ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ 23 ರೋಪಿಗಳ ಆರೋಪ ಸಾಬೀತು..!

Published : Mar 11, 2025, 06:10 PM ISTUpdated : Mar 11, 2025, 06:40 PM IST
ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ 23 ರೋಪಿಗಳ ಆರೋಪ ಸಾಬೀತು..!

ಸಾರಾಂಶ

2017ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 23 ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಮರಳು ದಂಧೆಕೋರನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಕೃತ್ಯ ಎಸಗಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 24 ರಂದು ಪ್ರಕಟಿಸಲಾಗುವುದು.

ಗದಗ (ಮಾ.11) : 2017ರ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣದ 23 ಆರೋಪಿಗಳ ಆರೋಪ ಸಾಬೀತಾಗಿರುವ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಹತ್ವದ ತೀರ್ಪು ಪ್ರಕಟಿಸಿದೆ. 

ರಾಜ್ಯವೇ ಬೆಚ್ಚಿಬಿದ್ದಿದ್ದ ಪ್ರಕರಣಕ್ಕೆ ಎಂಟು ವರ್ಷದ ನಂತರ ಜಡ್ಜ್‌ಮೆಂಟ್ ಬಂದಂತಾಗಿದೆ. ಶಿಕ್ಷೆ ಪ್ರಮಾಣವನ್ನ ಇದೇ ತಿಂಗಳು 24 ತಾರೀಕು ತಿಳಿಸಲಾಗುವುದು ಅಂತಾ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ದೊಡ್ಡಗೌಡರ್ ತಿಳಿಸಿದ್ರು.

ಏನಿದು ಪ್ರಕರಣ?

ಮರಳು ದಂಧೆಕೋರನ ಮೇಲೆ‌ ಪೊಲೀಸರು ಹಲ್ಲೆ ಮಾಡಿದ್ದಾರೆ ಆಂತಾ ಆರೋಪಿಸಿ ನಡೆದಿದ್ದ ವಿದ್ವಂಸಕ‌ಕೃತ್ಯ ಇದಾಗಿದ್ದು, ಪೊಲೀಸ್ ಠಾಣೆ, ಪೊಲೀಸರನ್ನ ಗುರಿಯಾಗಿಸಿಕೊಂಡು ಈ ಗಲಾಟೆ ನಡೆದಿತ್ತು. ಪ್ರಕರಣದಲ್ಲಿ 112 ಜನರ ವಿರುದ್ಧ ಪೊಲೀಸರು‌ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ಸಂಬಂಧ 23 ಜನರು ದೋಷಿಗಳೆಂದು ತೀರ್ಪುಕೊಟ್ಟಿದೆ. ಸಾರ್ವಜನಿಕರ ಸಹಕಾರ ಸಿಕ್ಕಿದ್ದಲ್ಲಿ ಪ್ರಕರಣದ 112 ಜನರಿಗೂ ಶಿಕ್ಷೆಯಾಗುತ್ತಿತ್ತು. 24 ನೇ ತಾರೀಕು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳೋದಾಗಿ  ತಿಳಿಸಿದ್ದಾರೆ.

ಇದನ್ನೂ ಓದು: ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರ; 'ಇದು ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ' ಪ್ರಹ್ಲಾದ್ ಜೋಶಿ ಕಿಡಿ

ಇದನ್ನೂ ಓದಿ:

