
ಕಲಬುರಗಿ(ನ.18): ಕೆಇಎ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸದ್ಯ ಸಿಐಡಿ ವಶದಲ್ಲಿರುವ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಈ ಹಿಂದೆ ಮಾಧ್ಯಮದವರ ವಿರುದ್ಧ ಹರಿಹಾಯ್ದಂತೆ ಇದೀಗ ಸಿಐಡಿ ವಿರುದ್ಧವೂ ಹರಿ ಹಾಯ್ದಿದ್ದಾನೆ.
ಆತನನ್ನು ವೈದ್ಯಕೀಯ ತಪಾಸಣೆಗಾಗಿ ಜಿಮ್ಸ್‌ಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಸಿಐಡಿ ವಿರುದ್ಧ ಆರ್‌ಡಿ ಪಾಟೀಲ್ ಕಿಡಿ ಕಾರಿದ ಪ್ರಸಂಗ ನಡೆಯಿತು.
ಕ್ಯಾಮೆರಾ ಕಂಡೊಡನೆ ಆಕ್ರೋಶ ಶುರು ಮಾಡಿದ ಆರ್.ಡಿ ಪಾಟೀಲ್ ಅಮಾಯಕರನ್ನ ಈ ಪ್ರಕರಣದಲ್ಲಿ ಬಂಧಿಸುತ್ತಿದ್ದಾರೆ. ಅಲ್ಲದೇ ಬಂಧಿತರಿಂದ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕೇಸ್‌ಗೆ ಸಂಬಂಧವೇ ಇಲ್ಲದ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ದೂರಿದರು.
ಅರ್ಜಿ ದಿನದಿಂದಲೇ ಕೆಇಎ ಪರೀಕ್ಷಾ ಅಕ್ರಮಕ್ಕೆ ಆರ್.ಡಿ.ಪಾಟೀಲ್ ಸ್ಕೆಚ್?
ಜೆಇ ರುದ್ರಗೌಡ ಅಮಾಯಕ, ಅವನಿಗೂ ಇದಕ್ಕೂ ಸಂಬಂಧ ಇಲ್ಲ, ಆದರೂ ಆತನನ್ನು ಬಂಧಿಸಲಾಗಿದೆ. ಇದೆಲ್ಲಾ ಕಾನೂನು ಬಾಹೀರ ಎಂದು ಸಿಐಡಿ ವಿರುದ್ಧ ಆರ್‌ಡಿ ಪಾಟೀಲ್ ತನ್ನ ಆಕ್ರೋಶ ಹೊರಹಾಕಿದ ಪ್ರಸಂಗ ನಡೆದಿದೆ.
ಸಲಾಂ ಹೊಡೆದ ಪೊಲೀಸ್:
ಶುಕ್ರವಾರ ವೈದ್ಯಕೀಯ ತಪಾಸಣೆಗಾಗಿ ಆರ್.ಡಿ ಪಾಟೀಲ್‌ನನ್ನು ಜಿಮ್ಸ್‌ಗೆ ಕರೆದೊಯ್ಯುವಾಗ ಪೇದೆಯೊಬ್ಬ ಸಲಾಂ ಹೊಡೆದಿದ್ದಾನೆ. ಪೊಲೀಸ್ ಜೀಪ್‌ನಿಂದ ಇಳಿದು ಬರುತ್ತಿದ್ದಂತೆಯೇ ಎದುರು ಬಂದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಆರ್.ಡಿ. ಪಾಟೀಲ್‌ಗೆ ನಮಸ್ಕಾರ ಸಲ್ಲಿಸಿದ ಪ್ರಸಂಗ ಇಂದು ನಡೆಯಿತು. ಇದೆ ಹೊತ್ತಲ್ಲೇ ಆರ್.ಡಿ ಪಾಟೀಲ್ ಪೊಲೀಸ್ ಸಮ್ಮುಖದಲ್ಲಿಯೇ ಸಿಐಡಿ ವಿರುದ್ಧ ಆಕ್ರೋಶ ಹೊರಹಾಕಿದ ಘಙಟನೆಯೂ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