
ಶ್ರೀರಂಗಪಟ್ಟಣ (ಅ.03): ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ ಕಾವೇರಿ ನದಿಗೂ ಅ.3ರಿಂದ 7ರವರೆಗೆ ಒಟ್ಟು 5 ದಿನಗಳ ಕಾಲ ಪ್ರಾಯೋಗಿಕವಾಗಿ ಆರತಿ ಮಾಡಲು ಸರ್ಕಾರ ಮುಂದಾಗಿದೆ. ಶ್ರೀರಂಗಪಟ್ಟಣದಲ್ಲಿ ದಸರಾ ಆಗುವ ಮೊದಲು ಕಾವೇರಿಗೆ ಪ್ರಥಮ ಪೂಜೆ ಸಲ್ಲಿಸಲು ಸೆ.3ರಿಂದ 5 ದಿನಗಳ ಕಾಲ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸುವ ಈಗಾಗಲೇ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಜ್ಯೋತಿಷಿ ಡಾ. ಭಾನುಪ್ರಕಾಶ್ ಸೇರಿದಂತೆ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕಾವೇರಿ ಆರತಿ ಸಂಬಂಧಿತವಾಗಿ ಈಗಾಗಲೇ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿಯ ಕಾವೇರಿ ಸ್ನಾನಘಟ್ಟದಲ್ಲಿ ನಡೆಸಲು ಸಿದ್ಧತೆ ಸಾಗಿದೆ.
ಹರಿದ್ವಾರದ ಗಂಗಾರತಿ ಮಾದರಿ: ಹರಿದ್ವಾರ ಹಾಗೂ ಕಾಶಿ ಮಾದರಿಯಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ಥ ಸಮಯದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕಾವೇರಿ ನದಿಗೂ ಮಹಾ ಆರತಿ ನಡೆಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ಎ.ಬಿ.ರಮೇಶ ಬಂಡಿಸಿದ್ದೈಗೌಡ ಅವರನ್ನೊಳಗೊಂಡ ರಾಜ್ಯದ ಶಾಸಕರ ನಿಯೋಗ ಕೆಲ ದಿನಗಳ ಹಿಂದಷ್ಟೈ ಹರಿದ್ವಾರ ಹಾಗೂ ವಾರಣಾಸಿಗೆ ಭೇಟಿ ನೀಡಿ ಧಾರ್ಮಿಕ ಮುಖಂಡರಲ್ಲಿ ಚೆರ್ಚೆ ನಡೆಸಿ , ಅಲ್ಲಿನ ಸ್ಥಳ ವೀಕ್ಷಿಸಿ ಗಂಗಾರತಿ ಸಂಬಂಧ ಮಾಹಿತಿ ಪಡೆದುಕೊಂಡಿದ್ದರು.
ಇಂದು ಸುಳ್ಳು ಸುದ್ದಿ, ತೇಜೋವಧೆ ಸುದ್ದಿ ಹೆಚ್ಚಿವೆ: ಸಿಎಂ ಸಿದ್ದರಾಮಯ್ಯ ಕಳವಳ
ನಂತರ ಕಾವೇರಿ ಆರತಿಗಾಗಿ ಕೆಆರ್‌ಎಸ್, ಶ್ರೀರಂಗಪಟ್ಟಣ, ತಲಕಾವೇರಿ, ಕಾವೇರಿ ಸಂಗಮ ಸೇರಿದಂತೆ ಎರಡ್ಮೂರು ಸ್ಥಳಗಳನ್ನು ಪರಿಶೀಲಿಸಿ ಕಾವೇರಿ ಆರತಿ ಮಾಡಲು ಸರ್ಕಾರದ ವತಿಯಿಂದ ನಿರ್ಧರಿಸಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಗಂಗಾರತಿಯ ಪೂಜಾ ವಿಧಿಧ ವಿಧಾನ ಕಾವೇರಿ ಆರತಿಗೆ ಬೇಕಿರುವ ಮೂಲಸೌಕರ್ಯ ಸಂಬಂಧ ಚರ್ಚಿಸಿ ಅಂತಿಮ ತಿರ್ಮಾನ ಕೈಗೊಳ್ಳಲಾಗುತ್ತದೆ.
ಸಪ್ತ ಋಷಿ ಪೂಜೆ: ಕಾವೇರಿ ಆರತಿ ಪೂಜೆಯಲ್ಲಿ 7 ಮಂದಿ ಅರ್ಚಕರು ಸೇರಿ 20 ಜನರ ತಂಡ ವಾರದಲ್ಲಿ ಎರಡು ದಿನ ಕಾವೇರಿ ಆರತಿ ನಡೆಸಿಕೊಡಲಿದ್ದು. ಆರತಿಯಲ್ಲಿ ಸಪ್ತ ಋುಷಿಗಳನ್ನು ಪೂಜಿಸಿ, ಗಣಪತಿ ಪ್ರಾರ್ಥನೆ, ಕಾವೇರಿ ಪೂಜೆ, ಕಾವೇರಿ ಮಹಾಆರತಿ ಕಾರ್ಯ ನಡೆಸಲಾಗುತ್ತದೆ ಎಂದು ಡಾ.ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಲು ಮೈತ್ರಿ ಅಗತ್ಯ: ನಿಖಿಲ್ ಕುಮಾರಸ್ವಾಮಿ
ಯೋಜನೆ ರೂಪುಗಳು: ದಸರಾ ಪ್ರಯುಕ್ತ ಪ್ರಾಯೋಗಿಕವಾಗಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ನಿಗದಿತ ಸ್ಥಳ ಗುರುತಿಸಿ ನಿರಂತರವಾಗಿ ಕಾವೇರಿ ಆರತಿ ಮಾಡುವ ಸಂಬಂಧ ಹೊಸ ಯೋಜನೆಯನ್ನು ಮುಖ್ಯ ಮಂತ್ರಿಗಳು ಸರ್ಕಾರದ ಮಟ್ಟದ ಸಮಿತಿ ರಚಿಸಿ ಯೋಜನೆಗಳ ರೂಪಿಸಿ ಚಾಲನೆ ನೀಡಲಿದ್ದಾರೆ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.ಸಾಂಕೇತಿಕವಾಗಿ ಕಾವೇರಿ ಆರತಿ ಯಶಸ್ವಿಯಾದರೆ ಪ್ರತಿದಿನ ಮುಂದುವರಿಸುವ ಚಿಂತನೆ ಮಾಡಲಾಗಿದೆ. ಸರ್ಕಾರದಿಂದ ಇನ್ನು ಕಾವೇರಿ ಆರತಿ ನಿಗದಿ ಆಗಿಲ್ಲ. ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