ಎಂಟು ವರ್ಷ ನಡೆದು ಸುಧೀರ್ಘ ವಿಚಾರಣೆ ಬಗ್ಗೆ ತಿಳಿಸಿದ ಅವರು, ಆರೋಪಿಗಳ ಸಂಖ್ಯೆ ಹೆಚ್ಚಾಗಿದ್ದು, ಮಧ್ಯ ಕೋವಿಡ್ ಬಂದಿರೋದ್ರಿಂದ ಕೇಸ್ ತಡವಾಗಿದೆ. 2023 ರಿಂದ ವಿಚಾರಣೆ ನಡೀತಿತ್ತು ಹೀಗಾಗಿ ಸರಿಯಾದ ಸಮಯಕ್ಕೆ ಕೇಸ್ ಇತ್ಯರ್ಥವಾಗಿದೆ ಎಂದುಕೊಂಡಿದ್ದೇನೆ ಅಂತಾ ಸರ್ಕಾರದ ಪರ ವಾದ ಮಂಡಿಸಿದ್ದ ಪಬ್ಲಿಕ್ ಪ್ರೊಸಿಕ್ಯೂಟರ್ ಮಲ್ಲಿಕಾರ್ಜುನಗೌಡ ದೊಡ್ಡಗೌಡರ್ ಮಾಹಿತಿ ನೀಡಿದ್ರು.

2017ರ ಫೆ. 5ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ

ಬಟ್ಟೂರು ಗ್ರಾಮದ ಚಾಲಕ ಶಿವಪ್ಪ ಡೋಣಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಅಂತಾ ಆತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ರಂತೆ. ಘಟನೆಯಲ್ಲಿ ಶಿವಪ್ಪ ಮೃತಪಟ್ಟಿದ್ದ. ಇದ್ರಿಂದ ಆಕ್ರೋಶಗೊಂಡಿದ್ದ ಕೆಲವರು ಆಸ್ಪತ್ರೆಯಿಂದ ಶವ ತಂದು ಪೊಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸೋದಕ್ಕೆ ಮುಂದಾಗಿದ್ರು. 

ಇದನ್ನೂ ಓದಿ: ಉದಯಗಿರಿ ಪ್ರಕರಣ: ಮೌಲ್ವಿ ಗಡಿಪಾರು ಮಾಡದೇ, ಸತೀಶ್‌ರನ್ನ ಗಡಿಪಾರು ಹೇಗೆ ಮಾಡ್ತೀರಾ?: ಪೊಲೀಸರ ನಡೆ ವಿರುದ್ಧ ಮುತಾಲಿಕ್ ಆಕ್ರೋಶ

ಪ್ರತಿಭಟನೆಯ ಕಾವು ಹೆಚ್ಚಾಗಿ ರೊಚ್ಚಿಗೆದ್ದ ಜನರಿಂದ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿತ್ತು.. ಗಲಾಟೆ ವೇಳೆ ಪೊಲೀಸ್ ಠಾಣೆಯಲ್ಲಿದ್ದ ಪೀಠೋಪಕರಗಳು, ಪೊಲೀಸ್ ಜೀಪ್, ಹತ್ತಾರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೇ ಪೊಲೀಸ್ ಠಾಣೆಯಲ್ಲಿದ್ದ ಮೂವರು ಸಿಬ್ಬಂದಿಯನ್ನ ಅಟ್ಟಾಡಿಸಲಾಗಿತ್ತು. ಉದ್ವಿಗ್ನಗೊಂಡಿದ್ದ ಲಕ್ಷ್ಮೇಶ್ವರಕ್ಕೆ ಆಗಿನ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ರು. 

ಪ್ರಕರಣಕ್ಕೆ ಸಂಬಂದಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ 112 ಜನರ ಮೇಲೆ ಪ್ರಕರಣ ದಾಖಲಾಗಿತ್ತು. 112 ಜನರ ಪೈಕಿ 8 ಜನರು ಮೃತಪಟ್ಟಿದ್ದು, ಓರ್ವ ಬಾಲಪರಾಧಿಯಾಗಿದ್ದಾನೆ. ಉಳಿದ 103 ಜನರ ಮೇಲೆ ತನಿಖೆ ನಡೆಸಲಾಗಿದ್ದು, ಅದರಲ್ಲಿ ಸದ್ಯ 23 ಜನರ ಆರೋಪ ಸಾಬೀತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !