ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಮನೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಬೆಂಗಳೂರು (ಅ. 21): ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಮನೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ. ಭೀಮೆಯ ಅಬ್ಬರಕ್ಕೆ ಈಗಾಗಲೇ 43 ಸಾವಿರಕ್ಕೂ ಹೆಚ್ಚು ಜನ ಮನೆ, ಮಠ ತೊರೆದಿದ್ದಾರೆ. ಕಲಬುರ್ಗಿ, ರಾಯಚೂರು, ವಿಜಯಪುರ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.