ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.3: ಸಚಿವ ಸುಧಾಕರ್‌

By Kannadaprabha NewsFirst Published Oct 23, 2021, 3:41 PM IST
Highlights

*   2ನೇ ಡೋಸ್‌ ಪಡೆಯದವರಿಗೆ ಫೋನ್‌ ಮಾಡ್ತೀವಿ
*   ರಾಜ್ಯದಲ್ಲಿ ಸದ್ಯ 60 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ 
*   ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ 
 

ಹುಬ್ಬಳ್ಳಿ(ಅ.23): ಅಮೆರಿಕ(America), ಬ್ರೆಜಿಲ್‌(Brazil), ಜಪಾನ್‌ಗಳಿಗಿಂತಲೂ(Japan) ಹೆಚ್ಚಿನ ಜನರಿಗೆ ಕೋವಿಡ್‌ ಲಸಿಕೆ ನೀಡಿರುವುದು ಭಾರತದ ಐತಿಹಾಸಿಕ ಸಾಧನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ ಎಂದ ಆರೋಗ್ಯ ಸಚಿವ ಕೆ.ಸುಧಾಕರ್‌(K Sudhakar), ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್‌ ಹಾಕಿಸಿಕೊಂಡು 2ನೆಯ ಡೋಸ್‌ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 100 ಕೋಟಿ ಲಸಿಕೆ(Vaccine) ಸಾಧನೆ ವಿಚಾರ ಹಂಚಿಕೊಂಡ ಸಚಿವರು, ರಾಜ್ಯದಲ್ಲಿ(Karnataka) ಶೇ.62ರಷ್ಟು ಜನರು ಎರಡನೆಯ ಡೋಸ್‌ ಪಡೆಯಬೇಕಿದೆ. ಮೊದಲ ಡೋಸ್‌ ಪಡೆದು, ಎರಡನೆಯ ಡೋಸ್‌ ಪಡೆಯದೆ ಅವಧಿ ಮುಗಿದವರ ಸಂಖ್ಯೆ 53 ಲಕ್ಷ. ಇಂಥವರನ್ನು ಫೋನ್‌ ಮೂಲಕ ಸಂಪರ್ಕಿಸಿ ಲಸಿಕೆ ಕೊಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಶೇ. 83ರಷ್ಟು ಮೊದಲ ಡೋಸ್‌, ಶೇ.38ರಷ್ಟು ಎರಡೂ ಡೋಸ್‌(Dose) ಪಡೆದಿದ್ದಾರೆ. ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಗುಜರಾತ್‌(Gujrat), ಮಧ್ಯಪ್ರದೇಶ(Madhya Pradesh) ಮೊದಲರೆಡು ಸ್ಥಾನಗಳಲ್ಲಿವೆ ಎಂದರು. ಲಸಿಕೆ ವಿತರಣೆ ಆರಂಭಿಸಿದಾಗ ಕೆಲವರು ಒಡಕಿನ ಮಾತುಗಳನ್ನು ಆಡಿದರು. ಈ ರೀತಿ ಟೀಕೆ ಮಾಡಿದವರೇ ಕ್ಯೂನಲ್ಲಿ ನಿಂತು ಲಸಿಕೆ ಪಡೆದರು ಎಂದು ಕುಟುಕಿದರು.

ಲಸಿಕಾಕರಣದ ಶತಕೋಟಿ ಸಾಧನೆ: ಇನ್ನು 2ನೇ ಡೋಸ್‌ ಮೇಲೆ ಕೇಂದ್ರದ ಗಮನ!

ಲಸಿಕಾಕರಣದಲ್ಲಿ ಶ್ರೀಮಂತ-ಬಡವ, ಜಾತಿ, ಧರ್ಮ ಎಂಬ ಭೇದ ಭಾವ ಮಾಡದೇ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡಿದ್ದೇವೆ ಎಂದರು. ಡಿಸೆಂಬರ್‌ ಅಂತ್ಯದೊಳಗೆ ಶೇ.90ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ 60 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ ಎಂದು ಸ್ಪಷ್ಟಪಡಿಸಿದರು.

ಮೊದಲು ಟೀಕೆ: ಬಳಿಕ ಕ್ಯೂ:

ಹೊಸದಾಗಿ ಲಸಿಕೆ ಬಂದಾಗ ಅದು ‘ಮೋದಿ ಲಸಿಕೆ’ (Narendra Modi) ಎಂದು ಟೀಕೆ ಮಾಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ವಿರೋಧ ಪಕ್ಷಗಳು ಮೂಡಿಸಿದವು. ಅದರಲ್ಲೂ ಕಾಂಗ್ರೆಸ್‌(Congress) ಜನರ ಹಾದಿ ತಪ್ಪಿಸುವ ಕೆಲಸ ಬಹಳ ಮಾಡಿತು. ಒಗ್ಗಟ್ಟಾಗಿ ಸಾಂಕ್ರಾಮಿಕ ರೋಗ(Infectious Disease) ಎದುರಿಸಬೇಕಾದ ಸಂದರ್ಭದಲ್ಲಿ ಒಡಕಿನ ಮಾತುಗಳನ್ನಾಡಿದರು. ಹೀಗೆ ಟೀಕೆ ಮಾಡಿದವರೇ ಮಾರ್ಚ್‌ನಲ್ಲೇ ಕ್ಯೂ ನಿಂತುಕೊಂಡು ಲಸಿಕೆ ಪಡೆದರು ಎಂದು ಕುಟುಕಿದರು.
 

click me!