ದೋಟ್ ದುರಂತದಲ್ಲಿ ಮೃತಪಟ್ಟಿದ್ದ ಬಾಲಕನೋರ್ವನ ಮೃತದೇಹ 100 ಕ.ಮೀ ದೂರದಲ್ಲಿ ಪತ್ತೆಯಾಗಿದೆ. ಕಾರವಾರದಲ್ಲಿ ದುರಂತ ಸಂಭವಿಸಿದ್ದು, ಭಟ್ಕಳ ಸಮೀಪ ಮೃತದೇಹ ಪತ್ತೆಯಾಗಿದೆ.
ಕಾರವಾರ: ಕಳೆದ ಸೋಮವಾರ ಕೂರ್ಮಗಡ ಬೋಟ್ ದುರಂತದಲ್ಲಿ ನೀರುಪಾಲಾಗಿದ್ದ ಬಾಲಕನೊಬ್ಬನ ಮೃತದೇಹ ದುರ್ಘಟನಾ ಸ್ಥಳದಿಂದ 100 ಕಿ.ಮೀ. ದೂರದ ಭಟ್ಕಳದಲ್ಲಿ ಪತ್ತೆಯಾಗಿದೆ.
ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಸಂದೀಪ ಬೆಳವಳಕೊಪ್ಪನ ಎಂಬ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು, ಈ ಮೂಲಕ ನಾಪತ್ತೆಯಾಗಿದ್ದ ಎಲ್ಲರ ಮೃತದೇಹಗಳೂ ಪತ್ತೆಯಾದಂತಾಗಿದೆ.
ಭಾನುವಾರ ಸಂಜೆ ನೇತ್ರಾಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೆಲವು ಮೀನುಗಾರರು ಮೃತದೇಹ ತೇಲಿ ಹೋಗುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಭಟ್ಕಳ ಸುತ್ತಮುತ್ತಲಿನ ಸಮುದ್ರ ಹಾಗೂ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ಭಟ್ಕಳ ಅಳ್ವೇಕೋಡಿ ಬಳಿ ಸಂದೀಪ ದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ.