ವಕ್ಫ್ ಆಸ್ತಿ ವಿವಾದ: ರೈತಪರ ಹೋರಾಡಬೇಕಾದ ರಾಕೇಶ್ ಟಿಕಾಯತ್ ಯಾಕೆ ಮೌನ? ರೈತ ಸಂಘಟನೆಗಳು ಎಲ್ಲಿ ಅಡಗಿವೆ? ಯತ್ನಾಳ್ ಕಿಡಿ

Published : Nov 09, 2024, 05:50 PM IST
ವಕ್ಫ್ ಆಸ್ತಿ ವಿವಾದ: ರೈತಪರ ಹೋರಾಡಬೇಕಾದ ರಾಕೇಶ್ ಟಿಕಾಯತ್ ಯಾಕೆ ಮೌನ? ರೈತ ಸಂಘಟನೆಗಳು ಎಲ್ಲಿ ಅಡಗಿವೆ? ಯತ್ನಾಳ್ ಕಿಡಿ

ಸಾರಾಂಶ

ರಾಜ್ಯದಲ್ಲಿ ವಕ್ಫ್ ಆಸ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.  2019 ರಲ್ಲಿ ಇಡೀ ದೇಶದಲ್ಲಿ 5 ಲಕ್ಷ 81 ಸಾವಿರ ಎಕರೆ ವಕ್ಫ್ ಆಸ್ತಿ ಇದೆ ಎಂದು ಹೇಳಿದ್ರು. ಇದೀಗ ಕಾನೂನು‌ ಮಂತ್ರಿಗಳು ಹೇಳ್ತಾರೆ ಒಂಬತ್ತೂವರೆ ಲಕ್ಷ ಎಕರೆ ಅಂತ ವಕ್ಫ್ ಆಸ್ತಿ ಬೆಳೆಯಲು ಇದೇನು ಗಿಡವೇ? ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ (ನ.9): ರಾಜ್ಯದಲ್ಲಿ ವಕ್ಫ್ ಆಸ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.  2019 ರಲ್ಲಿ ಇಡೀ ದೇಶದಲ್ಲಿ 5 ಲಕ್ಷ 81 ಸಾವಿರ ಎಕರೆ ವಕ್ಫ್ ಆಸ್ತಿ ಇದೆ ಎಂದು ಹೇಳಿದ್ರು. ಇದೀಗ ಕಾನೂನು‌ ಮಂತ್ರಿಗಳು ಹೇಳ್ತಾರೆ ಒಂಬತ್ತೂವರೆ ಲಕ್ಷ ಎಕರೆ ಅಂತ ವಕ್ಫ್ ಆಸ್ತಿ ಬೆಳೆಯಲು ಇದೇನು ಗಿಡವೇ? ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಆಸ್ತಿ ವಿವಾದ ಸಂಬಂಧ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಯತ್ನಾಳ್ ಅವರು, ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಮೊದಲೇ ಸಿದ್ಧರಾಮಯ್ಯ ಹಾಗೂ ಜಮೀರ್ ರಾಜ್ಯದಲ್ಲಿ ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ. ಆದರೆ ನಾವು ಅದಕ್ಕೆ ಅವಕಾಶ ನೀಡಲ್ಲ. ಯಾವುದೇ ಪರುಸ್ಥಿತಿಯಲ್ಲೂ ನಾವು ಈ ತಿದ್ದುಪಡಿ ಮಾಡೇ ಮಾಡುತ್ತೇವೆ ಎಂದರು.

 

ಕಾಂಗ್ರೆಸ್‌ನೊಂದಿಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳದ ಬಿಜೆಪಿ ನಾಯಕರ ಮೇಲೆ ಸರ್ಕಾರ ಕೇಸ್ ಹಾಕಿದೆ; ಯತ್ನಾಳ್!

