ಚಳಿಗಾಲದ ವೇಳಾಪಟ್ಟಿ ಜಾರಿಗೊಳಿಸಿದ ಮಂಗಳೂರು ಅಂತರಾಷ್ಟ್ರೀಯ ಏರ್‌ಪೋರ್ಟ್, ವಿದೇಶಗಳಿಗೂ ಸಾಪ್ತಾಹಿಕ ಸಂಚಾರ

Published : Oct 26, 2025, 02:26 PM IST
mangaluru airport

ಸಾರಾಂಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ. 26 ರಿಂದ ಜಾರಿಗೆ ಬರುವ ಚಳಿಗಾಲದ ಹೊಸ ವಿಮಾನಯಾನ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ದೆಹಲಿಗೆ ಹೆಚ್ಚುವರಿ ದೈನಂದಿನ ವಿಮಾನ, ತಿರುವನಂತಪುರಂಗೆ ಹೊಸ ಸಂಚಾರ ಮತ್ತು ದಮಾಮ್, ದೋಹಾ, ಕುವೈತ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇರಿವೆ.

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ.26ರಿಂದ ಆರಂಭವಾಗುವ ಚಳಿಗಾಲದ ವಿಮಾನಯಾನ (ದೇಶೀಯ ಮತ್ತು ಅಂತಾರಾಷ್ಟ್ರೀಯ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಂಗಳೂರಿನಿಂದ ದೆಹಲಿಗೆ ಹೆಚ್ಚುವರಿ 2ನೇ ದೈನಂದಿನ ವಿಮಾನ ಸಂಚಾರ, ಮಂಗಳೂರು-ತಿರುವನಂತಪುರಂ ನಡುವೆ ವಾರಕ್ಕೆ ಮೂರು ಬಾರಿ ಸಂಚಾರ ಆರಂಭ, ದಮಾಮ್, ದೋಹಾ, ಕುವೈತ್‌, ಜೆಡ್ಡಾ ಮತ್ತು ಬದ್ರೇನ್‌ಗೆ ಹೆಚ್ಚುವರಿ ಸಾಪ್ತಾಹಿಕ ವಿಮಾನ ಸಂಚಾರ ಸೇರಿದಂತೆ ವಿವಿಧೆಡೆ ವಿಮಾನಯಾನ ಆರಂಭಿಸಲು ವೇಳಾಪಟ್ಟಿ ಪ್ರಕಟಿಸಿದೆ. ಇದು 2026ರ ಮಾ.28 ರವರೆಗೆ ಮುಂದುವರಿಯಲಿದೆ.

27ರಿಂದ ದೆಹಲಿಗೆ ಹೆಚ್ಚುವರಿ ವಿಮಾನ:

ಈಗಾಗಲೇ ಮಂಗಳೂರು- ದೆಹಲಿ ನಡುವೆ ಏರ್‌ಇಂಡಿಯಾ ಎಕ್ ಪ್ರೆಸ್ (ಐಗಿ 1275 / ಐಗಿ 1276) ದಿನಂಪ್ರತಿ ಕಾರ್ಯ ನಿರ್ವಹಿಸುತ್ತಿದೆ. ಈಗ ಹೆಚ್ಚುವರಿಯಾಗಿ ಅ.27ರಿಂದ ಎರಡನೇ ದೈನಂದಿನ ವಿಮಾನವನ್ನು (ಐಗಿ 1781 / ಐಗಿ 1782) ಪರಿಚಯಿಸಲಿದೆ. ಇದರೊಂದಿಗೆ ಬೆಂಗಳೂರಿಗೆ ಪ್ರತಿದಿನ ಎರಡು ಮತ್ತು ಮುಂಬೈಗೆ ದಿನಂಪ್ರತಿ ಒಂದು ವಿಮಾನ ಸಂಚಾರ ಮುಂದುವರಿಯಲಿದೆ.

ವೇಳಾಪಟ್ಟಿ ಇಂತಿದೆ:

ಏರ್ ಇಂಡಿಯಾ (ಐಗಿ 1781) ಹೆಚ್ಚುವರಿ ವಿಮಾನವು ಪ್ರತಿದಿನ ಮಂಗಳೂರಿನಿಂದ 12.30 ಗಂಟೆಗೆ ಹೊರಟು 15:25ಕ್ಕೆ ದೆಹಲಿ ತಲುಪಲಿದೆ.ದೆಹಲಿಯಿಂದ (ಐಗಿ 1782) 16:15ಕ್ಕೆ ಹೊರಟು 19:10 ಗಂಟೆಗೆ ಮಂಗಳೂರು ತಲುಪಲಿದೆ. ದೆಹಲಿಗೆ ಒಂದು ಹೆಚ್ಚುವರಿ, ತಿರುವನಂತಪುರಂಗೆ ಹೊಸ ವಿಮಾನ, ವಿದೇಶಗಳಿಗೆ ಹೆಚ್ಚುವರಿ ಸಂಚಾರ

ತಿರುವನಂತಪುರಂ ವಿಮಾನ

ಮಂಗಳೂರು ಏರ್ ಪೋರ್ಟ್‌ನಿಂದ ಈ ವರ್ಷ ಹೊಸದಾಗಿ ಕೇರಳದ ತಿರುವನಂತಪುರಂಗೆ ವಾರಕ್ಕೆ ಮೂರು ಬಾರಿ ನೂತನ ವಿಮಾನ ಸಂಚಾರ ಅ.27ರಿಂದ ಆರಂಭವಾಗಲಿದೆ. ಪ್ರತಿ ಸೋಮವಾ ಸೋಮವಾರ, ಬುಧವಾರ ಮತ್ತು ಶುಕ್ರವಾರ ಏರ್ ಇಂಡಿಯಾ (ಐಗಿ 5531) ಮಂಗಳೂರಿನಿಂದ 9.15ಕ್ಕೆ ಹೊರಟು 10.35ಕ್ಕೆ ತಿರುವನಂತಪುರಂ ತಲುಪಲಿದೆ. ಅದೇ ರೀತಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ತಿರುವನಂತಪುರಂನಿಂದ 4.25ಕ್ಕೆ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 5.45ಕ್ಕೆ ತಲುಪಲಿದೆ.

ಅಂತಾರಾಷ್ಟ್ರೀಯ ವಿಮಾನಯಾನ

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಈ ಋತುಮಾನದಲ್ಲಿ ದುಬೈಗೆ ವಾರದಲ್ಲಿ ಆರು ದಿನ ಮತ್ತು ಪ್ರತಿ ಮಂಗಳವಾರ ಒಂದು ವಿಮಾನವನ್ನು ನಿರ್ವಹಿಸಲಿದೆ. ಅಬುಧಾಬಿಗೆ ಪ್ರತಿದಿನ ಒಂದು ವಿಮಾನ, ದಮ್ಮಾಮ್‌ಗೆ ವಾರಕ್ಕೆ ಐದು, ಬಕ್ರೇನ್, ದೋಹಾ, ಜೆಡ್ಡಾ ಮತ್ತು ಕುವೈತ್‌ಗೆ ಕ್ರಮವಾಗಿ ವಾರಕ್ಕೆ ಮೂರು ವಿಮಾನ ಸಂಚಾರ ನಡೆಸಲಿದೆ. ದಮ್ಮಾಮ್ ಮತ್ತು ದೋಹಾಕ್ಕೆ ಕ್ರಮವಾಗಿ ಈಗಿರುವ 4 ಮತ್ತು 2 ವಿಮಾನಗಳಿಗೆ ಹೆಚ್ಚುವರಿಯಾಗಿ ಒಂದು ವಿಮಾನ ಸಂಚಾರ ಮಾಡಲಿದೆ. ಬನ್, ಕುವೈತ್‌ ಮತ್ತು ಜೆಡ್ಡಾಗೆ ಇನ್ನೂ ಎರಡು ಹೆಚ್ಚುವರಿ ಸಾಪ್ತಾಹಿಕ ವಿಮಾನಗಳನ್ನು ಸೇರಿಸಿದೆ.

ದೇಶೀಯವಾಗಿ ಇಂಡಿಗೊ ಸಂಸ್ಥೆಯು ಬೆಂಗಳೂರಿಗೆ ಆರು, ಮುಂಬೈಗೆ ಮೂರು, ಹೈದರಾಬಾದ್‌ಗೆ ಎರಡು ಮತ್ತು ದೆಹಲಿ ಮತ್ತು ಚೆನ್ನೈಗೆ ತಲಾ ಒಂದು ವಿಮಾನ ಸಂಚಾರ ನಡೆಸಲಿದೆ. ಅಲ್ಲದೆ, ಹೈದರಾಬಾದ್ ಮತ್ತು ಚೆನ್ನೈಗೆ 72 ಆಸನಗಳ ಎಟಿಆರ್‌ವಿಮಾನವನ್ನು ಮತ್ತು ಇತರ ಮೂರು ದೇಶೀಯ ಸ್ಥಳಗಳಿಗೆ (ಬೆಂಗಳೂರು, ಮುಂಬೈ, ದೆಹಲಿ) ಏರ್‌ಬಸ್ ಎ -320 / 321 ವಿಮಾನವನ್ನು ನಿಯೋಜಿಸಲಿದೆ. ಅಂತಾರಾಷ್ಟ್ರೀಯವಾಗಿ, ಇಂಡಿಗೊ ಅಬುಧಾಬಿಗೆ ಪ್ರತಿದಿನ ಒಂದು ವಿಮಾನ ಮತ್ತು ದುಬೈಗೆ ವಾರಕ್ಕೆ ನಾಲ್ಕು ಏರ್‌ಬಸ್ ಫೀಟ್ ವಿಮಾನಗಳನ್ನು ನಿರ್ವಹಿಸಲಿದೆ ಎಂದು ಮಂಗಳೂರು ಏರ್‌ಪೋರ್ಟ್ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!