Ban On MES: ಕರ್ನಾಟಕ ಬಂದ್ ಮುಂದೂಡಿದ ಕರವೇ, ಕಾರಣ ಹೀಗಿದೆ!

By Suvarna News  |  First Published Dec 29, 2021, 11:38 AM IST

* ಕರ್ನಾಟಕ ಬಂದ್ ಮುಂದೂಡಿಕೆ ಆದ್ರೆ ಸೂಕ್ತ.

* ಸುವರ್ಣ ನ್ಯೂಸ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ..

* ಕೋವಿಡ್  ಕಾರಣದಿಂದ ಜನ ಸಾಕಷ್ಟು ಸಂಕಷ್ಟ ದಲ್ಲಿ ಇದ್ದಾರೆ.


ಬೆಂಗಳೂರು(ಡಿ.29): ಎಂಇಎಸ್  ಸಂಘಟನೆ ನಿಷೇಧಿಸಲು ಆಗ್ರಹಿಸಿ ಶುಕ್ರವಾರದಂದು ಆಯೋಜಿಸಲಾಗಿದ್ದ ಕರ್ನಾಟಕ ಬಂದ್ ಮುಂದೂಡಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರ ಮನವೊಲಿಸಲು ಯತ್ನಿಸುವುದಾಗಿಯೂ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಬಂದ್ ವಿಚಾರವಾಗಿ ಸಂಘಟನೆಗಳ ನಡುವೆ ಯಾವುದೇ ಒಡಕಿಲ್ಲ ಎಂಬುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಬಂದ್ ಮುಂದೂಡಿಕೆ ಏಕೆ?

Latest Videos

undefined

ಬಂದ್ ಮುಂದೂಡುವ ನಿರ್ಧಾರವೇಕೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೋವಿಡ್  ಕಾರಣದಿಂದ ಜನ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಎಂಇಎಸ್ ನಿಷೇಧ ಆಗಬೇಕು ಅನ್ನೋದು ನಮ್ಮ ಆಗ್ರಹ ಕೂಡಾ ಹೌದು. ಬಂದ್ ವಿಚಾರದಲ್ಲಿ ಸಂಘಟನೆಗಳ ನಡುವೆ ಒಡಕಿಲ್ಲ. ಆದರೆ ಈಗ ಬಂದ್ ಅವಶ್ಯ ಇದೆಯೇ ಎನ್ನುವುದೇ ಪ್ರಶ್ನೆ ಎದ್ದಿದೆ. ಹೀಗಾಗಿ ಎಂಇ ಎಸ್  ಸಂಘಟನೆ ನಿಷೇಧ ಮಾಡಲು ಆಗ್ರಹಿಸಿ ನಾಳೆ ರಾಜಭವನಕ್ಕೆ ರ್ಯಾಲಿ ಮಾಡಲಾಗುತ್ತದೆ. ಆದರೆ ಬಂದ್ ಮುಂದೂಡಿಕೆ ಮಾಡಲು ವಾಟಾಳ್ ನಾಗರಾಜ್ ಅವರನ್ನು ಮನವೊಲಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

"

ಇನ್ನು ಕರವೇ ಬಂದ್ ಮುಂದೂಡುವ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿದೆ. ಇದರಲ್ಲಿ ಬಂದ್ ಮುಂದೂಡುವ ಹಾಗೂ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಬಂದ್ ಆಚರಿಸದಿರಲೂ ಮನವಿ ಮಾಡಿಕೊಂಡಿದ್ದಾರೆ.

ಹೀಗಿದೆ ಪ್ರಕಟಣೆ

ಅಧ್ಯಕ್ಷರು
ಕನ್ನಡ ಪರ ಸಂಘಟನೆಗಳ ಒಕ್ಕೂಟ
ಬೆಂಗಳೂರು

ಕನ್ನಡದ,ಕನ್ನಡಿಗರ,ಕನ್ನಡ ಪರ ಹೋರಾಟಗಾರರ ಪ್ರಶ್ನಾತೀತ ನಾಯಕರೆ ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿ ಕೊಳ್ಳುವುದೇನೆಂದರೆ  ದಿನಾಂಕ 22-12-21 ರಂದು ನಾವೆಲ್ಲರೂ ಒಮ್ಮತದಿಂದ ದಿನಾಂಕ ಮೂವತ್ತೊಂದರ ಶುಕ್ರವಾರ ರಾಜ್ಯ ಬಂದ್ ಕರೆ ನೀಡಿದ್ದು ಸರಿಯಷ್ಟೆ ಆದರೆ ನಂತರ ನಡೆದ ಹಲವಾರು ಬೆಳವಣಿಗೆಗಳು ನಮ್ಮ ಈ ನಿರ್ಧಾರ ಪ್ರಸ್ತುತ ಸರಿ ಇಲ್ಲವೆಂಬ ಭಾವನೆ ಮೂಡುತ್ತಿದೆ ಕಾರಣ ಓಮಿಕ್ರಾನ್ ಈಗಾಗಲೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಿದೆ ತತ್ಪರಿಣಾಮವಾಗಿ ಸೆಕ್ಷನ್ 144 ಹಾಗು ರಾತ್ರಿ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ ಈಗಾಗಲೆ ಕೊವಿಡ್ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿರುವ ವರ್ತಕರು ವಾಣಿಜ್ಯೋದ್ಯಮಿಗಳು ಹೋಟೆಲ್ ಮಾಲೀಕರು ನಮ್ಮ ಈ ನಿರ್ಧಾರದಿಂದ ಸಾಕಷ್ಟು ಆತಂಕ ದಲ್ಲಿದ್ದಾರೆ ಹಳೆ ವರ್ಷದ ಕೊನೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಬಹಳ ನಷ್ಠ ಹೊಂದುತ್ತಾರೆ ಸದಾಕಾಲ ನಮ್ಮ ಜೊತೆ ನಿಲ್ಲುತ್ತಿದ್ದ ಚಿತ್ರೋದ್ಯಮ ಕೆಲವು ಸಂಘಟನೆಗಳು ತಮ್ಮ ಅಸಮಾಧಾನವನ್ನ ಹೊರ ಹಾಕಿವೆ ಸಾರ್ವಜನಿಕ ವಲಯ ಹಾಗೂ ಬಹಳ ಪ್ರಮುಖವಾಗಿ ಬೆಳಗಾವಿಯ ಕ್ರಿಯ ಸಮಿತಿ ಕೂಡ ನಮ್ಮ ಬಂದ್ ಗೆ ಬೆಂಬಲ ನೀಡುತ್ತಿಲ್ಲ ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲೂ ಬಂದ್ ಬಗ್ಗೆ ಒಮ್ಮತ ಸಾದ್ಯವಾಗಿಲ್ಲ ಈ ಎಲ್ಲಾ ಕಾರಣಗಳನ್ನ ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು  ಬಂದ್ ದಿನಾಂಕವನ್ನ ಮೂಂದೂಡುವುದು ಸೂಕ್ತ ಮುಂದಿನ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗಧಿ ಗೊಳಿಸೋಣಾ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ       

ವಂದನೆಗಳೊಂದಿಗೆ

ಇಂತಿ ತಮ್ಮ ವಿಧೇಯ
ಪ್ರವೀಣ್ ಕುಮಾರ್ ಶೆಟ್ಟಿ

click me!