ಡಿಸೆಂಬರ್‌ನೊಳಗೆ 90% ಜನರಿಗೆ ಲಸಿಕೆ: ಸಿಎಂ ಬೊಮ್ಮಾಯಿ

By Kannadaprabha NewsFirst Published Oct 23, 2021, 1:09 PM IST
Highlights

*   100 ಕೋಟಿ ಮಂದಿಗೆ ಲಸಿಕೆ ಸಾಮಾನ್ಯವಲ್ಲ, ಆದರೆ ವಿಶ್ರಮಿಸುವುದು ಬೇಡ
*   ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1.25 ಲಕ್ಷ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ
*   ಕೊರೋನಾ ಕಲಿಸಿದ ಪಾಠ
 

ಹುಬ್ಬಳ್ಳಿ(ಅ.23): ದೇಶದಲ್ಲಿ(India) 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್‌ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ ವಿಶ್ರಮಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಜತೆಗೆ, ಡಿಸೆಂಬರ್‌ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಲಸಿಕೆ ನೀಡುವ ಮೂಲಕ ಮೊದಲ ಡೋಸ್‌ ನೀಡಿಕೆಯಲ್ಲಿ ಶೇ.90ರಷ್ಟು ಗುರಿ ಸಾಧನೆ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿನ(Hubballi) ಕಿಮ್ಸ್‌(KIMS) ಆವರಣದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ(Vaccine) ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲೂ(Karnataka) ಡಿಸೆಂಬರ್‌ ಅಂತ್ಯದ ವೇಳೆಗೆ ಶೇ.90 ರಷ್ಟು ಜನರಿಗೆ ಮೊದಲ ಡೋಸ್‌ ಹಾಗೂ ಶೇ.70ರಷ್ಟು ಜನರಿಗೆ 2ನೇ ಡೋಸ್‌ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಸಿದ್ದರಾಮಯ್ಯ 2,400 ಕೋಟಿ ಲೆಕ್ಕ ತೋರಿಸಲಿ: ​ಸಿಎಂ ಬೊಮ್ಮಾಯಿ

ಜ.16ರಿಂದ ಕೋವಿಡ್‌ ಲಸಿಕೆ ನೀಡಿಕೆ ಪ್ರಾರಂಭಿಸಲಾಯಿತು. 10 ತಿಂಗಳಲ್ಲಿ 100 ಕೋಟಿ ಲಸಿಕೆ ನೀಡುವ ಗುರಿ ತಲುಪಲಾಯಿತು. ಇದರ ಹಿಂದೆ ವೈದ್ಯರು, ಅರೆ ವೈದ್ಯಕೀಯ, ಆರೋಗ್ಯ ಕಾರ್ಯಕರ್ತರು, ವಿವಿಧ ಇಲಾಖೆಗಳ ಶ್ರಮ ಸಾಕಷ್ಟು ಅಡಗಿದೆ. ಅದಕ್ಕಾಗಿ ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

ಸಾಂಕ್ರಾಮಿಕ ರೋಗ(Infectious Disease) ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು 100 ವರ್ಷದ ಹಿಂದೆಯೇ ಸಾಬೀತಾಗಿದೆ. ಪೆನ್ಸಿಲಿನ್‌ನಿಂದ ಪೋಲಿಯೋವರೆಗೆ ಅನೇಕ ಲಸಿಕೆ ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ(Immunity) ಹೆಚ್ಚಿಸಿವೆ. ವೈರಾಣುಗಳಿಗೆ ಭೌಗೋಳಿಕ ಗಡಿ ಇರುವುದಿಲ್ಲ. ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲು. ವಿಜ್ಞಾನಿಗಳು(Scientists) ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ(Research) ಕಾರ್ಯತತ್ಪರರಾಗಿದ್ದಾರೆ ಎಂದರು.

ಕೊರೋನಾ ಕಲಿಸಿದ ಪಾಠ:

ಕೋವಿಡ್‌ನಿಂದಾಗಿ(Covid19) ಇಡೀ ವಿಶ್ವ(World) ಸಮುದಾಯದ ಒಟ್ಟು ಆರೋಗ್ಯ(Health) ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ರಾಜ್ಯದ ಆಸ್ಪತ್ರೆಗಳಲ್ಲಿ(Hospital) ಒಂದೇ ವರ್ಷದಲ್ಲಿ 1.25 ಲಕ್ಷ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ. 4 ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕಾಸ್ಪತ್ರೆಗಳಲ್ಲೂ ಆಕ್ಸಿಜನ್‌(Oxygen) ಬೆಡ್‌ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ(Medical Oxygen) ಉತ್ಪಾದನೆ ಹಾಗೂ ಪೂರೈಕೆಗೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.
 

click me!