ನಂದಿನಿ ಇಡ್ಲಿ-ದೋಸೆ ಹಿಟ್ಟು ಏ.1ರಿಂದ ಎಲ್ಲ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್‌ಗಳಲ್ಲೂ ಲಭ್ಯ!

ನಂದಿನಿ ಪ್ರೊಟೀನ್ ಭರಿತ ಇಡ್ಲಿ-ದೋಸೆ ಹಿಟ್ಟು ಏಪ್ರಿಲ್ 1 ರಿಂದ ಚಿಲ್ಲರೆ ಮಳಿಗೆಗಳು, ಆಪ್‌ಗಳು, ಇ-ಕಾಮರ್ಸ್ ತಾಣಗಳು ಮತ್ತು ಮಾಲ್‌ಗಳಲ್ಲಿ ಲಭ್ಯವಿರಲಿದೆ. ಮಾರಾಟವನ್ನು ಹೆಚ್ಚಿಸಲು ಕೆಎಂಎಫ್ ಖಾಸಗಿ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

kmf-nandini-idli-dosa-batter-expansion-retail-e-commerce-april-1-release-sat

ಬೆಂಗಳೂರು (ಮಾ.21): ಕರ್ನಾಟಕ ಹಾಲು ಒಕ್ಕೂಟದಿಂದ ಕಳೆದ ಡಿಸೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಪ್ರೊಟೀನ್ ಭರಿತ ನಂದಿನಿ ಇಡ್ಲಿ-ದೋಸೆ ಹಿಟ್ಟು ಬಳಕೆಗೆ ಗ್ರಾಹಕರಿಂದ ಭಾರೀ ಬೇಡಿಕೆ ಬರುತ್ತಿದೆ. ಇದೀಗ ಇನ್ನೂ ಸುಲಭವಾಗಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟು ಜನರಿಗೆ ಲಭ್ಯವಾಗುವಂತೆ ಮಾಡಲು ಏ.1ರಿಂದ ಎಲ್ಲ ಚಿಲ್ಲರೆ ಮಳಿಗೆಗಳಿ, ಡೆಲಿವರಿ ಮಾಡುವ ಆಪ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಲಭ್ಯವಿರಲಿದೆ.

ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿರುವ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿಯೇ ದೋಸೆ -ಇಡ್ಲಿ ಹಿಟ್ಟು ಮಾರಾಟ ಮಾಡಲಾಗುತ್ತಿದ್ದು, ಈವರೆಗೆ ಪ್ರತಿದಿನ ಸರಾಸರಿ 4,600 ಕೆ.ಜಿ. ಹಿಟ್ಟನ್ನು ಮಾರಾಟ ಮಾಡಲಾಗುತ್ತಿತ್ತು. ಇದೀಗ ಈ ಮಾರಾಟವನ್ನು ಮುಂದಿನ 3 ತಿಂಗಳಲ್ಲಿ 15,000 ಕೆ.ಜಿ.ಗೆ ಹೆಚ್ಚಿಸಲು ಕೆಎಂಎಫ್ ಯೋಜನೆ ರೂಪಿಸಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ 750 ನಂದಿನಿ ಮಳಿಗೆಗಳ ಮೂಲಕ ನಂದಿನಿ ಇಡ್ಲಿ-ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿದ್ದ ಕೆಎಂಎಫ್ ಏ.1ರಿಂದ ಎಲ್ಲ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು, ಚಿಲ್ಲರೆ ಅಂಗಡಿಗಳಿಗೆ ಪೂರೈಕೆ ಮಾಡಲು ಸಿದ್ಧವಾಗಿದೆ. ಈ ಮೂಲಕ ಮೂಲಕ ಖಾಸಗಿ ಬ್ರ್ಯಾಂಡ್‌ಗಳಾದ ಐಡಿ, ಅಸಲ್ ಮತ್ತು ಎಂಟಿಆರ್ ನಂತಹ ಖಾಸಗಿ ಕಂಪನಿಗಳಿಗೆ ಸಮರ ಸಾರಲು ಹೊರಟಿದೆ.

