
ಬೆಂಗಳೂರುು(ಆ.11) ಸಂತೋಷ್ ಹಾಗೂ ಐಶ್ವರ್ಯ ದಂಪತಿಗೆ ಇಡೀ ಕರುನಾಡು ಜನತೆ ಸ್ಪಂದಿಸಿದ್ದಾರೆ. ಆರೋಗ್ಯ ಸಮಸ್ಯೆ ಹಾಗೂ ನೆರವಿನ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ವರದಿ ಪ್ರಸಾರವಾದ ಬೆನ್ನಲ್ಲೇ ಜನರು ಸಂತೋಷ್ ಚಿಕಿತ್ಸೆಗೆ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ 5.8 ಲಕ್ಷ ರೂಪಾಯಿಗೂ ಅಧಿಕ ಹಣ ಖಾತೆಗೆ ಜಮೆ ಆಗಿದೆ. ಸಮಾಜದ ತಪ್ಪುಗಳನ್ನು ತಿದ್ದುವ, ನಿರ್ಲಕ್ಷ್ಯ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಜೊತೆಗೆ, ಅಗತ್ಯವಿರುವರಿಗೆ ನೆರವು ನೀಡುವ ಕಾರ್ಯದಲ್ಲಿ ಬಿಗ್3 ಕಾರ್ಯ ಕನ್ನಡ ಮಾಧ್ಯಮದಲ್ಲೇ ಐತಿಹಾಸಿಕ ಕಾರ್ಯಕ್ರಮ. ಇದೀಗ ಸಂತೋಷ್ ಕಿಡ್ನಿ ಕಸಿ ಚಿಕಿತ್ಸೆಗೂ ಬಿಗ್3 ಸ್ಪಂದಿಸಿದೆ. ಇಂದು ಸಂಜೆ ವೇಳೆಗೆ 5.86 ಲಕ್ಷ ರೂಪಾಯಿ ಖಾತೆಗೆ ಜಮೆ ಆಗಿದೆ.
ಸಂತೋಷ್ ಹಾಗೂ ಐಶ್ವರ್ಯ 2016ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಅಂತರ್ಜಾತಿ ವಿವಾಹದ ಕಾರಣ ಯಾರ ನೆರವು ಈ ಕುಟುಂಬಕ್ಕೆ ಇಲ್ಲದಾಗಿದೆ. ಇದೀಗ ಪತ್ನಿ ಐಶ್ವರ್ಯ ಗಂಡನ ಉಳಿಸಿಕೊಳ್ಳಲು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಇವರ ನೋವಿಗೆ ಬಿಗ್3 ಧನಿಯಾಗಿದೆ. 2019ರಿಂದ ಪತಿ ಸಂತೋಷ್ ಆಸ್ಪತ್ರೆ ಸೇರಿದ್ದಾರೆ. ಪತಿಯನ್ನು ಉಳಸಿಕೊಳ್ಳಲು ಈ ಹಿಂದೆ ಏಷ್ಯಾನೆಟ್ ಸುವರ್ಣನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಆಗಿರೋ ಜಯಪ್ರಕಾಶ್ಶೆಟ್ಟಿ ಅವರು 50 ಸಾವಿರ ನೆರವು ನೀಡಿದ್ದರು. ಆದರೆ ಸಂತೋಷ್ ಆರೋಗ್ಯ ಹದಗೆಡುತ್ತಾ ಹೋದ ಕಾರಣ ನೆರವು ಸಾಕಾಗಲಿಲ್ಲ. ಸಿಎಂ ಬಳಿಯೂ ಬಿಗ್3 ತಂಡ ನೆರವು ಕೇಳಿತ್ತು. ಈ ವೇಳೆ 3 ಲಕ್ಷ ರೂಪಾಯಿ ಸಹಾಯಧನ ಸಿಕ್ಕಿತ್ತು.
ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!
ಕಿಡ್ನಿ ಕಸಿಗೆ 15 ಲಕ್ಷ ರೂಪಾಯಿಗೂ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇದಕ್ಕಾಗಿ ಪತ್ನಿ ಎಲ್ಲಾ ಕಡೆ ಅಲೆದಾಡಿದ್ದಾರೆ. ಈಗಾಗಲೇ ಬಿಗ್3 ಮುಂದಾಳತ್ವದಿಂದ ಎಲ್ಲರ ನೆರವಿನಿಂದ ಅರ್ಧದಷ್ಟು ದುಡ್ಡು ಬಂದಿದೆ. ಇನ್ನರ್ಧ ದುಡ್ಡಿಗೆ ಬಿಗ್-3 ಮನವಿ ಮಾಡಿತ್ತು. ಈ ಮನವಿಗೆ ಓಗೋಟ್ಟ ಕರ್ನಾಟಕದ ಜನ, ನರೆವಿನ ಹಸ್ತ ಚಾಚಿದ್ದಾರೆ. ಸಂತೋಷ್ ಶಸ್ತ್ರಚಿಕಿತ್ಸೆಗೆ ನೆರವಾಗಲು ಬಯಸುವವರು ಇಲ್ಲಿ ಉಲ್ಲೇಖಿಸಿದ ಖಾತೆಗೆ ನೆರವು ನೀಡಬಹುದು.
ಸಂತೋಷ್ ಆರ್
ಫೆಡರಲ್ ಬ್ಯಾಂಕ್, ಬೆಂಗಳೂರು
ಖಾತೆ ಸಂಖ್ಯೆ: 21630100077964
ಗೂಗಲ್ ಪೇ ಹಾಗೂ ಫೋನ್ ಪೇ ನಂಬರ್:
9844022608
ಸಂತೋಷ್ ಹಾಗೂ ಐಶ್ವರ್ಯ ದಂಪತಿ ಶಸ್ತ್ರಚಿಕಿತ್ಸೆ ಜೊತೆಗೆ ಅವರ ಖಾತೆಯಲ್ಲಿ ಒಂದಿಷ್ಟು ಹಣ ಇರುವಂತಾಗಲಿ ಅನ್ನೋದು ಬಿಗ್3 ಆಶಯ. ಇದರಂತೆ ಕನ್ನಡಿಗರು ನೆರವಿನ ಹಸ್ತ ಚಾಚಿದ್ದಾರೆ. ಸಂತೋಷ್ ಪತ್ನಿ ಸತತ ಪ್ರಯತ್ನ ಇದೀಗ ಕೈಗೂಡುತ್ತಿದೆ. ಐಶ್ವರ್ಯ ಸತತ ಹೋರಾಟ, ದೇವರ ಪ್ರಾರ್ಥನೆ ಫಲಿಸಿದೆ. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಗೆ ದೇವರ ಮೊರೆ ಹೋಗಿದ್ದಾರೆ.
ನಂದಿಹಳ್ಳಿ ಗ್ರಾಮದ ಜನರ ಕನಸು ನನಸು, ಮನೆ ಮನೆಗೂ ಬಂತು ನೀರು..!
2019ರಲ್ಲಿ ಮೂತ್ರದ ಸೋಂಕು ಎಂದು ಆಸ್ಪತ್ರೆ ದಾಖಲಾಗಿದ್ದ ಸಂತೋಷ್‌ಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಹೋಯಿತು. 2019ರಿಂದ ಆಸ್ಪತ್ರೆಯಲ್ಲಿ ಜೀವನ ದೂಡುವಂತಾಯಿತು. ಆರಂಭದಲ್ಲಿ ಕಿಡ್ನಿ ಆಪರೇಶನ್ ಎಂದುಕೊಂಡಿದ್ದ ಪತ್ನಿ ಐಶ್ವರ್ಯಕ್ಕೆ ಕಿಡ್ನಿ ಕಸಿ ಎಂದಾಗ ಜಂಗಾಬಲವೇ ಉಡುಗಿ ಹೋಗಿತ್ತು. ನೇರವಾಗಿ ಬಿಗ್3 ಬಳಿ ಬಂದ ಐಶ್ವರ್ಯ ನೆರವಿಗೆ ಮತ್ತೊಮ್ಮೆ ಮನವಿ ಮಾಡಿದ್ದರು. ಸಂತೋಷ್ ಕಿಡ್ನಿ ವೈಫಲ್ಯವಾಗಿದೆ. ಇದೀಗ ಕಿಡ್ನಿ ಕಸಿ ಮೂಲಕ ಸಂತೋಷ್ ಶಸ್ತ್ರಚಿಕಿತ್ಸೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