ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನರ್ ರಚಿಸಲಾಗಿದ್ದು, ಶಾಸಕರ ಜತೆಗೆ ಕೆಲ ಸಚಿವರು, ಶಾಸಕರ ಮಕ್ಕಳನ್ನು ಮಂಡಳಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಧ್ರುವ್ ಪಾಟೀಲ್ ಮತ್ತು ವೈಶಾಲಿ ಕುಲಕರ್ಣಿ ಅವರು ಅತ್ಯುತ್ತಮ ವನ್ಯಜೀವಿ ಪೋಟೋಗ್ರಾಫರ್ ಗಳಾಗಿದ್ದಾರೆ.
ಬೆಂಗಳೂರು (ಜು.28): ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನರ್ ರಚಿಸಲಾಗಿದ್ದು, ಶಾಸಕರ ಜತೆಗೆ ಕೆಲ ಸಚಿವರು, ಶಾಸಕರ ಮಕ್ಕಳನ್ನು ಮಂಡಳಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.
ಮುಂದಿನ ಮೂರು ವರ್ಷಗಳ ಅವಧಿಗೆ ವನ್ಯಜೀವಿ ಮಂಡಳಿಯನ್ನು ರಚಿಸಿ ಆದೇಶಿ ಸಲಾಗಿದ್ದು, ಮಂಡಳಿ ನಿಯಮದಂತೆ ಸಿಎಂ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಪಾಧ್ಯಕ್ಷರಾಗಿರಲಿದ್ದಾರೆ. ಅವರೊಂದಿಗೆ ವಿವಿಧ ವಿಭಾಗಗಳಲ್ಲಿ 16 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ರಾಜ್ಯ ವಿಧಾನಮಂಡಲದ ಸದಸ್ಯ ರಾಗಿ ಶಾಸಕರಾದ ಅಶೋಕ್ ಎಂ.ಪಟ್ಟಣ, ಎಚ್.ಎಂ.ಗಣೇಶ್‌ಪ್ರಸಾದ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ನಿಯೋಜಿಸಲಾಗಿದೆ.
ಎಡವಿದ ಈ ಹಿಂದಿನ ಸರ್ಕಾರ, ಕೇಂದ್ರ ಸರ್ಕಾರದ ಖಜಾನೆ ಸೇರಿದ ರಾಜ್ಯದ ಕ್ಯಾಂಪಾ ಹಣ!
ವನ್ಯಜೀವಿ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳಿಂದ ವೈಲ್ಡ್‌ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್ ಚಂದ್, ಟೈಗರ್ಸ್ ಅನ್‌ಲಿಮಿಟೆಡ್ ವೈಲ್ಡ್ ಲೈಫ್ ಸೊಸೈಟಿಯ ಸೀಮಾ ಬೇಗಂ ಖಲೀಲ್, ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ನ ಡಾ. ಆರ್.ವಿ.ದಿನೇಶ್ ಅವರನ್ನು ನೇಮಿಸಲಾಗಿದೆ.
ಸಂರಕ್ಷಣಾ ವಿಶೇಷ ತಜ್ಞರು, ಜೀವಿ ಶಾಸ್ತ್ರಜ್ಞರು ಹಾಗೂ ಪರಿಸರವಾದಿಗಳ ವಿಭಾಗದಲ್ಲಿ ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಪಾಟೀಲ್, ಶಾಸಕ ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಅವರೂ ಸೇರಿದಂತೆ ರವೀಂದ್ರ ರಘುನಾಥ್, ಚಿಕ್ಕಣ್ಣ, ಡಾ. ರಾಜ್‌ಕುಮಾರ್ ಎಸ್.ಅಲೆ, ಸಂಕೇತ್ ಪೂವಯ್ಯ, ಅಜಿತ್ ಕರಿಗುಡ್ಡಯ್ಯ, ವಿನಯ್‌ಕುಮಾರ್ ಮಾಳಿಗೆ, ಡಾ. ಸಂತೃಪ್ತ, ಮಲ್ಲಪ್ಪ ಎಸ್.ಅಂಗಡಿ ಅವರನ್ನು ಸದಸ್ಯರನ್ನಾಗಿಸಲಾಗಿದೆ.
ಉಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ 10 ಅಧಿಕಾರಿಗಳನ್ನು ಪದನಿಮಿತ್ತ ಸದಸ್ಯರನ್ನಾಗಿಸಲಾಗಿದೆ. ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.
