ಒಂಟಿ ವೃದ್ಧೆಯರ ಸುರಕ್ಷತೆಗೆ ಪೊಲೀಸರ ಹೊಸ ಪ್ಲಾನ್: ಮನೆ ಮಗನಂತೆ ರಕ್ಷಣೆ ನೀಡಲು ಇಲಾಖೆ ಸಜ್ಜು, ಏನಿದು ಹೊಸ ಯೋಜನೆ?

Kannadaprabha News, Ravi Janekal |   | Kannada Prabha
Published : Feb 18, 2026, 06:36 AM IST
Karnataka Police Launch Initiative to Collect Data on Elderly Women Living Alone for Safety

ಸಾರಾಂಶ

Aasare scheme for elderly women: ಒಂಟಿ ವೃದ್ಧೆಯರ ರಕ್ಷಣೆಗೆ ಪೊಲೀಸ್ ಇಲಾಖೆಯ 'ಆಸರೆ' ಯೋಜನೆ. ಚಳ್ಳಕೆರೆಯಲ್ಲಿ ಪೊಲೀಸರು ಮನೆ ಮನೆಗೆ ಭೇಟಿ ನೀಡಿ ಹೇಗೆ ಧೈರ್ಯ ತುಂಬುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ತಿ

ಚಳ್ಳಕೆರೆ (ಫೆ.18): ರಾಜ್ಯದ ವಿವಿಧ ಭಾಗಗಳಲ್ಲಿ ಯಾರ ಆಸರೆಯೂ ಇಲ್ಲದೆ ಒಬ್ಬಂಟಿಯಾಗಿ ವಾಸಿಸುವ ಮಹಿಳೆ, ವೃದ್ಧರನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿ ದೈರ್ಯ ತುಂಬುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ.

ರಾಜ್ಯದಲ್ಲಿ ಇತ್ತೀಚೆಗೆ ಒಂಟಿ ವೃದ್ಧೆಯರ ಮೇಲೆ ನಡೆಯುವ ದೌರ್ಜನ್ಯ, ಕೊಲೆ ಪ್ರಕರಣಗಳಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಇಂತಹವರಿಗೆ ನೆರವು ನೀಡಲು ಮುಂದಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು ನಿರ್ದೇಶನದಂತೆ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ತೆರಳಿ ಒಂಟಿ ವೃದ್ಧರು, ಮಹಿಳೆಯರು ವಾಸಿಸುತ್ತಿರುವ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿಯನ್ನು ಪಡೆಯಲಾಗುತ್ತಿದೆ. ಠಾಣಾ ವೃತ್ತ ನಿರೀಕ್ಷಕ ಕೆ.ಕುಮಾರ್ ನಿರ್ದೇಶನದಂತೆ, ಒಂಟಿ ಮಹಿಳೆಯರಿಗಾಗಿ ರೂಪಿತವಾದ ಆಸರೆ ಯೋಜನೆಯಡಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದ ಒಂಟಿ ಮಹಿಳೆಯರು ಮನೆಗೆ ತೆರಳಿ ದಾಖಲೆಗಳನ್ನು ಮಾಡಿಕೊಂಡು ಅವರಿಗೆ ಜಾಗೃತಿಯಿಂದ ಇರುವಂತೆ ಮಾಹಿತಿ ನೀಡಿ, ಯಾವುದೇ ಸಂದರ್ಭದಲ್ಲಿ ಯಾವುದೇ ಸಹಾಯವನ್ನು ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದೆ.

ನಗರದ ಬಳ್ಳಾರಿ ರಸ್ತೆಯ ಅಭಿಷೇಕ್ ನಗರದಲ್ಲಿ ವಾಸಿಸುತ್ತಿರುವ ಒಂಟಿ ವೃದ್ಧೆಯ ಮನೆಗೆ ಭೇಟಿ ನೀಡಿ ಠಾಣಾ ಮುಖ್ಯಪೇದೆ ವಸಂತಕುಮಾರ್ ವೃದ್ಧೆಯಿಂದ ಸಾಕಷ್ಟು ಮಾಹಿತಿ ಪಡೆದು, ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಪೊಲೀಸ್ ಇಲಾಖೆ ಇಂತಹ ಸಂದರ್ಭದಲ್ಲಿ ರಕ್ಷಣೆ ಕೊಡಲು ನಿರ್ಧರಿಸಿದ್ದು, ಮಾಹಿತಿ ಪಡೆದು ಸಹಕರಿಸುವಂತೆ ಸೂಚಿಸಿದ್ದಾರೆ. ನೆರೆಹೊರೆಯಲ್ಲಿ ವಾಸಿಸುವ ಎಲ್ಲರೂ ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶತ ಶತಮಾನಗಳಿಂದ ಎಸ್‌ಸಿ, ಎಸ್‌ಟಿಯವರಿಗೆ ಸರ್ಕಾರಗಳಿಂದ ಅನ್ಯಾಯ: ವಿಎಸ್ ಉಗ್ರಪ್ಪ
Karnataka heritage wrestling: ರಾಜ್ಯದಲ್ಲಿ 10 ವರ್ಷದಲ್ಲಿ 2000 ಗರಡಿಮನೆ ಕಣ್ಮರೆ!