ಸ್ಮಾರ್ಟ್ ಮೀಟರ್ ಹಗರಣ: 7,408 ಕೋಟಿ ರೂ. ಗೋಲ್ ಮಾಲ್? ಜನರ ಹಣ ಯಾರ ಜೇಬಿಗೆ?

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದರದಲ್ಲಿ ಸ್ಮಾರ್ಟ್ ಮೀಟರ್ ಖರೀದಿಸಿ 7,408 ಕೋಟಿ ರೂ. ಗೋಲ್ ಮಾಲ್ ಮಾಡಲಾಗಿದೆ ಎಂದು ಹೇಳಲಾಗಿದೆ.

Karnataka Power Department Rs 7500 crore scam from smart meter installation sat

ಬೆಂಗಳೂರು (ಮಾ.21): ರಾಜ್ಯದಲ್ಲಿ ಇಂಧನ ಇಲಾಖೆಯಿಂದ 39 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಕೆ ಗುರಿ ಇಟ್ಟಿಕೊಂಡಿದ್ದು, ವಾರ್ಷಿಕ 9 ಲಕ್ಷ ಸ್ಮಾರ್ಟ್​ ಮೀಟರ್ ಅಳವಡಿಕೆಗೆ ಮುಂದಾಗಿದೆ. ಆದರೆ, ಬೇರೆ ರಾಜ್ಯಗಳಲ್ಲಿ ಇಲ್ಲದ ಬೃಹತ್ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಖರೀದಿ ಮಾಡಲು ಟೆಂಡರ್ ನೀಡಲಾಗಿದ್ದು, ಬರೋಬ್ಬರಿ 7,408 ಕೋಟಿ ರೂ. ಹಗರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಜನರಿಗೂ ಬರೆ ಎಳೆಯುತ್ತಿದೆ. ಈ ಹಣ ಯಾರ ಜೇಬಿಗೆ ಹೋಗಲಿದೆ ಎಂಬುದು ಭಾರೀ ಚರ್ಚೆ ಆಗುತ್ತಿದೆ.

ವಿದ್ಯುತ್ ಇಲಾಖೆಯಲ್ಲಿ ಸಾವಿರಾರು ಕೋಟಿ ಹಗರಣ ನಡೆಸಿರೋ ಶಂಕೆ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ನಡೆದಿದೆಯಂತೆ ಭಾರೀ ಹಗರಣ ಮಾಡಲಾಗುತ್ತಿದೆ. ದೇಶಾದ್ಯಂತ ಸ್ಮಾರ್ಟ್​ ಮೀಟರ್ ಅಳವಡಿಕೆಯಲ್ಲೇ ಒಂದು ರೂಲ್ಸ್ ಇದ್ದರೆ, ನಮ್ಮ ರಾಜ್ಯದಲ್ಲಿ ಸ್ಮಾರ್ಟ್​ ಮೀಟರ್ ಅಳವಡಿಕೆಗೆ ಮತ್ತೊಂದು ರೂಲ್ಸ್ ಇದೆ. ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲೇ ಸ್ಮಾರ್ಟ್​ ಮೀಟರ್‌​ಗೆ ಒಂದು ಬೆಲೆ ಇದ್ದರೆ, ನಮ್ಮ ಕರ್ನಾಟಕದಲ್ಲಿ ಸ್ಮಾರ್ಟ್​​ ಮೀಟರ್‌​​ಗೆ ಮತ್ತೊಂದು ಬೆಲೆಯಿದೆ. ಸ್ಮಾರ್ಟ್​ ಮೀಟರ್ ಅಳವಡಿಕೆಯಲ್ಲಿ ಸರ್ಕಾರದ ಖಜಾನೆಗೂ ಕನ್ನ ಹಾಕಿ, ರಾಜ್ಯದ ಜನರಿಗೂ ಬರೆ ಎಳೆದು ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

Latest Videos

ಕರ್ನಾಟಕ ಹೊರತಾದ ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ 900 ರೂ. ನಿಗದಿ ಮಾಡಲಾಗಿದ್ದು, ಉಳಿದ ಹಣವನ್ನು 8 ವರ್ಷಗಳಲ್ಲಿ ಕಂತುಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್‌ಗೆ ಒಂದೇ ಹಂತದಲ್ಲಿ ಹಣವನ್ನು ಪಾವತಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ಸಿಂಗಲ್ ಫೇಸ್‌ ಮೀಟರ್‌ಗೆ 5,694 ರೂಪಾಯಿ, ತ್ರಿ ಫೇಸ್ ಸ್ಮಾರ್ಟ್ ಮೀಟರ್‌ಗೆ 8,510 ರೂಪಾಯಿ ನಿಗದಿ ಮಾಡಲಾಗಿದೆ. ಜೊತೆಗೆ, ಒಂದೇ ಬಾರಿ ಪಾವತಿಸುವ ಜತೆಗೆ 10 ವರ್ಷಗಳ ಕಂತನ್ನೂ ಕಟ್ಟಬೇಕು. ಇನ್ನು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬೇರೆ ರಾಜ್ಯಗಳಲ್ಲಿ ಆರಂಭದಲ್ಲಿ 900 ರೂ. ಪಾವತಿ ಮಾಡಿದರೆ ಸಾಕು. ಉಳಿದಂತೆ ತಿಂಗಳಿಗೆ 57 ರೂ. ಹೆಚ್ಚುವರಿಯಾಗಿ ಪಾವತಿಸಬೇಕು. ಆದರೆ, ಕರ್ನಾಟಕದಲ್ಲಿ 8,510 ರೂ. ಜತೆಗೆ ತಿಂಗಳಿಗೆ 71 ರೂ. ಹೆಚ್ಚುವರಿ ಹಣವನ್ನೂ ಪಾವತಿಸಬೇಕು. ಸಿಂಗಲ್​ ಪೇಮೆಂಟ್‌ನಲ್ಲೂ ಸುಲಿಗೆ ಮಾಡುವ ಸರ್ಕಾರ, ಕಂತು ಪಾವತಿಯಲ್ಲೂ ಸುಲಿಗೆ ಮಾಡುತ್ತಿದೆ.

