ಹಾಲಿನ ಮೇಲಿನ ದುಬಾರಿ ತೆರಿಗೆ ಇಳಿಕೆಗೆ ಕೆಎಂಎಫ್‌ ಆಗ್ರಹ

By Kannadaprabha News  |  First Published Jul 11, 2024, 12:45 PM IST

ಹಾಲಿನ ಮೇಲಿನ ದುಬಾರಿ ತೆರಿಗೆ ಇಳಿಕೆಗೆ ಕೆಎಂಎಫ್‌ ಆಗ್ರಹ ಹಾಲಿನ ಮೇಲಿನ ದುಬಾರಿ ತೆರಿಗೆ ಕಡಿಮೆ ಮಾಡಿದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಪ್ರತಿ ವರ್ಷ 30 ಕೋಟಿ ರು. ಉಳಿತಾಯವಾಗಲಿದೆ. 
 


ಬೆಂಗಳೂರು(ಜು.11): ಹಾಲಿಗೆ ಶೇ.5 ರಷ್ಟು ಜಿಎಸ್‌ಟಿ ತೆರಿಗೆಯಿದ್ದರೆ ಕಂಡೆನ್‌ಸ್ಡ್‌ ಹಾಲಿಗೆ (ಮಂದಗೊಳಿಸಿದ ಅಥವಾ ನೀರಿನಾಂಶ ತೆಗೆದ) ಶೇ.12 ರಷ್ಟು ದುಬಾರಿ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ನೇತೃತ್ವದ ನಿಯೋಗವು ಸಚಿವ ಕೃಷ್ಣಬೈರೇಗೌಡ ಅವರನ್ನು ಮನವಿ ಮಾಡಿದೆ.

ಬುಧವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಹಾಗೂ ಜಿಎಸ್‌ಟಿ ಕೌನ್ಸಿಲ್‌ನ ಕರ್ನಾಟಕ ಪ್ರತಿನಿಧಿಯಾಗಿರುವ ಕೃಷ್ಣ ಬೈರೇಗೌಡ ಅವರನ್ನು ಭೀಮಾನಾಯ್ಕ ಭೇಟಿ ಮಾಡಿದ್ದರು. ಹಾಲಿನ ಮೇಲಿನ ದುಬಾರಿ ತೆರಿಗೆ ಇಳಿಕೆಗೆ ಕೆಎಂಎಫ್‌ ಆಗ್ರಹ ಹಾಲಿನ ಮೇಲಿನ ದುಬಾರಿ ತೆರಿಗೆ ಕಡಿಮೆ ಮಾಡಿದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ (ಕೆಎಂಎಫ್) ಪ್ರತಿ ವರ್ಷ 30 ಕೋಟಿ ರು. ಉಳಿತಾಯವಾಗಲಿದೆ. 

Tap to resize

Latest Videos

ಗ್ರಾಹಕರಿಗೆ ಹಾಲಿನ ದರ ಏರಿಕೆ, ರೈತರಿಗೆ ಮಾರಟ ದರ ಇಳಿಕೆ: ಅನ್ನದಾತನಿಗೆ ಕೋಚಿಮುಲ್‌ನಿಂದ ಬಿಗ್ ಶಾಕ್!

ಹೀಗಾಗಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹಾಜರಿದ್ದರು.

click me!