
ಬೆಂಗಳೂರು (ಜುಲೈ.31): ಜಾಗತಿಕವಾಗಿ ಈ ಮೊದಲು ಎಲ್ಲೂ ಗುರುತಿಸಲಾಗದ ಹೊಸ ರಕ್ತದ ಗುಂಪು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ಇದನ್ನು ‘ಸಿಆರ್‌ಐಬಿ’ ಎಂದು ಹೆಸರಿಸಲಾಗಿದೆ.
ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಪ್ರಯತ್ನದಿಂದಾಗಿ ಹೊಸ ಗುಂಪು ಗುರುತಿಸಲಾಗಿದೆ. ಯುಕೆ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯ (ಐಬಿಜಿಆರ್‌ಎಲ್) ಈ ಹೊಸ ರಕ್ತದ ಗುಂಪನ್ನು ಪತ್ತೆ ಹೆಚ್ಚಿದೆ. ರಕ್ತಕಣಗಳನ್ನು 10 ತಿಂಗಳ ವ್ಯಾಪಕ ಸಂಶೋಧನೆಗೆ ಒಳಪಡಿಸಿದ ಬಳಿಕ ಈ ಹೊಸ ಪ್ರತಿಜನಕವು ಕ್ರೋಮರ್ (ಸಿಆರ್) ರಕ್ತದ ಗುಂಪು ವ್ಯವಸ್ಥೆಯ ಭಾಗವಾಗಿರುವುದು ತಿಳಿದುಬಂದಿದೆ.
ಇದರ ಮೂಲವನ್ನು ಗುರುತಿಸಿ ಈ ರಕ್ತದ ಗುಂಪಿಗೆ ಅಧಿಕೃತವಾಗಿ ‘CRIB’ ಎಂದು ಹೆಸರಿಡಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 38 ವರ್ಷದ ಕೋಲಾರದ ಮಹಿಳೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದರು. ಅವರ ರಕ್ತದ ಗುಂಪು ‘ಒ ಆರ್‌ಎಚ್+’ ಪಾಸಿಟಿವ್ ಎಂದು ಬರೆದುಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಅವರ ರಕ್ತ ಆಸ್ಪತ್ರೆಯಲ್ಲಿ ಲಭ್ಯವಿದ್ದ ‘ಒ+’ ಗುಂಪಿನ ರಕ್ತಕ್ಕೆ ಹೊಂದಾಣಿಕೆ ಆಗಿರಲಿಲ್ಲ. ಹೆಚ್ಚಿನ ಪರೀಕ್ಷೆಗಾಗಿ ಮಹಿಳೆಯ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆರೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಮಹಿಳೆಯ ರಕ್ತವು ‘ಪ್ಯಾನ್ರಿಯಾಕ್ಟಿವ್’ ಅಂದರೆ ಅವರ ರಕ್ತವು ಯಾವುದೇ ಮಾದರಿ ಜೊತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ತಿಳಿಯಿತು ಎಂದು ವರದಿ ಬಂದಿದ್ದಾಗಿ ರಕ್ತ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಮಾಥುರ್ ತಿಳಿಸಿದ್ದಾರೆ. ಕೊನೆಗೆ ಆಕೆಗೆ ರಕ್ತ ನೀಡದೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