
ಬೆಂಗಳೂರು (ಜು.31): ನಾಳೆಯಿಂದ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3ರಂತೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀ. ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಇದೀಗ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು ಮತ್ತು ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆಯೇ ನಾಳೆಯಿಂದ ಪ್ರತಿ ಲೀಟರ್‌ನ ಹಾಲಿನ ದರ ಹೆಚ್ಚಳವಾಗಲಿದೆ.ಅದ್ಯಾಗೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್‌ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆಯಾಗಿದೆ.
ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ತಿಂಡಿ-ತಿನಿಸು ದರ ಏರಿಕೆ
ಯಾವ ಯಾವ ಪ್ಯಾಕೇಜ್ ಹಾಲು ಎಷ್ಟಿದೆ ಈಗ ಎಷ್ಟಾಗಲಿದೆ?
ಹಾಲು ಬೆಲೆ ಎಷ್ಟು
ಸಮೃದ್ದಿ ಹಾಲು 48 ರಿಂದ 51
ಸ್ಪೆಷಲ್ ಹಾಲು 43 ರಿಂದ 46
ಸಂತೃಪ್ತಿ ಹಾಲು 50 ರಿಂದ 53
ಶುಭಂ ಹಾಲು 43 ರಿಂದ 46
ಟೋನ್ಡ್ ಹಾಲು 37 ರಿಂದ 40
ಡಬಲ್ಟೋನ್ಡ್ ಹಾಲು 36 ರಿಂದ 39
ಹೊಮೋಜಿನೈಸ್ಡ್ 38 ರಿಂದ 41
ಹೊಮೋಜಿನೈಸ್ಡ್ 42 ರಿಂದ 45
( ಹಸುವಿನ ಹಾಲು)
ಹಾಲು, ಆಲ್ಕೋಹಾಲಿನ ದರ ಏರಿಕೆಗೆ ಕುಮಾರಸ್ವಾಮಿ ಕಿಡಿ
ಕಾಫಿ, ಟೀ ಪ್ರಿಯರಿಗೆ ಶಾಕ್
ಕಳೆದ ಜುಲೈ 22ರಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಚಿವ ಸಂಪುಟ ಸಭೆಯಲ್ಲೂ ಹಾಲಿನ ದರ ಏರಿಕೆಗೆ ಅನುಮೋದನೆ ನೀಡಲಾಗಿತ್ತು.ಹೀಗಾಗಿ ನಾಳೆಯಿಂದ ಹಾಲಿನದರ 3ರೂ ಹೆಚ್ಚಳ ಮಾಡಲು ನಿರ್ಧರಿಸಿರುವ ಸರ್ಕಾರ.
ಹಾಲಿನ ದರ ಹೆಚ್ಚಳ ಹಿನ್ನೆಲೆ ಕಾಫಿ-ಟೀ ಬೆಲೆಯೂ ಹೆಚ್ಚಳವಾಗಲಿದ್ದು ಪ್ರಿಯರ ನಾಲಗೆ ಸುಡಲಿದೆ. ಹೋಟೆಲ್ ಕಾಫಿ ಟೀ ದರದಲ್ಲಿ 1% ದರ ಹೆಚ್ಚಿಸಲು ನಿರ್ಧಿರಿಸಿರುವ ಹೋಟೆಲ್ ಮಾಲೀಕರ ಸಂಘ. ಇದು ನಾಳೆಯಿಂದಲೇ ದರ ಅನ್ವಯವಾಗಲಿದ್ದು, ಕಾಫಿ- ಟೀ ಬೆಲೆಯಿಂದ ಗ್ರಾಹಕರ ಜೇಬಿಗೆ ಬಿಸಿ ತಟ್ಟಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