ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಲೀಟರ್‌ಗೆ ಎಷ್ಟು ಕಡಿತ? ಪರಿಷ್ಕೃತ ದರಪಟ್ಟಿ ವಿವರ ಇಲ್ಲಿದೆ

Ravi Janekal   | Kannada Prabha
Published : Nov 29, 2026, 06:45 AM IST
KMF curd revised rates

ಸಾರಾಂಶ

ಕೆಎಂಎಫ್ ನಂದಿನಿ ಮೊಸರಿನ ದರವನ್ನು ಲೀಟರ್‌ಗೆ ₹2 ಮತ್ತು ಅರ್ಧ ಲೀಟರ್‌ಗೆ ₹1 ಇಳಿಕೆ ಮಾಡಿದೆ. ಪರಿಷ್ಕೃತ ದರದಂತೆ ಲೀಟರ್ ಮೊಸರು ₹66 ಹಾಗೂ ಅರ್ಧ ಲೀಟರ್ ಮೊಸರು ₹33ಕ್ಕೆ ಭಾನುವಾರದಿಂದ ರಾಜ್ಯಾದ್ಯಂತ ಲಭ್ಯವಾಗಲಿದೆ. ಇತ್ತೀಚಿನ ಬೆಲೆ ಏರಿಕೆಗೆ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬೆಂಗಳೂರು (ನ.29): ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ನಂದಿನಿ ಮೊಸರಿನ ದರವನ್ನು ಲೀಟರ್‌ಗೆ 2 ರು. ಇಳಿಕೆ ಮಾಡಿದ್ದು, ಪರಿಷ್ಕೃತ ದರ ಭಾನುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಪರಿಷ್ಕೃತ ದರದ ಪ್ರಕಾರ ಪ್ರತಿ ಲೀಟರ್ (ಕೆ.ಜಿ) ಮೊಸರಿನ ಮೇಲೆ 2 ರು. ಹಾಗೂ 500 ಮಿ.ಲೀ. (ಅರ್ಧ ಲೀಟರ್) ಪ್ಯಾಕೆಟ್‌ಗೆ 1 ರು. ಕಡಿತಗೊಳ್ಳಲಿದೆ. ಕಳೆದ ತಿಂಗಳಷ್ಟೇ ಹಾಲಿನಲ್ಲಿ ದರವನ್ನು ಲೀಟರ್‌ಗೆ 8ರಿಂದ 12 ರು.ವರೆಗೆ ಹೆಚ್ಚಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೊಸರಿನ ಬೆಲೆಯನ್ನು ಲೀಟರ್‌ಗೆ ಬರೋಬ್ಬರಿಗೆ 14 ರು. ಹಾಗೂ ಅರ್ಧ ಲೀಟರ್‌ಗೆ 6 ರು.ನಷ್ಟು ಹೆಚ್ಚಿಗೆ ಮಾಡಲಾಗಿತ್ತು

ಜನಾಕ್ರೋಶಕ್ಕೆ ಮಣಿದ ಸರ್ಕಾರ ಮೊಸರು ದರ ಇಳಿಕೆ

ದೈನಂದಿನ ಬಳಕೆ ವಸ್ತುವಿನ ಬೆಲೆಯನ್ನು ಒಮ್ಮೇಗೆ ಈ ಮಟ್ಟದಲ್ಲಿ ಏರಿಕೆ ಮಾಡಿದ್ದರ ವಿರುದ್ಧ ರಾಜ್ಯಾದ್ಯಂತ ಗ್ರಾಹಕರು, ಗೃಹಿಣಿಯರು ಮತ್ತು ಹೋಟೆಲ್‌ ಉದ್ಯಮಿಗಳಿಂದ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಬೆಲೆ ಏರಿಕೆ ಹಿಂಪಡೆಯುವಂತೆ ವ್ಯಾಪಕ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೊಸರಿನ ದರ 2 ರು. ಇಳಿಸಲು ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿ 20 ದಿನಗಳ ನಂತರ ಕೆಎಂಎಫ್‌ ಇದೀಗ ಮೊಸರಿನ ದರವನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಿದೆ.

ನಂದಿನಿ ಮೊಸರಿನ ಪರಿಷ್ಕೃತ ದರಪಟ್ಟಿ

ಪ್ರಮಾಣ ಹಳೆಯ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ)

ಅರ್ಧ ಲೀಟರ್ (500 ಗ್ರಾಂ) 34 33

ಒಂದು ಲೀಟರ್ (1 ಕೆ.ಜಿ) 68 66

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಿಯು ಕಾಲೇಜುಗಳ 814 ಉಪನ್ಯಾಸಕರ ಹುದ್ದೆಗಳಿಗೆ ಕೆಇಎ ನೇಮಕಾತಿ ಅಧಿಸೂಚನೆ: ಡಿ.25 ಅರ್ಜಿ ಸಲ್ಲಿಕೆಗೆ ಕಡೆ ದಿನ
ಬೆಳಗಾವಿ ಅಧಿವೇಶನ ಮುಕ್ತಾಯದ ಒಳಗೆ ಬರ ಪರಿಹಾರ ಸಿಗದಿದ್ರೆ ದೆಹಲಿ ಚಲೋ; ಕೇಂದ್ರಕ್ಕೆ ಡೆಡ್‌ಲೈನ್ ಕೊಟ್ಟ ಸಿಎಂ!