ಮಾರಟಕ್ಕಿದೆ ಮಾಜಿ ಸಿಎಂ ನಿಜಲಿಂಗಪ್ಪ ನಿವಾಸ, ಖಾಸಗಿ ವ್ಯಕ್ತಿಗಳ ಪಾಲಾಗುತ್ತಾ ಸ್ಮಾರಕವಾಗಿಬೇಕಿದ್ದ ಮನೆ?

By Chethan Kumar  |  First Published Nov 9, 2024, 1:41 PM IST

ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಐತಿಹಾಸಿಕ ನಿವಾಸ ಮಾರಾಟಕ್ಕಿದೆ. ನಿಜಲಿಂಗಪ್ಪ ಮೊಮ್ಮಗ ಈ ನಿವಾಸವನ್ನು ಮಾರಾಟಕ್ಕಿಟ್ಟಿದ್ದಾರೆ. ಸ್ಮಾರಕವಾಗಬೇಕಿದ್ದ ಈ ಮನೆ ಇದೀಗ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕ ಎದುರಾಗಿದೆ. 
 


ಚಿತ್ರದುರ್ಗ(ನ.09) ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ನಿವಾಸ ಮಾರಾಟಕ್ಕಿದೆ. ಹೌದು, 117x 130 ಅಡಿ ವಿಸ್ತೀರ್ಣದ ಶ್ವೇತ ಭವನ ಇದೀಗ ಮಾರಟಕ್ಕೆ ಸಜ್ಜಾಗಿದೆ. ಕಳೆದೊಂದು ದಶಕಗಿಂದ ನಿಜಲಿಂಗಪ್ಪ ನಿವಾಸವನ್ನು ಸರ್ಕಾರ ಖರೀದಿಸಿ ಸ್ಮಾರಕ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಕಾನೂನು ತೊಡಕುಗಳ ಕಾರಣ ಇದು ಸಾಧ್ಯವಾಗಿಲ್ಲ. ಇತ್ತ ನಿಜಲಿಂಗಪ್ಪ ಕುಟುಂಬಸ್ಥರು ಸರ್ಕಾರಕ್ಕೆ ಮನೆ ಹಸ್ತಾಂತರಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಹೀಗಾಗಿ ಕುಟುಂಬಸ್ಥರು ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.ಸ್ಮಾರಕವಾಗಬೇಕಿದ್ದ ಮಾಜಿ ಮುಖ್ಯಮಂತ್ರಿಗಳ ನಿವಾಸ ಇದೀಗ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕ ಎದುರಾಗಿದೆ. ಇದರ ನಡುವೆ ಕಾಂಗ್ರೆಸ್ ಈ ಮನೆ ಖರೀದಿಗೆ ಕೆಲ ತಯಾರಿಗಳು ನಡೆದಿದೆ.

ಇದೀಗ ನಿಜಲಿಂಗಪ್ಪ ಮನೆ ಮಾರಟಕ್ಕಿದೆ ಅನ್ನೋ ಜಾಹೀರಾತು ಎಲ್ಲೆಡೆ ಹರಿದಾಡುತ್ತಿದೆ. ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಈ ಮನೆ ಮಾರಾಟಕ್ಕಿಟ್ಟಿದ್ದಾರೆ. ಹಲವರು ಮನೆ ಖರೀದಿಸಲು ಆಸಕ್ತಿ ತೋರಿದ್ದಾರೆ. ಚಿತ್ರದುರ್ಗದ ವಾರ್ಡ್ ಸಂಖ್ಯೆ 32ರ ವಿಪಿ ಬಡೆಯಾವಣೆಯಲ್ಲಿ ಈ ಮನೆ ಇದೆ. ಜಿಲ್ಲಾಧಿಕಾರಿಗಳ ಬಂಗಲೆ ಹತ್ತಿರವೇ ಈ ಮನೆ ಇದೆ. ಮೂಲ ಬೆಲೆ 10 ಕೋಟಿಗೂ ಅಧಿಕವಾಗಿದೆ. ಈ ಕುರಿತ ಮಾಹಿತಿಗಳು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಮನೆ ಖರೀದಿಸಲು ಆಸಕ್ತಿ ಇದ್ದವರು ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ, ನೇರವಾಗಿ ಸಂಪರ್ಕಿಸಲು ನಿಜಲಿಂಗಪ್ಪ ಪುತ್ರ ಕಿರಣ್ ಶಂಕರ್ ಕೋರಿದ್ದಾರೆ. 

Tap to resize

Latest Videos

undefined

ಎಸ್.ನಿಜಲಿಂಗಪ್ಪ ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ: ಸಂಸದ ಬೊಮ್ಮಾಯಿ

