* ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ
* ಕೆಎಸ್ಆರ್ಟಿಸಿಯಿಂದ ಮಾಧ್ಯಮ ಪ್ರಕಟಣೆ
* ಕೊರೋನಾ ಸ್ಥಗಿತಗೊಂಡಿದ್ದ ಬಸ್ ಸಂಚಾರ
ಬೆಂಗಳೂರು, (ಆ.22): ಕರ್ನಾಟಕದಿಂದ ತಮಿಳುನಾಡಿಗೆ ಕೆಎಸ್ ಆರ್ ಟಿಸಿ ಬಸ್ ಸೇವೆ ಪುನರಾರಂಭಗೊಳ್ಳುತ್ತಿದೆ. ನಾಳೆ ಅಂದ್ರೆ ಆ.23ರಿಂದ ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಲಿದೆ.
ಕೊರೋನಾ ಸೋಂಕಿನಿಂದ ತಮಿಳುನಾಡಿಗೆ ಕರ್ನಾಟಕದಿಂದ ಕೆಎಸ್ ಆರ್ ಟಿಸಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೆ, ಇದೀಗ ಮತ್ತೆ ಬಸ್ ಸಂಚಾರ ಪುನಾರಂಭವಾಗಲಿದ್ದು, ಮೊದಲ ಹಂತದಲ್ಲಿ 250 ಬಸ್ಸುಗಳು ಸಂಚಾರ ಮಾಡಲಿದೆ ಎಂದು ಕೆಎಸ್ಆರ್‌ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
undefined
ಉಡುಪಿಯ ಕಾಲೇಜಿನಲ್ಲಿ ಕೇರಳ ವಿದ್ಯಾರ್ಥಿಗಳಿಂದ ಮೋಜು ಮಸ್ತಿ: ವಿಡಿಯೋ ವೈರಲ್
ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ತಿರುಕೊಯಿಲೂರು, ಕೊಯಮತ್ತೂರು, ತಿರುನಲ್ಲಾರ್, ತಿರುಚ್ಚಿ, ಮಧುರೈ, ಕುಂಭಕೋಣಂ, ಕಾಂಚೀಪುರಂ, ಚೆನ್ನೈ, ಊಟಿ ಇತ್ಯಾದಿ ಸ್ಥಳಗಳಿಗೆ ಸುಮಾರು 250 ಬಸ್ ಗಳು ಸಂಚರಿಸಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಏಪ್ರಿಲ್ 27 ರಿಂದ ಮಿಳುನಾಡಿಗೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿತ್ತು.ಇದೀಗ ಸುಮಾರು ನಾಲ್ಕು ತಿಂಗಳ ನಂತರ ತಮಿಳುನಾಡು – ಕರ್ನಾಟಕ ನಡುವೆ ಸಂಚರಿಸಲಿವೆ.