ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರಿದ್ದು, ಮಂಗಳವಾರ ಎಷ್ಟು ಕೇಸ್ ಪತ್ತೆಯಾಗಿವೆ..? ಎಷ್ಟು ಬಲಿಯಾಗಿವೆ..? ಯಾವ ಜಿಲೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಜುಲೈ.14) : ರಾಜ್ಯದಲ್ಲಿ ಇಂದು (ಮಂಗಳವಾರ) ರಾಜ್ಯದ ಹೊಸದಾಗಿ 2496 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 44,077ಕ್ಕೆ ಏರಿಕೆಯಾಗಿದೆ.
44,077 ಪೈಕಿ 17,390 ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 25,839 ಜನ ಸಕ್ರೀಯ ಸೋಂಕಿತರಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.
ಐಸಿಸ್ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ, ಹೆಸರು ಬದಲಾಯಿಸಿದ ದೀಪಿಕಾ; ಜು.14ರ ಟಾಪ್ 10 ಸುದ್ದಿ!
ಇನ್ನು ಮಂಗಳವಾರ ದಾಖಲೆಯ 87 ಜನರು ಸಾವನ್ನಪ್ಪಿದ್ದು, ಇದರೊಂದಿಗೆ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 842ಕ್ಕೇರಿದೆ.
ಜಿಲ್ಲಾವಾರು ಕೇಸ್
ಬೆಂಗಳೂರು ನಗರ 1267, ಮೈಸೂರು125, ಕಲಬುರಗಿ 121, ಧಾರವಾಡ100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರ ಕನ್ನಡ ಮತ್ತು ಬೆಳಗಾವಿ ತಲಾ 64, ವಿಜಯಪುರ 52, ತುಮಕೂರು 47, ಬೀದರ್ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳೂರು ಗ್ರಾಮಾಂತರ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ, ಕೊಡಗು ಮತ್ತು ಚಿತ್ರದುರ್ಗ ತಲಾ 10, ಗದಗ 09, ಚಾಮರಾಜನಗರ 08, ಹಾಸನ 04, ಚಿಕ್ಕಮಗಳೂರು 03, ಯಾದಗಿರಿ 02 ಮತ್ತು ರಾಮನಗರ 01 ಹಾವೇರಿ 0
Today's Media Bulletin 14/07/2020.
Please click on the link below to view bulletin.https://t.co/vMd7kXkLPi pic.twitter.com/B0T6uI73GL