ಅನುದಾನ ಕೊರತೆ, ಸರ್ವಪಕ್ಷ ಸಭೆಯಲ್ಲಿ ತೀವ್ರ ವಿರೋಧ, ಹೆಚ್ಚು ದಿನ ರಸ್ತೆ ಪಕ್ಕ ನಿಂತ ವಾಹನ ಹರಾಜು
ಧ್ರುವ್ ಪಾಟೀಲ್ ಮತ್ತು ವೈಶಾಲಿ ಕುಲಕರ್ಣಿ ಅವರು ಅತ್ಯುತ್ತಮ ವನ್ಯಜೀವಿ ಪೋಟೋಗ್ರಾಫರ್ ಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಫೋಟೋಗಳನ್ನು ಹಾಕುತ್ತಿರುತ್ತಾರೆ. ಧ್ರುವ್ ಪಾಟೀಲ್ SPPA ಎಂಬ ಪರಿಸರ ಸಂರಕ್ಷಣಾ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ : ಖಂಡ್ರೆ
ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ (ಹಾರ್ಡ್‌ಪ್ ಅಲೋಯನ್) ನೀಡಲು ಅರಣ್ಯ ಇಲಾಖೆ ಆದೇಶಿಸಿದ್ದು, ಆ ಮೂಲಕ ಸಿಬ್ಬಂದಿ ಮತ್ತು ಅಧಿಕಾರಿಗಳ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಸಂರಕ್ಷಣೆಗಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ಮಾಸಿಕ ವಿಶೇಷ ಭತ್ಯೆ ನೀಡಲಾಗುವುದು. ಸದ್ಯ ಮಾಡಿರುವ ಆದೇಶದಂತೆ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3,500 ರು., ಅರಣ್ಯ ರಕ್ಷಕರಿಗೆ 2,700 ರು. ಹಾಗೂ ಡಿ ದರ್ಜೆ ನೌಕರರಿಗೆ 2 ಸಾವಿರ ರು. ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಆದೇಶವನ್ನೂ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಸೇರಿ ವಿವಿಧೆಡೆ ಆನೆಗಳ ಹಾವಳಿ ಹೆಚ್ಚಿದ್ದು, ಅದರ ನಿಗ್ರಹಕ್ಕಾಗಿ ಆನೆ ಕಾರ್ಯಪಡೆ ರಚಿಸಲಾಗಿದೆ. ಅಧಿಕಾ ರಿಗಳು ಮತ್ತು ಸಿಬ್ಬಂದಿಗೆ ಮಾಸಿಕ ಗರಿಷ್ಠ 2 ಸಾವಿರ ರು. ನೀಡಲಾ ಗುತ್ತದೆ. ಈ ಪರಿಹಾರ ಭತ್ಯೆಯನ್ನು ಅವರು ಕೆಲಸ ಮಾಡಿದ ದಿನಗಳಿಗನುಗುಣವಾಗಿ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ. ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಪಡೆ, ಕ್ಷಿಪ್ರ ಸ್ಪಂದನಾ ಪಡೆ ಸಿಬ್ಬಂದಿ ಹಾಗೂ ಅರಣ್ಯದೊಳಗೆ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ವಿಶೇಷ ಭತ್ಯೆ ನೀಡುವ ಆದೇಶ ಅನ್ವಯವಾ ಗಲಿದೆ. ನಾಗರಹೊಳೆ, ಬಂಡೀಪುರ ಅಭಯಾರಣ್ಯ ಸೇರಿದಂತೆ ವಿಶೇಷ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಕನ್ನಡಪ್ರಭ-ಸುವರ್ಣನ್ಯೂಸ್ ಅಭಿಯಾನದ ಫಲಶ್ರುತಿ: ವನ್ಯಜೀವಿ ಸಂರಕ್ಷಣೆ, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ನೆರವು ದೃಷ್ಟಿಯಿಂದ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಕಳೆದ ವರ್ಷ 'ವನ್ಯಜೀವಿ ಸಂರಕ್ಷಣಾ ಅಭಿಯಾನ' ನಡೆಸಿದ್ದವು. ಅದರ ಭಾಗವಾಗಿ ಅಭಿಯಾನದ ರಾಯಭಾರಿಯಾಗಿದ್ದ ರಿಷಭ್ ಶೆಟ್ಟಿ ಅವರು ವಿವಿಧ ಅಂಶಗಳುಳ್ಳ ಮನವಿಯನ್ನು ಸಿಎಂ ಸಿದ್ದರಾ ಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲ್ಲಿಸಿದ್ದರು. ಆ ಅಂಶದಲ್ಲಿ ಅರಣ್ಯ ಸಿಬ್ಬಂದಿಗಗಳಿಗೆ ವಿಶೇಷ ಭತ್ಯೆ ನೀಡುವ ಬೇಡಿಕೆಯೂ ಇತ್ತು. ಅದರ ಜತೆಗೆ ಕಳೆದ ಜನವರಿಯಲ್ಲಿ 'ಕನ್ನಡಪ್ರಭ' ದಿನಪತ್ರಿಕೆ ಅರಣ್ಯ ಸಿಬ್ಬಂದಿ ಸಮಸ್ಯೆ, ಅವರಿಗೆ ನೀಡಬೇಕಾದ ಸೌಲಭ್ಯಗಳ ಕುರಿತಂತೆ ಸರಣಿ ವರದಿ ಪ್ರಕಟಿಸಿತ್ತು. ಅದನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ನಿಗದಿ ಮಾಡಿ ಘೋಷಿಸಿದೆ.
ಏಷ್ಯಾನೆಟ್‌ಸುವರ್ಣ ನ್ಯೂಸ್, ಕನ್ನಡಪ್ರಭ ಅಭಿಯಾನ ಫಲಶ್ರುತಿ: ವನ್ಯಜೀವಿ ಸಂರಕ್ಷಣೆ, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ನೆರವು ಹಾಗೂ ಕಾಡಂಚಿನ ಗ್ರಾಮಗಳ ಜನರ ರಕ್ಷಣೆ ದೃಷ್ಟಿಯಿಂದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ವತಿ ಯಿಂದ 'ವನ್ಯಜೀವಿ ಸಂರಕ್ಷಣಾ ಅಭಿ ಯಾನ' ನಡೆಸಲಾಗಿತ್ತು. ರಾಯಭಾರಿ ರಿಷಬ್ ಶೆಟ್ಟಿ ಮೂಲಕ ಆಗಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು.