ಅಯ್ಯಯ್ಯೋ..! ವೇಶ್ಯಾವಾಟಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ: ಐಷಾರಾಮಿ ಜೀವನಕ್ಕಾಗಿ ವೃತ್ತಿ ಆಯ್ಕೆ

By Sathish Kumar KHFirst Published Jan 10, 2023, 11:00 PM IST
Highlights

ದೇಶದಲ್ಲಿ ಐಟಿ-ಬಿಟಿ, ಸ್ಟಾರ್ಟ್‌ ಅಪ್‌, ಶ್ರೀಮಂತಿಕೆ, ಉದ್ಯಮಗಳ ಬೆಳವಣಿಗೆ, ಜಿಎಸ್‌ಟಿ ಪಾವತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ವೇಶ್ಯಾವಾಟಿಕೆಯಲ್ಲಿಯೂ ಮುಂಚೂಣಿಯಲ್ಲಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ.

ಹೈದರಾಬಾದ್ (ಜ.10): ದೇಶದಲ್ಲಿ ಐಟಿ-ಬಿಟಿ, ಸ್ಟಾರ್ಟ್‌ ಅಪ್‌, ಶ್ರೀಮಂತಿಕೆ, ಉದ್ಯಮಗಳ ಬೆಳವಣಿಗೆ, ಜಿಎಸ್‌ಟಿ ಪಾವತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ವೇಶ್ಯಾವಾಟಿಕೆಯಲ್ಲಿಯೂ ಮುಂಚೂಣಿಯಲ್ಲಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಆಧುನಿಕ ಸಮಾಜ ಬೆಳೆದಂತೆ ಅಪರಾಧ ಕೃತ್ಯ, ವೇಶ್ಯಾವಾಟಿಕೆ ಮತ್ತು ಮೋಸದ ಪ್ರಕರಣಗಳೂ ಹೆಚ್ಚಾಗುತ್ತಿವೆ.

ದೇಶದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಸಂಸ್ಥೆಗಳು, ಈಗ ವೇಶ್ಯಾವಾಟಿಕೆ ನಡೆಯುವ ಬಗ್ಗೆಯೂ ಸಮೀಕ್ಷೆಯನ್ನು ಮಾಡಿ ಬಹರಂಗಪಡಿಸಿವೆ. ಈ ವೇಳೆ ವೇಶ್ಯಾವಾಟಿಕೆ ನಡೆದ ಘಟನೆಗಳು, ಪೊಲೀಸರು ದಾಳಿ ಮಾಡಿರುವುದು, ಅಲ್ಲಿ ಸಿಕ್ಕಿರುವ ಯುವತಿಯರು, ಆರೋಪಿಗಳು ಹಾಗೂ ದಂಧೆಯಲ್ಲಿ ಪಾಲ್ಗೊಂಡಿದ್ದ ಜಾಲದ ಬಗ್ಗೆ ಪೊಲೀಸರು ನೀಡುವ ಮಾಹಿತಿಯನ್ನೂ ಕೂಡ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಜೊತೆಗೆ, ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆಗೆ ಇರುವ ಪೂರಕ ಅಂಶಗಳನ್ನು ಇಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ.

Mysuru Crime: ವಾಟ್ಸಾಪ್‌ಗೆ ಬೆತ್ತಲೆ ಫೋಟೋ ಕಳಿಸಿ ಹಣ ಪೀಕುತ್ತಿದ್ದ ಲೇಡಿ: ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

ವೇಶ್ಯಾವಾಟಿಕೆಯಲ್ಲಿ ಕರ್ನಾಟಕ 2ನೇ ಸ್ಥಾನ:  ದೇಶದಲ್ಲಿ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುತ್ತಿರುವುದು ಯಾವ ರಾಜ್ಯದಲ್ಲಿ ಎಂದು ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. ಈ ಮೂರು ರಾಜ್ಯಗಳಲ್ಲಿ ವೇಶ್ಯಾವಾಟಿಕೆ ವಿಸ್ತರಿಸುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ವೇಶ್ಯಾವಾಟಿಕೆ ಹೆಚ್ಚಾಗುತ್ತಲೇ ಇದೆ. ಆಂಧ್ರ ಪ್ರದೇಶದಲ್ಲಿ ವಾರ್ಷಿಕವಾಗಿ ಶೇ.10ರಿಂದ 15ರಷ್ಟು ಏರಿಕೆಯಾಗುತ್ತಲೇ ಇದೆ. ಅದರಲ್ಲಿಯೂ ಈ ವೃತ್ತಿಗೆ ಇಳಿಯುವವರ ಸರಾಸರಿ ವಯಸ್ಸು 18 ರಿಂದ 40 ವರ್ಷದವರಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಐಷಾರಾಮಿ ಜೀವನಕ್ಕಾಗಿ ವೇಶ್ಯಾವಾಟಿಕೆ: ಬಹುತೇಕರು ವೇಶ್ಯಾವಾಟಿಕೆಗೆ ಬರುವವರು ಕೌಟುಂಬಿಕ ಸ್ಥಿತಿಗತಿಗಳು ಮತ್ತು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡ ಮಹಿಳೆಯರು ಈ  ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ವೇಶ್ಯಾವಾಟಿಕೆ ವ್ಯಾಪಕವಾಗಿ ಹೆಚ್ಚಳ ಆಗುತ್ತಿರುವ ಕಾರಣ  ಎಚ್‌ಐವಿ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ 3.94 ಲಕ್ಷ, ಕರ್ನಾಟಕದಲ್ಲಿ 2.76 ಲಕ್ಷ ಹಾಗೂ ಆಂಧ್ರಪ್ರದೇಶದಲ್ಲಿ 2.09 ಲಕ್ಷ ಎಚ್‌ಐವಿ ಪ್ರಕರಣಗಳು ಇವೆ. ಆದರೆ, ಆಂಧ್ರಪ್ರದೇಶದಲ್ಲಿ  1.33 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ ಎಂದು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮತ್ತು ಸೇವಾ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಯಿಂದ ತಿಳಿದುಬಂದಿದೆ. 

