ಕರ್ನಾಟಕದಲ್ಲಿ ತಂಬಾಕು ರೂಲ್ಸ್ ಕಠಿಣ, ಕಾನೂನುಬದ್ಧ ವಯಸ್ಸು ಈಗ 18 ಅಲ್ಲ, ದಂಡ ಏರಿಕೆ

Published : May 31, 2025, 06:41 PM IST
World No Tobacco Day 2025

ಸಾರಾಂಶ

ಕರ್ನಾಟಕದಲ್ಲಿ ತಂಬಾಕು ನಿಯಮ ಮತ್ತಷ್ಟು ಕಠಿಣಗೊಂಡಿದೆ. ಇದೀಗ ತಂಬಾಕು ಖರೀದಿ ಅಥವಾ ಬಳಸಲು ಕಾನೂನುಬದ್ಧ ವಯಸ್ಸು 18 ಅಲ್ಲ. ಜೊತೆಗೆ ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ದಂಡ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲ ಹುಕ್ಕಾ ಬಾರ್‌ಗೂ ಶಾಕ್ ನೀಡಲಾಗಿದೆ.

ಬೆಂಗಳೂರು(ಮೇ.31) ಕರ್ನಾಟಕದಲ್ಲಿ ತಂಬಾಕು ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇದೀಗ ನಿಯಮಗಳು ಮತ್ತಷ್ಟು ಕಠಿಣಗೊಂಡಿದೆ. ಕೆಲ ನಿಯಮಗಳು ಪರಿಷ್ಕರಣೆಗೊಂಡು ಮತ್ತಷ್ಟು ಬಿಗಿಯಾಗಿದೆ. ಈ ಪೈಕಿ ಪ್ರಮುಖವಾಗಿ ಇದೀಗ ಕರ್ನಾಟಕದಲ್ಲಿ ತಂಬಾಕು ಖರೀದಿ, ಬಳಕೆಗೆ ಕಾನೂನುಬದ್ಧ ವಯಸ್ಸು 18 ಅಲ್ಲ. ಈ ಕನಿಷ್ಠ ವಯಸ್ಸಿನ ಮಿತಿಯನ್ನು ಇದೀಗ 21 ವರ್ಷಕ್ಕೆ ಏರಿಸಲಾಗಿದೆ. ಇನ್ನು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದರೆ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಈ ಮೂಲಕ ಈ ದಂಡವನ್ನು ಹೆಚ್ಚಳ ಮಾಡಲಾಗಿದೆ.

ಕರ್ನಾಟಕ ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನ ಕಾಯ್ದೆ 2003 (COTPA) ತಿದ್ದುಪಡಿಯಾಗಿದೆ. ಹೊಸ ತಿದ್ದುಪಡಿ ಬಿಲ್‌ಗೆ ಮೇ 23ರಂದು ರಾಷ್ಟ್ರಪತಿಗಳ ಅಂಕಿತ ದೊರಕಿದ್ದು, ಮೇ 30ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.ಇದೀಗ ನಿಯಮವಾಗಿ ಜಾರಿಯಾಗಿದೆ.ವಯಸ್ಸಿನ ಮಿತಿ ಏರಿಕೆ ಈ ತಿದ್ದುಪಡಿಯಲ್ಲಿನ ಪ್ರಮುಖ ಬದಲಾವಣೆಯಾಗಿದೆ. ತಂಬಾಕು ಕಾನೂನುಬದ್ಧ ವಯಸ್ಸಿನ ಮಿತಿಯನ್ನು 18 ರಿಂದ 21ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಹಳೇ ನಿಯಮದಲ್ಲಿರುವಂತೆ ಅಂಗನವಾಡಿ, ಶಿಕ್ಷಣ ಸಂಸ್ಥೆಗಳ 100 ಮೀಟರ್ ಸುತ್ತಳತೆ ಪ್ರದೇಶದಲ್ಲಿ ಯಾವುದೇ ತುಂಬಾಕು ಮಾರಾಟಕ್ಕೆ ಅವಕಾಶವಿಲ್ಲ.

