
ದಾವಣಗೆರೆ (ಆ.10): ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಗಂಭೀರ ಆರೋಪಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತ್ಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ 14 ರಿಂದ 16 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿತ್ತು ಎಂದು ಸಮೀಕ್ಷೆ ತೋರಿಸಿತ್ತು. ಆದರೆ, ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಾಗಿದೆ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮತಗಳ್ಳತನ ಆರೋಪ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಸೆಂಟ್ರಲ್ ಬೆಂಗಳೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೋಟರ್ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ದಾಖಲಾತಿ ಮತ್ತು ಡಬಲ್ ಹೆಸರುಗಳು ಕಂಡುಬಂದಿವೆ. ಚುನಾವಣಾ ಆಯೋಗವು ಸ್ವತಂತ್ರವಾಗಿ ಜನರ ಪರವಾಗಿ ಕೆಲಸ ಮಾಡಬೇಕು, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು. ಆದರೆ, ಮತಗಳನ್ನೇ ಕದಿಯುವ ಕೆಲಸವಾದರೆ, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದರು.
ಮತಗಳ್ಳತನ ವಿಚಾರವಾಗಿ ರಾಹುಲ್ ಗಾಂಧಿ ಸವಿವರವಾಗಿ ಹೇಳಿದ್ದು ಆ ಬಗ್ಗೆ ತನಿಖೆಯಾಗಲಿ ಎಂದರು. ವಿಡಿಯೋ ರೆಕಾರ್ಡಿಂಗ್, ವೋಟರ್ ಲಿಸ್ಟ್ ಸಾಫ್ಟ್ ಕಾಪಿ ಕೇಳಿದ್ರೆ ಚುನಾವಣಾ ಆಯೋಗದವರು ಏನೂ ಕೊಡ್ತಿಲ್ಲ ಚುನಾವಣಾ ಆಯೋಗ ಪ್ರಧಾನಿ ಮೋದಿಯವರ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ಮತಗಳ್ಳತನ ಆರೋಪವನ್ನು ಸಾಬೀತು ಮಾಡಿಯೇ ಮಾಡ್ತಾರೆ. ಪ್ರತಿಯೊಂದು ಮತಗಟ್ಟೆಯ ಡಿಟೇಲ್ ಕೇಳುತ್ತಿದ್ದೇವೆ. ನಾವು ಕೂಡ ಯಾವುದೇ ತನಿಖೆಗೆ ಸಿದ್ಧ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವಿಪಕ್ಷದಲ್ಲಿ ಇದ್ದು ನಾವು ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ದಾವಣಗೆರೆ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಆಗಿದ್ದು ಇಲ್ಲೂ ಮತಗಳ್ಳತನ ಆಗಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದೆ, ಯಾವ ಯಾವ ಬೂತ್‌ನಲ್ಲಿ ಏನೇನು ವ್ಯತ್ಯಾಸ ಆಗಿದೆ ಪರಿಶೀಲಿಸುತ್ತೇವೆ. ಒಂದು ಸೆಟ್ ಪ್ಯಾಟರ್ನ್ ಮಾಡುತ್ತಿದ್ದಾರೆ. ಒಂದು ತಂಡವೇ ಇದ್ದು ಇಡೀ ದೇಶವನ್ನು ಸುತ್ತುತ್ತಿದೆ. ಮಹಾರಾಷ್ಟ್ರ ಆದಮೇಲೆ ಬಿಹಾರ ಹೀಗೆ ಎಲ್ಲಾ ಕಡೆ ಸುತ್ತುತ್ತಿದೆ. ಎಂಟು ಅಡಿ ಪ್ರಿಂಟೆಡ್ ಡಾಕ್ಯುಮೆಂಟ್ ಇದೆ. ಇಡೀ ದೇಶಾದ್ಯಂತ ಮತಗಳ್ಳತನ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