ಎಚ್‌ಐವಿ ಸೋಂಕಿದ್ದರೂ ವೃತ್ತಿ ಬಿಡುತ್ತಿಲ್ಲ: ಕೆಲವರು ವಿವಿಧೆಡೆ ಉದ್ಯೋಗಗಳಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ಅದರಿಂದ ಹಣ ಸಂಪಾದನೆ ಹಾದಿ ಕಂಡುಕೊಂಡಿರುತ್ತಾರೆ. ನಂತರ ಇದನ್ನೇ ಜೀವನೋಪಾಯಕ್ಕಾಗಿ ಮುಂದುವರೆಸಿಕೊಂಡು ಈ ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ರಾಯಲಸೀಮಾದಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಿದ್ದು, ಇಲ್ಲಿ ವೇಶ್ಯಾವಾಟಿಕೆ ನಡೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇವರಲ್ಲಿ ಹಲವರಿಗೆ ಎಚ್‌ಐವಿ ಸೋಂಕಿದ್ದರೂ ವೃತ್ತಿಯನ್ನು ಬಿಡುತ್ತಿಲ್ಲ. ಔಷಧ ಬಳಸುತ್ತಲೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಮಹಾರಾಷ್ಟ್ರ 59,785 ಸ್ಥಳೀಯ ಲೈಂಗಿಕ ಕಾರ್ಯಕರ್ತರನ್ನು ಹೊಂದಿದೆ, ದೆಹಲಿಯಲ್ಲಿ 46,786 ಮತ್ತು ಮಿಜೋರಾಂನಲ್ಲಿ 833 ಕಡಿಮೆ ಸಂಖ್ಯೆಯ ಲೈಂಗಿಕ ಕಾರ್ಯಕರ್ತರಿದ್ದಾರೆ.

Bengaluru Crime: ಕೆಂಗೇರಿ ಡೆಂಟಲ್‌ ಕಾಲೇಜು ಬಳಿ ಬಾಂಗ್ಲಾದೇಶಿಗರಿಂದ ವೇಶ್ಯಾವಾಟಿಕೆ

ವಲಸೆ ಕಾರ್ಮಿಕರೇ ವೇಶ್ಯಾವಾಟಿಕೆಗೆ ಬಲಿ: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಸೇರಿ ವಿವಿಧ ನೆರೆಯ ರಾಜ್ಯಗಳಿಂದ 11,639 ಜನರು ವಲಸೆ ಬಂದಿದ್ದು, ಆಂಧ್ರಪ್ರದೇಶದಲ್ಲಿ ವೇಶ್ಯೆಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಒಡಿಶಾ, ಛತ್ತೀಸ್‌ಗಢ, ಅಸ್ಸಾಂ, ಬಿಹಾರ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಂದ ಬಂದಿದ್ದಾರೆ. ಮಹಾರಾಷ್ಟ್ರಕ್ಕೆ ವಿವಿಧ ರಾಜ್ಯಗಳಿಂದ 6.06 ಲಕ್ಷ ಜನರು ವಲಸೆ ಬಂದಿದ್ದು, ಎಲ್ಲರೂ ಲೈಂಗಿಕ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಗುಜರಾತ್‌ನಲ್ಲಿ 2.08 ಲಕ್ಷ ಮತ್ತು ದೆಹಲಿಯಲ್ಲಿ 1.85 ಲಕ್ಷ ಜನರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ.

ದ್ವಿಗುಣಗೊಂಡ ಲೈಂಗಿಕ ಕಾರ್ಯಕರ್ತೆಯರು: ಜನವರಿ ಮತ್ತು ಸೆಪ್ಟೆಂಬರ್ 2021 ರ ನಡುವೆ ನಡೆಸಿದ ಅಧ್ಯಯನದಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. ದೇಶಾದ್ಯಂತ 8.25 ಲಕ್ಷ ಮಹಿಳಾ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಅದರಲ್ಲಿ 1.33 ಲಕ್ಷ ಜನರೊಂದಿಗೆ ಎಪಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1.16 ಲಕ್ಷ, ತೆಲಂಗಾಣದಲ್ಲಿ 1 ಲಕ್ಷ ಮತ್ತು ತಮಿಳುನಾಡಿನಲ್ಲಿ 65 ಸಾವಿರ ಮಂದಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶದಲ್ಲಿ ಪ್ರಸ್ತುತ 65 ಸಾವಿರ ಲೈಂಗಿಕ ಕಾರ್ಯಕರ್ತರು ವಾಸಿಸುತ್ತಿದ್ದಾರೆ. 2022ರ ವೇಳೆಗೆ ಈ ಸಂಖ್ಯೆ ದ್ವಿಗುಣ ಆಗಿದೆ ಎಂದು ತಿಳಿದುಬಂದಿದೆ. ಆದರೆ, ಅಂಕಿ ಅಂಶದಿಂದ ಎಚ್‌ಐವಿ ಸೋಂಕು ಮತ್ತಷ್ಟು ಉಲ್ಬಣ ಆಗುವ ಆತಂಕ ಎದುರಾಗಿದೆ. 

click me!