ಇನ್ನು  JPC ನಾಟಕ ಕಂಪನಿ‌ ಎಂಬ ಡಿಸಿಎಂ ಡಿ.ಕೆ.ಶಿ‌ವಕುಮಾರ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಯತ್ನಾಳ್, ಡಿ.ಕೆ.ಶಿವಕುಮಾರನೇ‌ ಒಬ್ಬ ನಾಟಕ‌ ಕಂಪನಿ. ತಿಹಾರ ಜೈಲಿಗೆ ಹೋದಾಗ ಅನಾರೋಗ್ಯ ವಿಚಾರವಾಗಿ ನಾಟಕವಾಡಿದ್ದ ಈಗ ಎಗರಾಡಿ‌ ಭಾಷಣ ಮಾಡುತ್ತಿದ್ದಾನೆ. JPC ಅಧ್ಯಕ್ಷರು ಸರ್ಕಾರವನ್ನ ಯಾವುದೇ ರೀತಿ ದುರುಪಯೋಗ ಮಾಡಿಲ್ಲ. ಬೇಕಾಬಿಟ್ಟಿಯಾಗಿ ನೋಟೀಸ್ ಕೊಡ್ತಾರೆ, ದೇವಸ್ಥಾನಗಳನ್ನೇ ವಕ್ಫ್ ಆಸ್ತಿ ಅಂತಾರೆ ನಾಚಿಕೆ ಆಗಬೇಕು ನಿಮಗೆಲ್ಲ. ಹಾವೇರಿ ರೈತನ ವಿಚಾರದಲ್ಲೂ ಹೀಗೆ ಮಾಡಿದ್ದಾರೆ. ಎಲ್ಲವೂ ಶೀಘ್ರವೇ ಹೊರಬರಲಿದೆ. ಈವರೆಗೂ ಯಾರಾರಿಗೆ ನೋಟೀಸ್ ನೀಡಿ ವಾಪಸ್ ಪಡೆದಿದ್ದಾರೆ ಎಂಬುದು ತಿಳಿಯುತ್ತದೆ. ಇವರು ಕರ್ನಾಟಕವನ್ನ ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ಪಾಕಿಸ್ತಾನ ಮಾಡಲು ಹೊರಟಿದೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಾವು ಉಪಚುನಾವಣೆ ಉದ್ದೇಶದಿಂದ‌ ಹೋರಾಟ ಮಾಡುತ್ತಿಲ್ಲ. ಚುನಾವಣೆಯಲ್ಲಿ ನಾವು ಸೋತರೂ ಚಿಂತೆ‌ ಇಲ್ಲ. ಗೆದ್ದರೆ ನಾವೇನು ಅಧಿಕಾರಕ್ಕೆ ಬರಲ್ಲ. ಹೀಗಾಗಿ ಚುನಾವಣೆಯೇ ನಮಗೆ ಹೋರಾಟಕ್ಕೆ ಕಾರಣವಲ್ಲ. ವಕ್ಫ್ ವಿಚಾರವಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಪುನರುಚ್ಚರಿಸಿದರು.

ನಮ್ಮ ಹೋರಾಟ ರೈತರ ಜಮೀನು ಉಳಿಸುವುದಾಗಿದೆ. ರೈತಪರ ಹೋರಾಟಗಾರ ಎಂದು ಹೇಳಿಕೊಳ್ಳುವ ರಾಕೇಶ್ ಠಿಕಾಯತ್ ಈಗ ಎಲ್ಲಿ ಅಡಗಿದ್ದಾನೆ. ದೆಹಲಿಗೆ ಹೋಗಿ ಪ್ರತಿಭಟನೆ, ಹಿಂಸಾಚಾರ ಮಾಡಿ ರೈತರ ಪರ ಎಂದು ಹೇಳಿಕೊಳ್ಳುತ್ತಿದ್ದ ಠಿಕಾಯತ್, ಇದೀಗ ರಾಜ್ಯದಲ್ಲಿ ರೈತರ ಆಸ್ತಿ ವಕ್ಫ್ ದೋಚುತ್ತಿದ್ದರೂ ಯಾಕೆ ಅವರು ರೈತರ ಪರ ಒಂದೂ ಮಾತನಾಡುತ್ತಿಲ್ಲ, ಕನಿಷ್ಠ ಟ್ವಿಟರ್‌ನಲ್ಲಿ ಪೋಸ್ಟ್ ಸಹ ಮಾಡುತ್ತಿಲ್ಲ. ರಾಜ್ಯದ ರೈತರ ಸಂಘಟನೆಗಳು ಎಲ್ಲಿ ಹೋಗಿವೆ. ರಾಜ್ಯಾದ್ಯಂತ ಬಂದ್ ಮಾಡಲು ಯಾಕೆ ಕರೆ ಕೊಡುತ್ತಿಲ್ಲ? ಬಾರಕೋಲು ಚಳವಳಿ ಮಾಡುವವರು ಎಲ್ಲಿ ಹೋಗಿದ್ದಾರೆ? ಇವರೆಲ್ಲ ರೈತರ ಹೆಸರಲ್ಲಿ ಹೋರಾಟ ಮಾಡುವ ಬಾಡಿಗೆ ಹೋರಾಟಗಾರರಾಗಿದ್ದಾರೆ. ಅವರಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ ಏನಿದೆ ಅನ್ನೋದು ಈಗ ರಾಜ್ಯದ ರೈತರಿಗೆ ಅನುಭವಕ್ಕೆ ಬರುತ್ತಿದೆ. ಇಷ್ಟು ದಿನ ರೈತರ ನಾಯಕರು ಎಂದೆನಿಸಿಕೊಂಡವರ ಬಂಡವಾಳ ವಕ್ಫ್ ವಿಚಾರದಲ್ಲಿ ಸುಮ್ಮನಿರುವುದರಿಂದ ಬಯಲಾಗಿದೆ ಎಂದು ರೈತರ ಮುಖಂಡರ ವಿರುದ್ಧ ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು