ಏ.30ಕ್ಕೆ SSLC ರಿಸಲ್ಟ್: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

By Web DeskFirst Published Apr 29, 2019, 4:18 PM IST
Highlights

ಮೇ 2 ರಂದು ಹತ್ತನೇ ತರಗತಿಯ ಫಲಿತಾಂಶ ಪ್ರಕಟ ಆಗಲಿದೆ ಅಂತಾ ಮಾಹಿತಿ ನೀಡಿದ್ದರು. ಆದ್ರೆ ಇದೀಗ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ನಿರ್ಧಾರವನ್ನ ದಿಢೀರ್ ಅಂತಾ ಬದಲಾವಣೆ ಮಾಡಿ, ನಾಳೆಯೇ ಫಲಿತಾಂಶ ಪ್ರಕಟ ಮಾಡೋದಾಗಿ ಹೇಳಿದೆ.ಹಾಗಾದ್ರೆ ಆನ್‌ಲೈನ್‌ನಲ್ಲಿ ಫಲಿತಾಂಶ ನೋಡುವುದು ಹೇಗೆ..? ಇಲ್ಲಿದೆ ಐದು ಹಂತಗಳು

ಬೆಂಗಳೂರು, (ಏ.29): ಮೇ 2ಕ್ಕೆ ನಿಗದಿಯಾಗಿದ್ದ ಎಸ್​ಎಸ್​ಎಲ್​ಸಿ ಫಲಿತಾಂಶ ನಾಳೆಯೇ ಪ್ರಕಟವಾಗಲಿದೆ. ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ದಿಢೀರ್ ನಿರ್ಧಾರ ಪ್ರಕಟಿಸಿದ್ದು, ನಾಳೆ ಬೆಳಗ್ಗೆ 12 ಗಂಟೆಗೆ ಫಲಿತಾಂಶ ಪ್ರಕಟ ಆಗಲಿದೆ.

ಮಾರ್ಚ್​​ 21 ರಿಂದ SSLC ಪರೀಕ್ಷೆ; ಸ್ಮಾರ್ಟ್​ ವಾಚ್​, ಮೊಬೈಲ್​ ನಿಷೇಧ..!

ಇಂದು [ಸೋಮವಾರ] ಮಧ್ಯಾಹ್ನ ಮಾಹಿತಿ ನೀಡಿದ್ದ ಎಸ್​​ಎಸ್​ಎಲ್​ಸಿ ಬೊರ್ಡ್ ನಿರ್ದೇಶಕಿ ವಿ.ಸುಮಂಗಲಾ, ಮೇ 2 ರಂದು ಹತ್ತನೇ ತರಗತಿಯ ಫಲಿತಾಂಶ ಪ್ರಕಟ ಆಗಲಿದೆ ಎಂದು ಮಾಹಿತಿ ನೀಡಿದ್ದರು. ಆದ್ರೆ ಇದೀಗ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ನಿರ್ಧಾರವನ್ನ ದಿಢೀರ್ ಅಂತಾ ಬದಲಾವಣೆ ಮಾಡಿ, ನಾಳೆಯೇ ಫಲಿತಾಂಶ ಪ್ರಕಟ ಮಾಡೋದಾಗಿ ಹೇಳಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್​​ನಲ್ಲಿ ಫಲಿತಾಂಶ ಲಭ್ಯ ಆಗಲಿದೆ. www.kaceb.kar.nic.in ಮತ್ತು www.karresults.nic.inನಲ್ಲಿ ಫಲಿತಾಂಶ ಪ್ರಕಟ ಆಗಲಿದೆ. 

ಪಾಸಾದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್​​ಗೆ ಮೆಸೇಜ್ ಮಾಡಲಾಗುತ್ತದೆ. ಆಯಾ ಶಾಲೆಗಳಲ್ಲಿ ಮರುದಿನ ಫಲಿತಾಂಶ ಪ್ರಕಟ ಆಗಲಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್​ 21 ರಿಂದ ಏಪ್ರಿಲ್​ 4 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. 

ಆನ್ ಲೈನ್ ನಲ್ಲಿ SSLC ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?

* ಅಧಿಕೃತ ವೆಬ್ ತಾಣ www.kaceb.kar.nic.in ಎಂದು ಗೂಗಲ್‌ನಲ್ಲಿ ಟೈಪ್ ಮಾಡಿ. ನಂತರ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ. 
* ನಂತರ 'SSLC Result' ಎನ್ನುವ ಲಿಂಕ್ ಕ್ಲಿಕ್ ಮಾಡಿ.ಅಲ್ಲಿ ಬಾಕ್ಸ್ ಓಪನ್ ಆಗುತ್ತೆ. 
* ಅಲ್ಲಿ ಕೇಳುವ ನಿಮ್ಮ ರೋಲ್ ನಂಬರ್ (ಹಾಲ್ ಟಿಕೇಟ್ ನಂಬರ್) ಹಾಗೂ ಇನ್ನಿತರ ಮಾಹಿತಿ ನಮೂದಿಸಿ.
* submit ಬಟನ್ ಒತ್ತಿ.
* ಫಲಿತಾಂಶದ ಪ್ರತಿ ಪಡೆಯಲು ಅಲ್ಲೇ ಇರುವ ಡೌನ್‌ಲೋಡ್ ಮೇಲೆ ಕ್ಲಿಕ್ಕಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

click me!