ನಿಜಲಿಂಗಪ್ಪ ಮನೆಯನ್ನು ಸರ್ಕಾರ ಖರೀದಿಸಿ ಸ್ಮಾರಕ ಮಾಡಲು ಕಳೆದ ಒಂದು ದಶಕದಿಂದ ಪ್ರಯತ್ನ ನಡೆದಿದೆ. ಆರಂಭದಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದ್ದರೆ ಬಳಿಕ ಎದುರಾದ ಕಾನೂನು ತೊಡಕು ಇದೀಗ ಸಂಕಷ್ಟ ಹೆಚ್ಚಿಸಿದೆ. ಒಂದು ದಶಕದ ಹಿಂದೆ ನಿಜಲಿಂಗಪ್ಪ ಮನೆ ಖರೀದಿಗೆ ಸರ್ಕಾರ 1 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಆದರೆ ಮಾತುಕತೆ ಫಲಪ್ರದವಾಗಲಿಲ್ಲ, ಇತ್ತ ಸರ್ಕಾರ ಕೂಡ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬಳಿಕ ಯಡಿಯೂರಪ್ಪ ಸರ್ಕಾರ 5 ಕೋಟಿ ರೂಪಾಯಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು. ಈ ಪೈಕಿ 4.18 ಕೋಟಿ ರೂಪಾಯಿ ಹಣವನ್ನು ನಿಜಲಿಂಗಪ್ಪ ಮನೆ ವಾರಸುದಾರರಿಗೆ ಹಾಗೂ 82 ಲಕ್ಷ ರೂಪಾಯಿ ಹಣವನ್ನು ಈ ಮನೆಯನ್ನು ಸ್ಮಾರಕವಾಗಿ ಸುಸ್ಥಿತಿಯಲ್ಲಿಡಲು ಸೂಚನೆ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣ, ಕಾನೂನು ತೊಡಕಿನಿಂದ ಸರ್ಕಾರ ಖರೀದಿ ನೆನೆಗುದಿಗೆ ಬಿದ್ದಿದೆ.

ಈ ಮನೆಯನ್ನು ನಿಜಲಿಂಗಪ್ಪ ಅವರು ತಮ್ಮ ಮೊಮ್ಮಗ ವಿನಯ್ ಹೆಸರಿಗೆ ವಿಲ್ ಬರೆದಿದ್ದಾರೆ. ಹೀಗಾಗಿ ಈ ಮನೆಯನ್ನು ಸಬ್ ರಿಜಿಸ್ಟ್ರಾರ್ ಮೂಲಕ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನಿಜಲಿಂಗಪ್ಪ ಪುತ್ರರು ಈ ಮನೆ ಅನುಭವಿಸಿದ ಬಳಿಕ ವಿನಯ್‌ಗೆ ಈ ಮನೆ ಸೇರಬೇಕು ಎಂದು ವಿಲ್‌ನಲ್ಲಿದೆ. ಹೀಗಾಗಿ ನಿಜಲಿಂಗಪ್ಪ ಪುತ್ರರ ಪೈಕಿ ಓರ್ವ ಧಾರವಾಡದಲ್ಲಿದ್ದರೆ, ಮತ್ತೊರ್ವ ಕಿರಣ್ ಶಂಕರ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಿಜಲಿಂಗಪ್ಪ ಅವರ ಇಬ್ಬರು ಮಕ್ಕಳು ಜೀವಂತವಿರುವಾಗ ಈ ಮನೆ ವಿನಯ್ ಹೆಸರಿಗೆ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿಲ್ಲ.  ಇದು ಕಾನೂನು ತೊಡಕು. ಈ ಮನೆ ವಿನಯ್ ಹೆಸರಿಗೆ ರಿಜಿಸ್ಟ್ರೇಶನ್ ಆಗದೇ ಸರ್ಕಾರಕ್ಕೆ ಖರೀದಿಸಲು ಸಾಧ್ಯವಿಲ್ಲ. ಇತ್ತ ಸರ್ಕಾರ ಮನಸ್ಸು ಮಾಡಿದರೆ ಕಾನೂನು ತೊಡಗು ಸರಿಸಿ ಖರೀದಿಸಲು ಸಾಧ್ಯವಿದೆ ಎಂದು ಕಿರಣ್ ಶಂಕರ್ ಹೇಳಿದ್ದಾರೆ.ಈ ವಿಚಾರದಲ್ಲಿ ಸರ್ಕಾರ ನಡೆಸಿಕೊಂಡ ರೀತಿ ನಮಗೆ ಅಸಮಾಧಾನ ತಂದಿದೆ. ಹೀಗಾಗಿ ಸರ್ಕಾರಕ್ಕೆ ಈ ಆಸ್ತಿ ಮಾರಾಟ ಮಾಡುವುದಿಲ್ಲ ಎಂದು ಕಿರಣ್ ಶಂಕರ್ ಹೇಳಿದ್ದಾರೆ. ಖಾಸಗಿ ವ್ಯಕ್ತಿಗಳು ಕೆಲ ವರ್ಷಗಳ ಬಳಿಕ ನೋಂದಣಿ ಒಪ್ಪಂದಕ್ಕೆ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಕಿರಣ್ ಶಂಕರ್ ಮುಂದಾಗಿದ್ದಾರೆ.  

ನಿಜಲಿಂಗಪ್ಪ ಮನೆ ಮಾರಟಕ್ಕಿಟ್ಟ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಕೆ ತಾಜ್ ಫೀರ್ ಕೆಪಿಸಿಸಿಗೆ ಪತ್ರ ಬರೆದಿದ್ದಾರೆ. ನಿಜಲಿಂಗಪ್ಪ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಇವರ ಮನೆಯನ್ನು ಕಾಂಗ್ರೆಸ್ ಖರೀದಿಸಬೇಕು ಎಂದು ಪತ್ರ ಬರೆದಿದ್ದರು. ಇದರ ಹಿನ್ನಲೆಯಲ್ಲಿ ಈಗಾಗಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿಜಲಿಂಗಪ್ಪ ಮನೆಗೆ ಬೇಟಿ ನೀಡಿ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಖರೀದಿ ಕುರಿತು ಯಾವುದೇ ಅಧಿಕೃತ ಮಾಹಿತಗಳು ಹೊರಬಿದ್ದಿಲ್ಲ.
ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

click me!