ಇದನ್ನೂ ಓದಿ: ಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಕರ್ನಾಟಕ ಇಂಧನ ಇಲಾಖೆ ಸ್ಮಾರ್ಟ್ ಮೀಟರ್ ಹೆಸರಲ್ಲಿ 7,500 ಕೋಟಿ ರೂ. ಅಕ್ರಮ ಎಸಗಿ, ಗುತ್ತಿಗೆ ಕಂಪನಿಗೆ ಲಾಭ ಮಾಡಿಕೊಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ನಮ್ಮ ರಾಜ್ಯದಲ್ಲಿ ತ್ರಿ ಫೇಸ್ ಸ್ಮಾರ್ಟ್ ಮೀಟರ್‌​​ಗೆ 17 ಸಾವಿರ ರೂಪಾಯಿ ಪಾವತಿ ಮಾಡಬೇಕು. ಆದರೆ, ಬೇರೆ ರಾಜ್ಯಗಳಲ್ಲಿ ತ್ರಿ ಫೇಸ್ ಸ್ಮಾರ್ಟ್ ಮೀಟರ್‌ಗೆ ಕೇವಲ  7,740 ರೂ. ಪಾವತಿಸಬೇಕು. ಅಂದರೆ, ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಮೀಟರ್‌​ಗೆ 9,260 ರೂ. ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಜೊತೆಗೆ, ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನನಲ್ಲಿಯೂ ಸಾಲು ಸಾಲು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. 

ರಾಜ್ಯದಲ್ಲಿ 8 ಲಕ್ಷ ಸ್ಮಾರ್ಟ್ ಮೀಟರ್‌ಗೆ ಗುತ್ತಿಗೆ ಕಂಪನಿಗೆ ಹೆಚ್ಚುವರಿ 7,408 ಕೋಟಿ ರೂ. ಹಣ ಪಾವತಿ ಮಾಡಲಾಗುತ್ತಿದೆ. ಪ್ರತಿ ಮೀಟರ್‌​ಗೆ 9,260 ರೂ. ನಂತೆ 7,408 ಕೋಟಿ ಹೆಚ್ಚುವರಿ ಹಣ ಕಂಪನಿಗೆ ಕೊಡಲಾಗುತ್ತಿದೆ. ಸ್ಮಾರ್ಟ್ ಮೀಟರ್​ ಹೆಸರಲ್ಲಿ 7,408 ಕೋಟಿ ಯಾರ ಜೇಬಿಗೆ ಹೋಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಸ್ಮಾರ್ಟ್ ಮೀಟರ್ ದರ ಶೇ.400ರಿಂದ ಶೇ.800ರಷ್ಟು ಏರಿಕೆ ಮಾಡಲಾಗಿದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸ್ಮಾರ್ಟ್ ಮೀಟರ್ ಬೆಲೆ ಏರಿಕೆ ಮಾಡಲಾಗಿದೆ.

ಸ್ಮಾರ್ಟ್ ಮೀಟರ್ ಹಳೆಯ ಮತ್ತು ಹೊಸ ದರ ಹೋಲಿಕೆ ಇಲ್ಲಿದೆ ನೋಡಿ..

ಮೀಟರ್ ಹಳೆಯ ದರ (ರೂ.ಗಳಲ್ಲಿ) ಹೊಸ ಸ್ಮಾರ್ಟ್ ಮೀಟರ್ ದರ
ಸಿಂಗಲ್ ಫೇಸ್ ಮೀಟರ್  950 4,998
ಸಿಂಗಲ್ ಫೇಸ್ ಮೀಟರ್-2 2,400 9,000
ತ್ರಿಫೇಸ್ ಮೀಟರ್ 2,500 28,000

ಇದನ್ನೂ ಓದಿ: ನಂದಿನಿ ಇಡ್ಲಿ-ದೋಸೆ ಹಿಟ್ಟು ಏ.1ರಿಂದ ಎಲ್ಲ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್‌ಗಳಲ್ಲೂ ಲಭ್ಯ!

ಎಸ್ಕಾಂವಾರು ಸ್ಮಾರ್ಟ್ ಮೀಟರ್ ಅಳವಡಿಕೆ ಗುರಿ: 
ಬೆಸ್ಕಾಂ    - 4 ಲಕ್ಷ
ಮೆಸ್ಕಾಂ    - 70 ಸಾವಿರ    
ಹೆಸ್ಕಾಂ    - 1.46 ಲಕ್ಷ
ಜೆಸ್ಕಾಂ    - 1.17 ಲಕ್ಷ
ಸೆಸ್ಕಾಂ    - 60 ಸಾವಿರ

vuukle one pixel image
click me!