ವಕ್ಫ್ ಬೋರ್ಡ್ ಮೊದಲಿಗೆ ಗೋರಿ ಮಾಡಿಕೊಳ್ಳುತ್ತದೆ ಬಳಿಕ ಅದನ್ನು ನಮ್ಮದು ಎನ್ನುತ್ತದೆ. ಇದೇ ರೀತಿ ನಿಧಾನವಾಗಿ ಇಡೀ ಜಾಗ ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗಿನಿಂದಲೇ ಹೋರಾಟ ಮಾಡ್ಬೇಕು, ಇಲ್ಲದಿದ್ರೆ ಮುಂದೆ ಪರಿಣಾಮ ಕೆಟ್ಟದಾಗಲಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಎಚ್ಚರಿಸಿದರು.
ವಿಜಯಪುರ (ಅ.10): ಹಲವಾರು ವರ್ಷಗಳಿಂದ ರೈತರು ಇಲ್ಲಿ ನೆಲೆಸಿದ್ದಾರೆ. ರೈತರು ಸ್ಥಳೀಯ ನಿವಾಸಿಗಳಿಗೆ ನೋಟಿಸ್ ನೀಡಿದಾಗ ಆಕ್ರೋಶ ವ್ಯಕ್ತಪಡಿಸಿರೋದ್ರಲ್ಲಿ ತಪ್ಪಿಲ್ಲ ಎಂದು ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ವಿಜಯಪುರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಸರ್ವೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಕೋರ್ಟ್ ಗೆ ಹೋದಾಗ ಅವರ ಪರವಾಗಿ ತೀರ್ಪು ಬರುತ್ತೆ, ಸುಪ್ರೀಂ ಕೋರ್ಟ್ ಗೆ ಹೋಗಕ್ಕಾಗಲ್ಲ. ರಕ್ಷಣಾ ಇಲಾಖೆ, ಸರ್ಕಾರ ಬಿಟ್ರೆ ಅತಿ ಹೆಚ್ಚು ಜಮೀನು ಇರೋದು ವಕ್ಫ್ ಬೋರ್ಡ್ ಬಳಿ. ಈ ಮೂಲಕ ದೇಶ ತುಂಡರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಅದು ಮಾಡ್ತಿದೆ. ಅದರ ಮುಂದುವರಿದ ಭಾಗವೇ ಈಗ ನಡೆಯುತ್ತಿರುವುದು ಎಂದರು.
'ವಕ್ಪ್ ಆಸ್ತಿ ಜಮೀರ್ ಅವಪ್ಪಂದಲ್ಲ..'; ಸಿಟಿ ರವಿ ಹೇಳಿಕೆಗೆ ಜಮೀರ್ ಅಹ್ಮದ್ ಕೌಂಟರ್!
ಹತ್ತು ಸಾವಿರ ಎಕರೆ ಜಮೀನಿನಲ್ಲಿ ಕೇವಲ ರೈತರು ಮಾತ್ರವಲ್ಲ, ಪ್ರಾಚೀನ ದೇವಾಲಯ, ಶಾಲೆ ಎಲ್ಲವೂ ಸೇರಿದೆ. ವಕ್ಫ್ ಬೋರ್ಡ್ ಮೊದಲಿಗೆ ಗೋರಿ ಮಾಡಿಕೊಳ್ಳುತ್ತದೆ ಬಳಿಕ ಅದನ್ನು ನಮ್ಮದು ಎನ್ನುತ್ತದೆ. ಇದೇ ರೀತಿ ನಿಧಾನವಾಗಿ ಇಡೀ ಜಾಗ ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಮಾಡಿಯೇ ವಕ್ಫ್ ಬೋರ್ಡ್ ಅಷ್ಟೊಂದು ಪ್ರಮಾಣದ ಆಸ್ತಿ ಹೆಚ್ಚಿಸಿಕೊಂಡಿರುವುದು. ಲಕ್ಷ ಗಟ್ಟಲೇ ಎಕರೆ ಜಾಗ ಯಾರು ದಾನದಿಂದ ಬರುತ್ತದೆ ಎಂದರೆ ನಂಬಲು ಸಾಧ್ಯವೇ? ಈಗಿನಿಂದಲೇ ಹೋರಾಟ ಮಾಡ್ಬೇಕು, ಇಲ್ಲದಿದ್ರೆ ಮುಂದೆ ಪರಿಣಾಮ ಕೆಟ್ಟದಾಗಲಿದೆ ಎಂದರು.
