ಬೆಂಗಳೂರಿನಿಂದ ಕೇರಳದ ಮಲ್ಲಪುರಂಗೆ ಹೊರಟಿದ್ದ ಕಾರಿನ ಮೇಲೆ 15 ದರೋಡೆಕೋರರು ದಾಳಿ ನಡೆಸಿ .4.5 ಕೋಟಿ ನಗದನ್ನು ದರೋಡೆ ಮಾಡಿದ ಘಟನೆ ಶನಿವಾರ ಕೇರಳದ ಪಾಲಕ್ಕಾಡ್ ಸಮೀಪ ನಡೆದಿದೆ.
ಪಾಲಕ್ಕಾಡ್ (ಜು.31): ಬೆಂಗಳೂರಿನಿಂದ ಕೇರಳದ ಮಲ್ಲಪುರಂಗೆ ಹೊರಟಿದ್ದ ಕಾರಿನ ಮೇಲೆ 15 ದರೋಡೆಕೋರರು ದಾಳಿ ನಡೆಸಿ .4.5 ಕೋಟಿ ನಗದನ್ನು ದರೋಡೆ ಮಾಡಿದ ಘಟನೆ ಶನಿವಾರ ಕೇರಳದ ಪಾಲಕ್ಕಾಡ್ ಸಮೀಪ ನಡೆದಿದೆ.
ರಾತ್ರಿ ಸುಮಾರು 3 ಗಂಟೆ ವೇಳೆಗೆ ಇಲ್ಲಿನ ಪುಥುಸೆರಿ ಸಮೀಪ ದರೋಡೆಕೋರರು ಸಿನಿಮೀಯ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಡುವೆ ಲಾರಿಯನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದಿದ್ದಾರೆ. ಕಾರು ನಿಂತ ಬಳಿಕ ಕಳ್ಳರ ಗುಂಪು, ಕಾರಿನ ಮೇಲೆ ದಾಳಿ ನಡೆಸಿದೆ. ಇವರೊಂದಿಗೆ ಹಿಂಬದಿಯಿಂದ ಬಂದ ಮತ್ತೊಂದು ತಂಡ ಕಾರಿನಲ್ಲಿದ್ದ ಜನರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು .4.5 ಕೋಟಿ ನಗದನ್ನು ಲೂಟಿ ಹೊಡೆದು ಅವರನ್ನು ತ್ರಿಶೂರ್ ಸಮೀಪ ನಡು ರಸ್ತೆಯಲ್ಲಿ ಬಿಸಾಡಿಹೋಗಿದ್ದಾರೆ.
ಹಣ ಡ್ರಾ ಮಾಡುವಾಗ ಎಚ್ಚರ...ಎಚ್ಚರ !: ಮಹಿಳೆ ಬಳಿ ಇದ್ದ 1 ಲಕ್ಷ ಲೂಟಿ, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಇದಾದ ಬಳಿಕ ಬೆಂಗಳೂರಿನಿಂದ ಹೊರಟ ಜನರು ಹತ್ತಿರದ ಕಸಬಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದರೋಡೆಕೋರರು ನಕಲಿ ನೋಂದಣಿ ಫಲಕವನ್ನು ಅಳವಡಿಸಿಕೊಂಡು ಕೃತ್ಯ ಎಸಗಿದ್ದಾಗಿ ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ಜಾರಿಯಲ್ಲಿದೆ.
ಕುವೈತ್‌ನಿಂದ ಬಂದನವ ಪರ್ಸಲ್ಲಿ 273 ಗ್ರಾಂ ಚಿನ್ನ
ಬೆಂಗಳೂರು (ಜು.31): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
Hassan: ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರನ ಬಂಧನ
ಬಂಧಿತನಿಂದ .15.51 ಲಕ್ಷ ಮೌಲ್ಯದ 273 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಿದ್ದಾರೆ. ಆರೋಪಿ ಕಳೆದ ಶುಕ್ರವಾರ ಕುವೈತ್‌ನಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿದ್ದ. ಈ ವೇಳೆ ಅನುಮಾನಾಸ್ಪದವಾಗಿ ಕಂಡು ಬಂದ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ಮಾಡಿದಾಗ, ರೋಲಿಂಗ್ ಪಿನ್, ಚಾಕು, ಕೈ ಚೀಲದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.