ಪಿಯುಸಿ ಪರೀಕ್ಷೆ ನೋಂದಣಿ ಗಡುವು ಮತ್ತೆ ವಿಸ್ತರಣೆ | ನೋಂದಣಿಗೆ ಮತ್ತೊಮ್ಮೆ ಅವಕಾಶ
ಬೆಂಗಳೂರು(ಜ.12): ಪದವಿ ಪೂರ್ವ ಶಿಕ್ಷಣ ಇಲಾಖೆ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಳ್ಳುವ ಮತ್ತು ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಿದೆ.
ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಖಾಸಗಿ ವಿದ್ಯಾರ್ಥಿಗಳಿಗೆ ಈಗಾಗಲೇ ಮೂರು ಬಾರಿ ಅವಕಾಶ ನೀಡಲಾಗಿತ್ತು. ಮತ್ತೊಮ್ಮೆ ಅವಧಿ ವಿಸ್ತರಿಸುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿರುವ ಮೇರೆಗೆ ಜ.22ರವರೆಗೆ ನೋಂದಣಿಗೆ ಅವಕಾಶ ನೀಡಿದೆ. ಶುಲ್ಕದ ಜೊತೆಗೆ 500 ರು.ಗಳ ದಂಡ ಶುಲ್ಕ ಹಾಗೂ ವಿಶೇಷ ದಂಡ ಶುಲ್ಕ 150 ರು.ಗಳನ್ನು ಪಾವತಿಸುವಂತೆ ತಿಳಿಸಿದೆ.
undefined
ವಿದ್ಯಾರ್ಥಿಗಳ ಗಮನಕ್ಕೆ: ಕ್ಲಾಸ್ ಪ್ರಾರಂಭ, ಬಸ್ ಪಾಸ್ ಬಗ್ಗೆ ಡಿಸಿಎಂ ಮಹತ್ವದ ಘೋಷಣೆ
ಅನುತ್ತೀರ್ಣಗೊಂಡಿರುವ ಮತ್ತು ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ, 500 ದಂಡ ಶುಲ್ಕ, 2020 ರು. ವಿಶೇಷ ದಂಡ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಕಾಲೇಜಿನವರು ಶುಲ್ಕವನ್ನು ಖಜಾನೆಗೆ ಪಾವತಿಸಲು ಜ.25 ಹಾಗೂ ಕಾಲೇಜಿನವರು ಪರೀಕ್ಷಾ ಶುಲ್ಕ ಪಾವತಿಸಿದ ಅರ್ಜಿಗಳನ್ನು ಚಲನ್ ಮೂಲಕ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಜ.27 ಕೊನೆಯ ದಿನವಾಗಿದೆ.
ದಾಖಲಾತಿಗೆ ಜ.22ರ ಅವಕಾಶ:
ಅದೇ ರೀತಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಪಡೆದುಕೊಳ್ಳಲು ಮತ್ತು ಕಾಲೇಜು ಬದಲಾವಣೆಗೆ ಜ.22ರವರೆಗೆ ಅವಧಿ ವಿಸ್ತರಿಸಲಾಗಿದೆ. ಈಗಾಗಲೇ ನಾಲ್ಕು ಬಾರಿ ಅವಧಿ ವಿಸ್ತರಿಸಿದ್ದು, ಇದು ಕೊನೆಯ ಅವಕಾಶವಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.