ಕೇದಾರ ಕಾಪ್ಟರ್‌ ದುರಂತ: ಈರಣ್ಣ ಕಡಾಡಿ ಜಸ್ಟ್‌ಮಿಸ್‌!

Published : Jun 17, 2025, 05:25 AM IST
Iranna Kadadi

ಸಾರಾಂಶ

ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಿಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ದೇಶದ ಎಂಟು ಸಂಸದರು ಹಾಗೂ ಅವರ ಕುಟುಂಬಸ್ಥರು ಅದೃಷ್ಟವಶಾತ್‌ ಪಾರಾಗಿರುವ ಮಾಹಿತಿ ಲಭ್ಯವಾಗಿದೆ.

  ಬೆಳಗಾವಿ :  ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಿಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ದೇಶದ ಎಂಟು ಸಂಸದರು ಹಾಗೂ ಅವರ ಕುಟುಂಬಸ್ಥರು ಅದೃಷ್ಟವಶಾತ್‌ ಪಾರಾಗಿರುವ ಮಾಹಿತಿ ಲಭ್ಯವಾಗಿದೆ.

ಉತ್ತರಾಖಂಡದ ಕೇದಾರನಾಥ ಬಳಿ ಭಾನುವಾರ ಬೆಳಗ್ಗೆ ಹೆಲಿಕಾಪ್ಟರ್ ದುರಂತ ಸಂಭವಿಸಿ ಪೈಲಟ್ ಸೇರಿದಂತೆ ಏಳು ಯಾತ್ರಾರ್ಥಿಗಳು ಜೀವ ಕಳೆದುಕೊಂಡಿದ್ದರು. ಇದೇ ಹೆಲಿಕಾಪ್ಟರ್ ಮೂಲಕ ಕೇದಾರನಾಥ‌ಗೆ ಎಂಟು ಸಂಸದರು ಪ್ರವಾಸ ಬೆಳೆಸಬೇಕಿತ್ತು.

ಸಂಸದರು ಮೊದಲ ಬ್ಯಾಚ್‌ನಲ್ಲಿ ಹೋಗುವ ಹೆಲಿಕಾಪ್ಟರ್ ಮೂಲಕ ಕೇದಾರನಾಥ್‌ಗೆ ತೆರಳಬೇಕಿತ್ತು. ಡೆಹ್ರಾಡೂನ್‌ನಿಂದ ಕೇದಾರನಾಥಗೆ ತೆರಳಲು ಎಂಟು ಸಂಸದರಿಗೆ ಭಾನುವಾರ ಬೆಳಗ್ಗೆ 6ಕ್ಕೆ ಸಮಯ ನಿಗದಿ ಆಗಿತ್ತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪತ್ನಿ ಸುಮಿತ್ರಾ ಕಡಾಡಿ ಸೇರಿದಂತೆ 8 ಸಂಸದರು ತಮ್ಮ ಕುಟುಂಬಸ್ಥರೊಂದಿಗೆ ಪ್ರಯಾಣ ಬೆಳೆಸಬೇಕಿತ್ತು. ಮಹಾರಾಷ್ಟ್ರದ ಮಾವಲ್ ಕ್ಷೇತ್ರದ ಶಿವಸೇನೆ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಹಾಗೂ ಅವರ ಪತ್ನಿ, ಉತ್ತರ ಪ್ರದೇಶದ ಆಲಿಗಢ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಂ ಹಾಗೂ ಅವರ ಪತ್ನಿ, ಮಹಾರಾಷ್ಟ್ರ ಧಾರಸಿಂಹ ಕ್ಷೇತ್ರದ ಶಿವಸೇನೆ ಸಂಸದ ಓಂಪ್ರಕಾಶ ನಿಂಬಾಳ್ಕರ್ ಹಾಗೂ ಪತ್ನಿ, ಉತ್ತರ ಪ್ರದೇಶದ ರಾಜ್ಯಸಭೆ ಸದಸ್ಯೆ ಸಂಗೀತಾ ಯಾದವ್ ಹಾಗೂ ಅವರ ಪತಿ ಇದೇ ಹೆಲಿಕಾಪ್ಟರ್ ಮೂಲಕ ಕೇದಾರನಾಥ್​​ಗೆ ಪ್ರಯಾಣ ಬೆಳೆಸಬೇಕಿತ್ತು.

ಆದರೆ ಇವರೆಲ್ಲರೂ ಹೆಲಿಪ್ಯಾಡ್​ಗೆ ಬರುವುದು ವಿಳಂಬ ಆಗಿದ್ದರಿಂದ ಸಾಮಾನ್ಯ ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಕರೆದೊಯ್ದಿತ್ತು. ತಡವಾಗಿ ಬಂದ ಹಿನ್ನೆಲೆಯಲ್ಲಿ ಇವರು, ಎರಡನೇ ಬ್ಯಾಚ್‌‌ನ ಕಾಪ್ಟರ್‌​​ ಏರಿ ಕುಳಿತಿದ್ದರು. ಈ ಹೆಲಿಕಾಪ್ಟರ್​ ಟೇಕ್ ಆಫ್ ಕೂಡ ಆಗಿತ್ತು. ಆದರೆ ಮೊದಲ ಬ್ಯಾಚ್​​ನಲ್ಲಿ ಹೋಗಿದ್ದ ಹೆಲಿಕಾಪ್ಟರ್​ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಸದರ ಕಾಪ್ಟರ್‌ ಅನ್ನು ವಾಪಸ್‌ ಕರೆಸಿಕೊಳ್ಳಲಾಯಿತು. ಆ ಕಾಪ್ಟರ್‌ ಸುರಕ್ಷಿತವಾಗಿ ಇಳಿಯಿತು.

ಪಾರಾಗಿದ್ದು ಹೇಗೆ?

- ಈರಣ್ಣ ಕಡಾಡಿ ಸೇರಿ 8 ಸಂಸದರು ಮೊದಲ ಬ್ಯಾಚಿನ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥಕ್ಕೆ ಹೋಗಬೇಕಿತ್ತು

- ಬೆಳಗ್ಗೆ 6ಕ್ಕೆ ಸಂಸದರು, ಅವರ ಕುಟುಂಬ ಹೆಲಿಪ್ಯಾಡ್‌ ತಲುಪಬೇಕಿತ್ತು. ಆದರೆ ಇವರು ಹೋಗುವುದು ತಡವಾಯ್ತು

- ಸಂಸದರ ನಿಯೋಗ ಬಾರದ ಕಾರಣ ಸಾಮಾನ್ಯ ಯಾತ್ರಾರ್ಥಿಗಳನ್ನು ಹೊತ್ತು ಹೆಲಿಕಾಪ್ಟರ್ ಹಾರಾಟ ಆರಂಭಿಸಿತು

- 2ನೇ ಬ್ಯಾಚಿನ ಹೆಲಿಕಾಪ್ಟರ್‌ನಲ್ಲಿ ದೇಶದ 8 ಸಂಸದರ ನಿಯೋಗ ಕುಳಿತಿತು. ಅದು ಟೇಕಾಫ್‌ ಕೂಡ ಆಯಿತು

- ಆದರೆ ಅಷ್ಟರಲ್ಲಿ ಮೊದಲ ಬ್ಯಾಚಿನ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿಯಿತು. ಸಂಸದರ ಹೆಲಿಕಾಪ್ಟರ್‌ ವಾಪಸಾಯಿತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