ಬಿಎಸ್‌ವೈ ಲವಲವಿಕೆಯ ಗುಟ್ಟೇನು?

Published : Jan 15, 2019, 09:29 AM IST
ಬಿಎಸ್‌ವೈ ಲವಲವಿಕೆಯ ಗುಟ್ಟೇನು?

ಸಾರಾಂಶ

ಆಪರೇಷನ್ ಸಂಕ್ರಾಂತಿ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗ ಬಿಎಸ್‌ವೈ ಲವಲವಿಕೆ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹಾಗಾದ್ರೆ ಅವರ ಈ ಲವಲವಿಕೆಯ ಹಿಂದಿನ ಗುಟ್ಟೇನು?

 

ಬೆಂಗಳೂರು[ಜ.15]: ಮೈತ್ರಿ ಸರ್ಕಾರಕ್ಕೆ ‘ಸಂಕ್ರಾಂತಿ ಆಪರೇಷನ್‌’ ಎದುರಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿರುವ ಹೊತ್ತಿನಲ್ಲೇ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಡೆ ನುಡಿಗಳಲ್ಲಿ ಕಾಣಿಸಿಕೊಂಡ ಲವಲವಿಕೆಯು ಮತ್ತಷ್ಟುಕುತೂಹಲ ಹುಟ್ಟುಹಾಕಿದೆ.

ಸಿಟ್ಟಿನ ಸ್ವಭಾವದ ಯಡಿಯೂರಪ್ಪ ಅವರು, ಇತ್ತೀಚೆಗೆ ಕೊನೆ ಕ್ಷಣದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದೆ ನಿರಾಸೆಗೊಂಡವರಂತೆ ಕಂಡುಬರುತ್ತಿದ್ದರು. ಹೀಗಾಗಿ ಮೈತ್ರಿ ಪಕ್ಷದ ನಾಯಕರ ವಿರುದ್ಧ ಅದರಲ್ಲೂ ಮುಖ್ಯಮಂತ್ರಿಗಳ ಮೇಲಂತೂ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಆದರೆ ಸೋಮವಾರ ದಿನವಿಡೀ ದೆಹಲಿಯಲ್ಲಿ ಯಡಿಯೂರಪ್ಪನವರ ಓಡಾಟದಲ್ಲಿ ಆತ್ಮವಿಶ್ವಾಸ ವ್ಯಕ್ತವಾಯಿತು.

ನಗು ಮೊಗದಲ್ಲಿ ಪಕ್ಷದ ಶಾಸಕರ ಜತೆ ಹರಟುತ್ತಿದ್ದ ಅವರು, ಅದೇ ಅವ್ಯಕ್ತ ಸಂತಸದಲ್ಲೇ ಪ್ರಸುತ್ತ ರಾಜಕೀಯ ವಿದ್ಯಮಾನಗಳ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ತಮ್ಮ ನಾಯಕರಲ್ಲಿ ದಿಢೀರನೇ ಕಾಣಿಸಿಕೊಂಡಿರುವ ಉತ್ಸಾಹ ಕಂಡು ಬಿಜೆಪಿ ಶಾಸಕರು ಹುರುಪುಗೊಂಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾಗಬಹುದು ಎಂಬ ವಿಶ್ವಾಸದ ಮಾತುಗಳು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಜನಪ್ರಿಯತೆ ಸಹಿಸಲು ಸಂಕಷ್ಟ: ಬಿ.ವೈ.ವಿಜಯೇಂದ್ರ
ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ತಿಂಗಳಲ್ಲಿ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