಫ್​ನ ನೂತನ ದರ ಪಟ್ಟಿ ಇಲ್ಲಿದೆ
* ಮೊಸರು 200ML ನಿನ್ನೆ(ಜು.17)- 10ರೂಪಾಯಿ ಇತ್ತು. ಇಂದು(ಜು.18) – 12ರೂಪಾಯಿಗೆ ಏರಿದೆ.  ನಾಳೆಯಿಂದ (ಜುಲೈ19) 10ರೂ 50 ಪೈಸೆ ಇರಲಿದೆ.
* ಮೊಸರು 500ML ಎಂಎಲ್ ನಿನ್ನೆ(ಜು.17)- 22ರೂ, ಇಂದು(ಜು.18) –24ರೂ, ನಾಳೆಯಿಂದ (ಜುಲೈ19) - 23ರೂ. 

* 1 ಲೀಟರ್ ಮೊಸರು ನಿನ್ನೆ(ಜು.17) -43ರೂ, ಇಂದು(ಜು.18)- 46, ನಾಳೆಯಿಂದ(ಜುಲೈ19)- 45ರೂ 

* ಮಜ್ಜಿಗೆ 200ML ನಿನ್ನೆ(ಜು.17)- 7ರೂ, ಇಂದು(ಜು.18) – 8ರೂ, ನಾಳೆಯಿಂದ (ಜುಲೈ19)  – 7ರೂ 50ಪೈಸೆ 

* ಲಸ್ಸಿ 200ML ಎಂಎಲ್ ನಿನ್ನೆ(ಜು.17)-10ರೂ, ಇಂದು(ಜು.18) – 11ರೂ, ನಾಳೆಯಿಂದ(ಜುಲೈ19)  – 10ರೂ 50ಪೈಸೆ 

click me!