Latest Videos

ಆದ್ದರಿಂದ ಏಪ್ರಿಪ್ ತಿಂಗಳಿಂದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌, ಬ್ಲಿಂಕಿಟ್, ಬಿಗ್‌ಬಾಸ್ಕೆಟ್ ಮತ್ತು ಜೆಪ್ಟೊ ಸೇರಿ ಅನೇಕ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮತ್ತು ಸೂಪರ್‌ ಮಾರ್ಕೆಟ್‌ಗಳಲ್ಲಿ ನಂದಿನಿ ದೋಸೆ-ಇಡ್ಲಿ ಹಿಟ್ಟು ಲಭ್ಯವಾಗಲಿದೆ. ಆರಂಭದಲ್ಲಿ ಇಡ್ಲಿ-ದೋಸೆ ಹಿಟ್ಟಿನ ಉತ್ಪಾದನಾ ಸಾಮರ್ಥ್ಯವನ್ನು 5,000 ಕೆ.ಜಿ.ಯಿಂದ ಆರಂಭಿಸಿದ್ದು, ಇದೀಗ 10,000 ಕೆಜಿಗೆ ಹೆಚ್ಚಳ ಮಾಡಲಾಗಿದೆ. ಮತ್ತುಷ್ಟು ಹೆಚ್ಚಳ ಮಾಡಲು ಉತ್ಪಾದನಾ ಘಟಕಗಳ ಸ್ಥಾಪನೆಗೆ ಸ್ಥಳ ಶೋಧನೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗ್ಗಿನ ತಿಂಡಿಯ ಚಿಂತೆ ಬೇಡ; ಹಾಲಿನಂತೆ ಮನೆ ಬಾಗಿಲಿಗೆ ಬರಲಿದೆ ನಂದಿನಿ ಇಡ್ಲಿ, ದೋಸೆ ಹಿಟ್ಟು!

ಆರಂಭದಲ್ಲಿ ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ - ದೋಸೆ ಹಿಟ್ಟಿಗೆ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಅಳೆಯಲು ಕೆಎಂಎಫ್‌ ತನ್ನ ನಂದಿನಿ ಮಳಿಗೆಗಳಿಗೆ ಹಿಟ್ಟಿನ ಮಾರಾಟವನ್ನು ಸೀಮಿತಗೊಳಿಸಿತ್ತು. ಆದರೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಪ್ರಮುಖ ಸೂಪರ್‌ಮಾರ್ಕೆಟ್‌ಗಳು ಮತ್ತು ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೂ ಮಾರಾಟವನ್ನು ವಿಸ್ತರಿಸಲು ಹೊರಟಿದೆ. ಇದರಿಂದ ಈಗಿರುವ ಮಾರಾಟ 3 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ನಂದಿನಿ ಇಡ್ಲಿ - ದೋಸೆ ಹಿಟ್ಟಿಗೆ 450 ಗ್ರಾಂ ಪ್ಯಾಕ್‌ಗೆ 40 ರೂ. ಮತ್ತು 900 ಗ್ರಾಂ ಪ್ಯಾಕ್‌ಗೆ 80 ರೂ. ದರ ಇದೆ.

ಆರಂಭದಲ್ಲಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟಿಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಬೆಂಗಳೂರಿನ ಸೀಮಿತ ಕೆಎಂಎಫ್‌ ಡೈರಿಗಳಲ್ಲಿ ಮಾತ್ರ ಈ ಹಿಟ್ಟನ್ನು ಮಾರಾಟ ಮಾಡುತ್ತಿದ್ದೆವು. ಆದರೆ, ಗ್ರಾಹಕರಿಂದ ಭಾರೀ ಬೇಡಿಕೆ ಹೆಚ್ಚಾಗಿದ್ದರಿಂದ ಪೂರೈಕೆ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ. ಜೊತೆಗೆ, ಬೆಂಗಳೂರು ಮಾರುಕಟ್ಟೆಯಲ್ಲಿ ಯಶಸ್ವಿಯಾದ ಬೆನ್ನಲ್ಲಿಯೇ ಮುಂದಿನ 2 ತಿಂಗಳಲ್ಲಿ ರಾಜ್ಯದ ಮಹಾನಗರಗಳಾದ ಮೈಸೂರು, ಮಂಗಳೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ಪ್ರಮುಖ ನಗರಗಳಿಗೂ ನಂದಿನಿ ದೋಸೆ -ಇಡ್ಲಿ ಹಿಟ್ಟಿನ ಮಾರಾಟವನ್ನು ವಿಸ್ತರಿಸಲು ಯೋಜಿಸುತ್ತಿದೆ. ಇದಕ್ಕಾಗಿ ಈ ನಗರಗಳಲ್ಲಿ ಪ್ರತ್ಯೇಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಆರಂಭ; ಅಮುಲ್, ಮದರ್ ಡೈರಿಗೆ ನಡುಕ!

vuukle one pixel image
click me!