ಸರ್ಕಾರವೇ ಮುಡಾ ನಿವೇಶನ ಕಬಳಿಸುತ್ತಿದೆ, ಸಚಿವರು ಆರ್ಡರ್ ಮಾಡಿದ್ಮೇಲೆ ಇದೀಗ ರೈತರ ಜಮೀನು ಕಬಳಿಸೋದಕ್ಕೂ ಸಿದ್ಧತೆ ನಡೆತೀದೆ. ಇದರ ವಿರುದ್ಧ ರೈತರು, ಸ್ಥಳೀಯ ನಿವಾಸಿಗಳು ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ರೆ ನೀವು ಬದುಕು ಬೀದಿಗೆ ಬರುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲೇ ವಿಜಯಪುರದಲ್ಲಿದೆ ಹೆಚ್ಚು ವಕ್ಫ್ ಆಸ್ತಿ: ಸಚಿವ ಜಮೀರ್ ಅಹ್ಮದ್
'ನಮ್ಮ(ವಕ್ಫ್ ಬೋರ್ಡ್) ಬಳಿ ಯಾವ ದಾಖಲೆಗಳು ಇಲ್ಲ ಎಂದು ಸ್ವತಃ ಓವೈಸಿ ಹೇಳಿದ್ದಾನೆ. ಮುಸಲ್ಮಾನರ ಓಟು ಪಡೆಯಲು ಈ ರೀತಿ ರೈತರ ಜಮೀನು ಕಬಳಿಸ್ತಿರುವುದು ದುರಂತ. ಅಷ್ಟಕ್ಕೂ ಮುಸಲ್ಮಾನರೇ ಇಲ್ಲಿನ ಸ್ವಂತದವರಲ್ಲ, ಈ ಜಾಗ ಹಿಂದೂಗಳಿಗೆ ಸೇರಿದ್ದು. ಭಾರತ ಭೂಮಿ ಹಿಂದೂಗಳದ್ದು ಮುಸಲ್ಮಾನರು ಕೂಡ ಭಾರತೀಯರಾಗಿದ್ರೆ ಈ ನೆಲದ ಮೇಲೆ ಗೌರವ ಇರುತ್ತದೆ. ಈ ದೇಶದ ಸಂವಿಧಾನ, ಕಾನೂನು, ಸುಪ್ರೀಂ ಕೋರ್ಟ್ ಎಲ್ಲವೂ ಅನ್ವಯಿಸುತ್ತದೆ. ವಕ್ಫ್ ಬೋರ್ಡ್ ಆಸ್ತಿ ಸುಪ್ರೀಂ ಕೋರ್ಟ್ ಸಹ ಪ್ರಶ್ನಿಸುವಂತಿಲ್ಲ ಹೀಗಿರುವಾಗ ಹೇಗೆ ಭಾರತೀಯರು ಎಂಬ ಅನುಮಾನ ಮೂಡುವುದು ಸಹಜ. ಇವರಿಗೆ ದೇಶದಲ್ಲಿ ಬಸ್ ಫ್ರೀ, ಕರೆಂಟ್ ಫ್ರೀ ಕೊಟ್ಟಿದ್ದಾರೆ, ಆದರೆ ಹಿಂದೂಗಳ ಜಮೀನು ಕಿತ್ತುಕೊಳ್ಳುತ್ತಿದ್ದಾರೆ ಇದು ಪ್ರತಿಯೊಬ್ಬ ಹಿಂದೂಗಳಿಗೆ ನೆನಪಿರಬೇಕು. ರೈತರ ಪರ ನಾವಿದ್ದೇವೆ. ಅಗತ್ಯ ಬಿದ್ರೆ ವಿಜಯಪುರಕ್ಕೆ ತೆರಳಿ ಹೋರಾಟ ಮಾಡುತ್ತೇವೆ ಎಂದರು.