ಹುಕ್ಕಾ ಬಾರ್ ಬ್ಯಾನ್

ಹುಕ್ಕಾ ಬಾರ್ ವಿರುದ್ದ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ತಿದ್ದುಪಡಿ ನಿಯಮದಲ್ಲಿ ಇದೀಗ ಹುಕ್ಕಾ ಬಾರ್‌ಗೆ ಕರ್ನಾಟಕದಲ್ಲಿ ಅವಕಾಶವಿಲ್ಲ. ಅದು ರೆಸ್ಟೋರೆಂಟ್, ಪಬ್, ಕೆಫೆ ಅಥವಾ ಪ್ರತ್ಯೇಕವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರೂ ಅವಕಾವಿಲ್ಲ. ತಿದ್ದಪಡಿ ನಿಯಮದ ಪ್ರಕಾರ ಹುಕ್ಕಾ ಬಾರ್ ಬ್ಯಾನ್ ನಿಯಮ ಉಲ್ಲಂಘಿಸಿದರೆ ಕಾಯ್ದೆಯ ಸೆಕ್ಷನ್ 21ಎ ಅಡಿ 1 ರಿಂದ 3 ವರ್ಷ ಜೈಲು ಶಿಕ್ಷೆ. ಇನ್ನು 50,000 ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉಗುಳುವುದು, ಧೂಮಪಾನಕ್ಕೆ ದುಬಾರಿ ದಂಡ

ತಂಬಾಕು ತಿಂದು ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ ಇದೀಗ ದುಬಾರಿ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದು ನಿಯಮ ಬಾಹಿರವಾಗಿದೆ. ತಿದ್ದುಪಡಿ ನಿಯಮದ ಸೆಕ್ಷನ್ 21, 24, 28ರ ಪ್ರಕಾರ 200 ರೂಪಾಯಿ ಇದ್ದ ದಂಡವನ್ನು ಇದೀಗ 1,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

2024ರಲ್ಲಿ ಹುಕ್ಕಾ ಬಾರ್ ಬ್ಯಾನ್ ಮಾಡಲಾಗಿತ್ತು. ಆದರೆ ಇದಾದ ಬಳಿಕ ಬೆಂಗಳೂರು ಕ್ರೈಂ ಬ್ರಾಂಚ್ ಪೊಲೀಸರು ಹಲೆವೆಡೆ ದಾಳಿ ನಡೆಸಿದ್ದಾರೆ. ಈ ಪೈಕಿ ಇತ್ತೀಚೆಗೆ 20 ಕಡೆ ದಾಳಿ ನಡೆಸಿ 12 ಲಕ್ಷ ರೂಪಾಯಿ ಮೌಲ್ಯದ ಹುಕ್ಕಾ ಸೇರಿದಂತೆ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹುಕ್ಕಾಬಾರ್ ನಿಷೇಧ ನಿಯಮವನ್ನು ಹೈಕೋರ್ಟ್‌ನಲ್ಲೂ ಪ್ರಶ್ನಿಸಲಾಗಿತ್ತು. ಆದರೆ ಹೈಕೋರ್ಟ್ ಹುಕ್ಕಾ ಬಾರ್ ಬ್ಯಾನ್ ಆದೇಶವನ್ನು ಎತ್ತಿ ಹಿಡಿದಿತ್ತು. ಸರ್ಕಾರಕ್ಕೆ ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ನಿರ್ದಾರ ಕೈಗೊಂಡಿದೆ. ಹೀಗಾಗಿ ಹುಕ್ಕಾ ಬಾರ್ ಬ್ಯಾನ್ ನಿರ್ಧಾರ ಸರಿ ಎಂದು ಹೈಕೋರ್ಟ್ ಹೇಳಿತ್ತು.

ಸ್ಮೋಕಿಂಗ್ ಝೋನ್‌ನಲ್ಲಿ ಮಾತ್ರ ಅವಕಾಶ

ಧೂಮಪಾನ ಸಾರ್ವಜನಿಕ ಪ್ರದೇಶದಲ್ಲಿ ಮಾಡುವಂತಿಲ್ಲ. ಮಾಡಿದರೆ 1000 ರೂಪಾಯಿ ದಂಡ ಹಾಕಲಾಗುತ್ತದೆ. ಇನ್ನು ಹೊಟೆಲ್, ವಿಮಾನ ನಿಲ್ದಾಣ ಸೇರಿದಂತೆ ಕೆಲ ಪ್ರದೇಶದಲ್ಲಿ ಧೂಮಪಾನ ಝೋನ್‌ನಲ್ಲಿ ಮಾತ್ರ ಧೂಮಪಾನ ಮಾಡಬೇಕು. ಸ್ಮೋಕಿಂಗ್ ಝೋನ್ ಬಿಟ್ಟು ಬೇರೆ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದರೆ ದಂಡ ಖಚಿತ. ಕರ್ನಾಟಕದ ಸರ್ಕಾರದ ಈ ತಿದ್ದುಪಡಿ ನಿಯಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